Just In
Don't Miss!
- News
ಹಲ್ವಾ ಸಮಾರಂಭದೊಂದಿಗೆ ಅಂತಿಮ ಹಂತದಲ್ಲಿ ಬಜೆಟ್ 2021
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೊಹ್ಲಿಯನ್ನ ತಬ್ಬಿಕೊಂಡ ನಟಿ ಊರ್ವಶಿ: ನಿನ್ನ ಅನುಷ್ಕಾ ಸಾಯಿಸ್ತಾಳೆ.!
ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯನ್ನ ಸಾರ್ವಜನಿಕವಾಗಿ ತಬ್ಬಿಕೊಂಡಿರುವ ಫೋಟೋವನ್ನ ಬಾಲಿವುಡ್ ನಟಿ ಊರ್ವಶಿ ರೌಟೇಲಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರೋದು, ಭಾರಿ ಚರ್ಚೆಗೆ ಕಾರಣವಾಗಿದೆ.
ಕೊಹ್ಲಿ ಜೊತೆ ಊರ್ವಶಿಯನ್ನ ನೋಡಿ ವಿರಾಟ್ ಪತ್ನಿ ನಟಿ ಅನುಷ್ಕಾ ಶರ್ಮಾ ಉರಿದು ಬಿದ್ದಿರುತ್ತಾರೆ. ಪಕ್ಕಾ ಊರ್ವಶಿಯನ್ನ ಅನುಷ್ಕಾ ಸಾಯಿಸ್ತಾಳೆ ಎಂದು ನೆಟ್ಟಿಗರು ಟ್ರೋಲ್ ಮಾಡ್ತಿದ್ದಾರೆ.
ಅಂದ್ಹಾಗೆ, ಊರ್ವಶಿ ರೌಟೇಲಾ ಕೊಹ್ಲಿಯನ್ನ ಅಪ್ಪಿಕೊಂಡಿರುವುದು ನಿಜ ಜೀವನದಲ್ಲಿ ಅಲ್ಲ. ವಿಶ್ವಕಪ್ ಟೂರ್ನಿಗೂ ಮುಂಚೆ ಲಂಡನ್ ನಲ್ಲಿ ಕೊಹ್ಲಿಯ ಮೇಣದ ಪ್ರತಿಮೆ ಮಾಡಲಾಗಿತ್ತು. ಈ ಮೇಣದ ಪ್ರತಿಮೆಯ ಪಕ್ಕ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿರುವ ಊರ್ವಶಿ, ಕೊಹ್ಲಿ ಹೆಗಲ ಮೇಲೆ ಕೈಹಾಕಿ ತಬ್ಬಿಕೊಂಡಿದ್ದಾರೆ.
ಯುವರಾಜ್ ಸಿಂಗ್ ನಿವೃತ್ತಿ ಬಗ್ಗೆ ವಿರಾಟ್ ಪತ್ನಿ ಹೇಳಿದ್ದೇನು?
ಭಾರತ ಮತ್ತು ಪಾಕಿಸ್ತಾನ ಪಂದ್ಯ ವೀಕ್ಷಣೆಗೆಂದು ಇಂಗ್ಲೆಂಡ್ ಗೆ ಹೋಗಿದ್ದ ಊರ್ವಶಿ, ಕೊಹ್ಲಿ ಮೇಣದ ಪ್ರತಿಮೆ ಜೊತೆ ಫೋಟೋ ತೆಗೆಸಿಕೊಂಡಿದ್ದರು. ಈ ಫೋಟೋಗೆ ಕಾಮೆಂಟ್ ಮಾಡುತ್ತಿರುವ ನೆಟ್ಟಿಗರು, ಇದನ್ನ ನೋಡಿ ಅನುಷ್ಕಾ ಶರ್ಮಾ ಎಕ್ಸ್ ಪ್ರೆಶನ್ ಹೇಗಿರಬಹುದು ಎಂದು ಊಹಿಸುತ್ತಿದ್ದಾರೆ.
ಕೊಹ್ಲಿ ಜೊತೆ ತಮನ್ನಾ ಡೇಟಿಂಗ್ ಮಾಡಿದ್ರಾ? ವರ್ಷಗಳ ನಂತರ ಮಿಲ್ಕಿ ಬ್ಯೂಟಿ ಟಾಕ್
ವಿಶೇಷ ಅಂದ್ರೆ, ಊರ್ವಶಿ ರೌಟೇಲಾ ಕನ್ನಡದಲ್ಲೂ ಸಿನಿಮಾ ಮಾಡಿದ್ದಾರೆ. ದರ್ಶನ್ ಅಭಿನಯಿಸಿದ್ದ ಮಿಸ್ಟರ್ ಐರಾವತ ಸಿನಿಮಾದ ನಾಯಕಿ ಇದೇ ಊರ್ವಶಿ. ಈ ಚಿತ್ರದ ಬಳಿಕವಷ್ಟೇ ಬಾಲಿವುಡ್ ನಲ್ಲಿ ಹೆಚ್ಚು ಬ್ಯುಸಿ ಆದರು.