For Quick Alerts
  ALLOW NOTIFICATIONS  
  For Daily Alerts

  ಕಾಂಗ್ರೆಸ್ ಶಾಸಕನ ಬಗ್ಗೆ ಯೂಟ್ಯೂಬರ್ ಮಾತು: ಕಿಡಿಕಾರಿದ ಬಾಲಿವುಡ್ ನಟರು

  |

  'ಪರಾಸ್ ಅಫಿಷಿಯಲ್' ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ ಕಾಂಗ್ರೆಸ್ ಶಾಸಕ ನಿನಾಂಗ್ ಎರಿಂಗ್ ಹಾಗೂ ಅರುಣಾಚಲ ಪ್ರದೇಶ ರಾಜ್ಯದ ಬಗ್ಗೆ ಕೆಟ್ಟದಾಗಿ ಮಾತನಾಡಿರುವುದನ್ನು ಬಾಲಿವುಡ್ ನಟರಾದ ವರುಣ್ ಧವನ್ ಹಾಗೂ ರಾಜ್‌ಕುಮಾರ್ ರಾವ್ ಹಾಗೂ ಇನ್ನಿತರ ಬಾಲಿವುಡ್ ಸೆಲೆಬ್ರಿಟಿಗಳು ಖಂಡಿಸಿದ್ದಾರೆ.

  ಪರಾಸ್ ಸಿಂಗ್ ಅಲಿಯಾನ್ ಬಂಟು ಎಂಬಾತ 'ಪರಾಸ್ ಅಫಿಷಿಯಲ್' ಹೆಸರಿನ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದು, ತನ್ನ ಚಾನೆಲ್‌ನಲ್ಲಿ ಅರುಣಾಚಲ ಪ್ರದೇಶದ ಕಾಂಗ್ರೆಸ್ ಶಾಸಕ ಮಾಜಿ ಕೇಂದ್ರ ಮಂತ್ರಿ ನಿನಾಂಗ್ ಎರಿಂಗ್ ಅನ್ನು ದೇಶದ್ರೋಹಿ ಎಂದಿದ್ದಲ್ಲದೆ ತೀರಾ ಕೀಳಾದ ಭಾಷೆ ಬಳಸಿ ಬೈದಿದ್ದಾರೆ.

  ಅದು ಮಾತ್ರವಲ್ಲದೆ ಅರುಣಾಚಲ ಪ್ರದೇಶವು ಭಾರತಕ್ಕೆ ಸೇರಿಲ್ಲ. ಅರುಣಾಚಲ ಪ್ರದೇಶ ಚೀನಾಕ್ಕೆ ಸೇರಿದೆ ಎಂದು ಹೇಳಿ ಉದ್ಧಟತನ ಮೆರೆದಿದ್ದಾನೆ. ಪರಾಸ್‌ನ ಈ ವಿಡಿಯೋ ವೈರಲ್ ಆಗಿದ್ದು, ಅರುಣಾಚಲದ ಸಿಎಂ, ಅಲ್ಲಿನ ಜನರು ಸೇರಿದಂತೆ ದೇಶದ ಹಲವರಿಂದ ತೀವ್ರ ವಿರೋಧಕ್ಕೆ ಗುರಿಯಾಗಿದೆ.

  ಇಂಥಹ ಘಟನೆಯನ್ನು ಸಹಿಸಲಾಗದು: ವರುಣ್ ಧವನ್

  ಇಂಥಹ ಘಟನೆಯನ್ನು ಸಹಿಸಲಾಗದು: ವರುಣ್ ಧವನ್

  ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ವರುಣ್ ಧವನ್, 'ನಿನ್ನದೇ ದೇಶದ ಬಗ್ಗೆ ಮಾಹಿತಿ ಇಲ್ಲದೇ ಇರುವುದು ದಡ್ಡತನ. ಆ ದಡ್ಡತನವನ್ನು, ಮೂರ್ಖತನವನ್ನು ಪ್ರಚೋದನಾತ್ಮಕ ರೂಪದಲ್ಲಿ ಹಂಚಿಕೊಳ್ಳುವುದು ಇನ್ನೂ ವಿಷಕಾರಕ. ಈ ರೀತಿಯ ಮೂರ್ಖತನವನ್ನು ಸಹಿಸಲಾಗುವುದಿಲ್ಲ ಎಂದು ನಾವೆಲ್ಲರೂ ಒಕ್ಕೂರಲಿನಿಂದ ಹೇಳಬೇಕಿದೆ' ಎಂದಿದ್ದಾರೆ.

  ರಾಜ್‌ಕುಮಾರ್ ರಾವ್ ಸಹ ಖಂಡಿಸಿದ್ದಾರೆ

  ರಾಜ್‌ಕುಮಾರ್ ರಾವ್ ಸಹ ಖಂಡಿಸಿದ್ದಾರೆ

  ಮತ್ತೊಬ್ಬ ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಸಹ ಈ ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, 'ಇಂಥಹಾ ಘಟನೆಗಳನ್ನು ಸಹಿಸಿಕೊಳ್ಳಬಾರದು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು' ಎಂದಿದ್ದಾರೆ. ಬಾಲಿವುಡ್ ನಿರ್ದೇಶಕ ಅಮರ್ ಕೌಶಿಕ್ ಸಹ ಯೂಟ್ಯೂಬರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಿಡಿ ಕಾರಿದ್ದಾರೆ.

  ಪಬ್‌ಜೀ ಬ್ಯಾನ್‌ ಮಾಡುವಂತೆ ಪತ್ರ ಬರೆದಿದ್ದ ಶಾಸಕ

  ಪಬ್‌ಜೀ ಬ್ಯಾನ್‌ ಮಾಡುವಂತೆ ಪತ್ರ ಬರೆದಿದ್ದ ಶಾಸಕ

  ಅರುಣಾಚಲ ಪ್ರದೇಶ ಕಾಂಗ್ರೆಸ್ ಶಾಸಕ ನಿನಾಂಗ್ ಎರಿಂಗ್, ಪಬ್‌ಜೀಯು ಬ್ಯಾಟಲ್‌ ಗ್ರೌಂಡ್ಸ್ ಆಫ್ ಇಂಡಿಯಾ ಹೆಸರಿನಲ್ಲಿ ಮರಳಿ ಬರುತ್ತಿದ್ದು ಅದನ್ನೂ ಸಹ ಬ್ಯಾನ್ ಮಾಡಬೇಕು ಎಂದು ಮೋದಿಗೆ ಪತ್ರ ಬರೆದಿದ್ದರು. ಇದೇ ವಿಷಯವಾಗಿ ಮಾತನಾಡಿದ್ದ ಪರಾಸ್ ಸಿಂಗ್ ಬಹಳ ಕೆಟ್ಟ ಭಾಷೆಯಲ್ಲಿ ಶಾಸಕರನ್ನು ಬೈದಿದ್ದ ಹಾಗೂ ಅರುಣಾಚಲ ಪ್ರದೇಶ ಚೈನಾಕ್ಕೆ ಸೇರಿದ್ದು ಎಂದಿದ್ದ.

  ಇನ್ಯಾವತ್ತೂ Salman Khan ಸಿನಿಮಾ ವಿಮರ್ಶೆ ಮಾಡೋದಿಲ್ಲ ಎಂದ‌ KRK | Filmibeat Kannada
  ಪರಾಸ್ ಅನ್ನು ಬಂಧಿಸಿರುವ ಪಂಜಾಬ್ ಪೊಲೀಸರು

  ಪರಾಸ್ ಅನ್ನು ಬಂಧಿಸಿರುವ ಪಂಜಾಬ್ ಪೊಲೀಸರು

  ಪರಾಸ್ ಸಿಂಗ್ ಉದ್ಧಟತನವನ್ನು ಗಂಭೀರವಾಗಿ ಪರಿಗಣಿಸಿದ ಅರುಣಾಚಲ ಪ್ರದೇಶ ಸರ್ಕಾರ ಪರಾಸ್ ವಿರುದ್ಧ ದೂರು ದಾಖಲಿಸಿತು. ಅರುಣಾಚಲ ಸಿಎಂ ಸಹ ಈ ಬಗ್ಗೆ ಹೇಳಿಕೆ ನೀಡಿದರು. ಶಾಸಕ ನಿನಾಂಗ್ ಎರಿಂಗ್ ಸಹ ಪ್ರತ್ಯೇಕ ದೂರು ದಾಖಲಿಸಿದರು. ಕೊನೆಗೆ ಪಂಜಾಬ್‌ನ ಲುಧಿಯಾನಾದಲ್ಲಿ ಪರಾಸ್‌ನ ಬಂಧನವಾಗಿದೆ. ಪರಾಸ್‌ ಬಂಧನದ ಬಗ್ಗೆ ಕೇಂದ್ರ ಕ್ರೀಡಾ ಮಂತ್ರಿ ಕಿರಣ್ ರಿಜುಜು ಮಾಹಿತಿ ಹಂಚಿಕೊಂಡಿದ್ದಾರೆ. ಬಂಧನಕ್ಕೊಳಗಾಗುವ ಮುನ್ನ ಪರಾಸ್ ಸಿಂಗ್ ತನ್ನ ಯೂಟ್ಯೂಬ್‌ ಚಾನೆಲ್‌ನಲ್ಲಿ ಕ್ಷಮೆ ಕೇಳಿದ.

  English summary
  Bollywood actors Varun Dhawan and Rajkumar Rao slams you tuber Paras for talking ill about MLA Ninong and State Arunachal Pradesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X