»   » ವೀಣಾ ಮಲಿಕ್ ನಗ್ನ ದೇಹದ ಮೇಲೆ ಅರಳಿದ ಚಿತ್ರಕಲೆ

ವೀಣಾ ಮಲಿಕ್ ನಗ್ನ ದೇಹದ ಮೇಲೆ ಅರಳಿದ ಚಿತ್ರಕಲೆ

By: ವಾಸುಕಿ
Subscribe to Filmibeat Kannada

ನೋಡಲು ಅಂತಹ ಸುರಸುಂದರಿ ಅಲ್ಲದಿದ್ದರೂ, ಸಪೂರವಾಗಿ ಮತ್ತು ದಿವಿನಾಗಿ ಕಾಪಾಡಿಕೊಂಡು ಬಂದಿರುವ ದಂತದ ಮೈಯನ್ನು ಅಚ್ಚುಕಟ್ಟಾಗಿ ಬಳಸಿಕೊಳ್ಳುವ ಕಲೆ ಪಾಕಿಸ್ತಾನದ ನಟಿ ವೀಣಾ ಮಲಿಕ್‌ಗೆ ಸಿದ್ಧಿಸಿದೆ. ಹಿಂದಿ ಚಿತ್ರರಂಗದಲ್ಲಿ ಅಂತಹ ಅವಕಾಶವಿಲ್ಲದಿದ್ದಾಗ, ಕನ್ನಡಕ್ಕೆ ಬಂದು 'ಸಿಲ್ಕ್ - ಸಖತ್ ಹಾಟ್' ಚಿತ್ರದಲ್ಲಿ ಸೈ ಎನಿಸಿಕೊಂಡಿರುವ ವೀಣಾ ಮಲಿಕ್ ಮತ್ತೊಂದು ವಿಶಿಷ್ಟ ರೀತಿಯಲ್ಲಿ ತಮ್ಮ ದೇಹಸಿರಿಯನ್ನು ಪ್ರದರ್ಶಿಸಿದ್ದಾರೆ.

ಕಲೆಗಾಗಿ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಿರುವ ವೀಣಾ ಮಲಿಕ್, ಈ ಬಾರಿ ತಮ್ಮ ಬೆತ್ತಲೆ ದೇಹವನ್ನು ಕ್ಯಾನ್ವಾಸ್ ಆಗಿ ಮಾಡಿಕೊಂಡು ಖ್ಯಾತ ಚಿತ್ರಕಲಾವಿದ ಫಿನ್‌ಲ್ಯಾಂಡ್‌ನ ಕಿವಿನೆನ್ ಅವರಿಗೆ ಸಮರ್ಪಿಸಿಕೊಂಡಿದ್ದಾರೆ. ವೀಣಾ ಮಲಿಕ್ ಅವರ ನಗ್ನ ದೇಹದ ಮೇಲೆ ಯಾವುದೇ ಅಶ್ಲೀಲತೆ ಇಲ್ಲದೆ ಆಧುನಿಕ ಪೇಂಟಿಂಗ್ ಅನಾವರಣಗೊಂಡಿದೆ.

"ಫಿನ್‌ಲ್ಯಾಂಡ್‌ನ ಖ್ಯಾತ ವಿಷುವಲ್ ಕಲಾವಿದ ವೇನಾ ಕಿವಿನೆನ್ ಅವರು ನನಗೆ ಕರೆ ಮಾಡಿ ತಮ್ಮ ಜೊತೆ ಕಲೆಗಾಗಿ ಕೈಜೋಡಿಸಲು ಕೇಳಿಕೊಂಡಿದ್ದರು. ಅವರ ಜೊತೆ ಕೆಲಸ ಮಾಡಿದ್ದು ತುಂಬಾ ಸಂತೋಷ ತಂದಿದೆ. ನಾನು ಕಲೆಯ ಪ್ರೀತಿಗಾಗಿ ಮಾತ್ರ ಈ ಕೆಲಸವನ್ನು ಒಪ್ಪಿಕೊಂಡೆ" ಎಂದು ವೀಣಾ ಮಲಿಕ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಇದು ಆಧುನಿಕ ಕಲೆಯ ಬಲೆ

ವೀಣಾ ಮಲಿಕ್ ಅವರ ಬೆತ್ತಲೆ ದೇಹವನ್ನು ಬಳಸಿಕೊಂಡು ವೇನಾ ಕಿವಿನೆನ್ ಅವರು ಸಾಂಪ್ರದಾಯಿಕ ಚಿತ್ರಕಲೆಯಿಂದ ಹೊರತಾಗಿ, ದಟ್ಟ ಶ್ರೀಮಂತ ಬಣ್ಣಗಳನ್ನು ಬಳಸಿಕೊಂಡು ಐದು ಅದ್ಭುತವಾದ ಆಧುನಿಕ ಚಿತ್ರಕಲೆಯನ್ನು ಅನಾವರಣಗೊಳಿಸಿದ್ದಾರೆ.

ನಗ್ನತೆ ಇದ್ದರೂ ಅಶ್ಲೀಲತೆಗೆ ಅವಕಾಶವಿಲ್ಲ

ವೀಣಾ ಅವರ ಮೈಯನ್ನು ನೀಲಿ ಬಣ್ಣದಿಂದ ಸಂಪೂರ್ಣವಾಗಿ ಮುಚ್ಚಲಾಗಿದ್ದು, ಯಾವುದೇ ಅಶ್ಲೀಲತೆಗೆ ಅವಕಾಶ ನೀಡದಂತೆ ಚಿತ್ರಕಲಾ ಸೌಂದರ್ಯವನ್ನು ಅನಾವರಣ ಮಾಡಲಾಗಿದೆ. ಬಾಹ್ಯ ದೇಹ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ.

ಕಲಾರಸಿಕರು ಇಷ್ಟಪಡ್ತಾರಾ?

ಈ ಚಿತ್ರಕಲೆಯಲ್ಲಿ ಪ್ರಾಚೀನ ಮತ್ತು ಧಾರ್ಮಿಕ ಆಚರಣೆಗಳನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ಬಾಡಿ ಪೇಂಟಿಂಗ್ ಮಾಡಲಾಗಿದೆ. ಕಲಾರಸಿಕರು ಇದನ್ನು ಇಷ್ಟಪಡುತ್ತಾರೆ ಎಂಬ ಅಭಿಪ್ರಾಯವನ್ನು ವೀಣಾ ಮಲಿಕ್ ವ್ಯಕ್ತಪಡಿಸಿದ್ದಾರೆ.

ಲಂಡನ್ನಿನಲ್ಲಿ ಕಲಾಪ್ರದರ್ಶನ

ಈ ಕಲಾಸೌಂದರ್ಯ ಲಂಡನ್ನಿನಲ್ಲಿ ಅನಾವರಣಗೊಳ್ಳಲಿದೆ. ಆರರಲ್ಲಿ ಮೂರು ಚಿತ್ರಗಳು ಇಲ್ಲಿ ಪ್ರದರ್ಶನಗೊಳ್ಳಲಿದ್ದು, ಇದಕ್ಕಾಗಿ ವೀಣಾ ಮಲಿಕ್ ಲಂಡನ್ನಿಗೆ ಹಾರಿದ್ದಾರೆ.

ನಗ್ನರಾಗಿದ್ದು ಇದು ಮೊದಲೇನಲ್ಲ

ತಮ್ಮ ನಗ್ನತೆಯನ್ನು ವೀಣಾ ಮಲಿಕ್ ಅವರು ಕಲೆಗಾಗಿ ತೋರ್ಪಡಿಸಿಕೊಳ್ಳುತ್ತಿರುವುದು ಇದು ಮೊದಲೇನಲ್ಲ. ಕೆಲ ವರ್ಷಗಳ ಹಿಂದೆ, ಎಫ್ಎಚ್ಎಮ್ ನಿಯತಕಾಲಿಕೆಗಾಗಿ ಅವರು ಸಂಪೂರ್ಣ ನಗ್ನರಾಗಿ ಫೋಟೋ ಕ್ಲಿಕ್ಕಿಸಿಕೊಂಡು ವಿವಾದಕ್ಕೀಡಾಗಿದ್ದರು. ಆ ಚಿತ್ರದಲ್ಲಿ ಐಎಸ್ಐ ಎಂದು ಟಾಟೂ ಹಾಕಿಸಿಕೊಂಡಿದ್ದು ವಿವಾದಕ್ಕೆ ಈಡಾಗಿತ್ತು.

ಮತ್ತೊಂದು ಬೋಲ್ಡ್ ಚಿತ್ರದಲ್ಲಿ ವೀಣಾ

ಸಿಲ್ಕ್ - ಸಖತ್ ಹಾಟ್ ಚಿತ್ರದ ನಂತರ ಕರ್ನಾಟಕದಿಂದ ಗಾಯಬ್ ಆಗಿರುವ ವೀಣಾ ಮಲಿಕ್ ಅವರು, ಸತೀಶ್ ರೆಡ್ಡಿ ಅವರ 'ದಿ ಸಿಟಿ ನೆವರ್ ಸ್ಲೀಪ್ಸ್' ಚಿತ್ರದಲ್ಲಿ ಕೂಡ ಸಾಕಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಹಾಲಿವುಡ್ ನಟ ಜೆರೆಮಿ ವಿಲಿಯಂಸ್ ಜೊತೆ ಪಡ್ಡೆಗಳಿಗೆ ಬಿಸಿಯೇರುವಂತೆ ನಟಿಸಿದ್ದಾರೆ ಎಂದು ತಿಳಿದುಬಂದಿದೆ.

ಶೆರ್ಲಿನ್ ಚೋಪ್ರಾ ಕೂಡ...

ಮತ್ತೊಬ್ಬ ಬಾಲಿವುಡ್ ನಟಿ 'ಕಾಮಸೂತ್ರ' ಖ್ಯಾತಿಯ ಶೆರ್ಲಿನ್ ಚೋಪ್ರಾ ಕೂಡ ತಮ್ಮ ದೇಹವನ್ನು ಪ್ಲೇಬಾಯ್ ಪತ್ರಿಕೆಗಾಗಿ ಸಮರ್ಪಿಸಿಕೊಂಡಿದ್ದರು. ಆದರೆ, ದೇಹದ ಮೇಲೆ ಎಳ್ಳಷ್ಟು ಬಟ್ಟೆಯೂ ಇರಲಿಲ್ಲ, ಬಣ್ಣವೂ ಇರಲಿಲ್ಲ. ಅವರ ಮೈಗೆ ಅಂಟಿದ್ದು ವಿವಾದದ ಕಿಡಿ ಮಾತ್ರ.

English summary
Bollywood actress Veena Malik painted her body in London for a special painting by well known artist from Finland Vena Kivinen. The beautiful actress, who acted in Kannada movie Silk - Sakhath Hot, has allowed her naked body to be used as a canvas.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada