»   » ಅಜ್ಮೀರ್ ಷರೀಫ್ ದರ್ಗಾದಲ್ಲಿ ವೀಣಾ ದರ್ಬಾರ್

ಅಜ್ಮೀರ್ ಷರೀಫ್ ದರ್ಗಾದಲ್ಲಿ ವೀಣಾ ದರ್ಬಾರ್

By: ಉದಯರವಿ
Subscribe to Filmibeat Kannada

ಬಾಲಿವುಡ್ ಗೆ ಅಡಿಯಿಟ್ಟಿರುವ ಪಾಕಿಸ್ತಾನದ ಹಾಟ್ ತಾರೆ ವೀಣಾ ಮಲಿಕ್ ಇತ್ತೀಚೆಗೆ ಅಜ್ಮೀರ್ ನ ಇತಿಹಾಸ ಪ್ರಸಿದ್ಧ ಷರೀಫ್ ದರ್ಗಾಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಅವರ 'ಜಿಂದಗಿ 50-50' ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು ಚಿತ್ರ ಯಶಸ್ವಿಯಾಗಲಿ ಎಂದು ದೇವರಲ್ಲಿ ಬೇಡಿಕೊಂಡಿದ್ದಾರೆ.

ಈ ಹಿಂದೊಮ್ಮೆ 2011ರಲ್ಲೂ ವೀಣಾ ಈ ದರ್ಗಾಗೆ ಭೇಟಿ ನೀಡಿದ್ದರು. ಆಗ ಅವರ ಜೊತೆಯಲ್ಲಿ ಬಾಯ್ ಫ್ರೆಂಡ್ ಇದ್ದ. ಈಗ ಏಕಾಂಗಿಯಾಗಿ ಬಂದು ಪ್ರಾರ್ಥಿಸಿಕೊಂಡಿದ್ದಾರೆ. ಏಕ್ ದಿಲ್ ದೇ ಮಾಮ್ಲಾ ಎಂಬ ಪಂಜಾಬಿ ಚಿತ್ರದಲ್ಲೂ ವೀಣಾ ಅಭಿನಯಿಸುತ್ತಿದ್ದಾರೆ.

"ಪಂಜಾಬಿ ಚಿತ್ರಗಳೆಂದರೆ ನನಗೆ ಪಂಚಪ್ರಾಣ. ಅಲ್ಲೂ ಗುರುತಿಸಿಕೊಳ್ಳಬೇಕು ಎಂದು ಬಯಸಿದ್ದೇನೆ. ಈಗ ತಾನು ಅಭಿನಯಿಸುತ್ತಿರುವ ಪಂಜಾಬಿ ಚಿತ್ರ ಶುದ್ಧ ಪಂಜಾಬಿ ಎಮೋಷನ್ಸ್ ನಿಂದ ಕೂಡಿದೆ" ಎಂದಿದ್ದಾರೆ.

ಅಜ್ಮೀರ್ ಷರೀಫ್ ದರ್ಗಾದಲ್ಲಿ ವೀಣಾ ದರ್ಬಾರ್

ಇತ್ತೀಚೆಗೆ ಒಂದು ನಿಮಿಷದಲ್ಲಿ ಅತ್ಯಧಿಕ ಚುಂಬನಗಳನ್ನು ಪಡೆಯುವ ಮೂಲಕ ಗಿನ್ನಿಸ್ ದಾಖಲೆಗೆ ಸೇರಿದ್ದಾರೆ. ಸದ್ಯಕ್ಕೆ ಅವರ ಅಭಿನಯದ ಕನ್ನಡ ಚಿತ್ರ 'ಸಿಲ್ಕ್ ಸಖತ್ ಹಾಟ್' ಬಿಡುಗಡೆಗೆ ಸಿದ್ಧವಾಗುತ್ತಿದೆ. ಈ ಚಿತ್ರದಲ್ಲಿ ವೀಣಾ ಸಖತ್ ಹಾಟ್ ಆಗಿದ್ದು ಪ್ರೇಕ್ಷಕರ ನಿದ್ದೆ ಕೆಡಿಸಿದೆ.

ಅಜ್ಮೀರ್ ಷರೀಫ್ ದರ್ಗಾದಲ್ಲಿ ವೀಣಾ ದರ್ಬಾರ್

ತ್ರಿಶೂಲ್ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಅಕ್ಷಯ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ವೆಂಕಟಪ್ಪ ನಿರ್ಮಿಸುತ್ತಿದ್ದಾರೆ. ವೀಣಾ ಮಲಿಕ್ ಜೊತೆ ರೋಮ್ಯಾನ್ಸ್ ಮಾಡುತ್ತಿರುವವರು ನಟ ಅಕ್ಷಯ್. ಸನಾ ಖಾನ್, ಶ್ರೀನಿವಾಸಮೂರ್ತಿ ಚಿತ್ರದಲ್ಲಿದ್ದಾರೆ.

ಅಜ್ಮೀರ್ ಷರೀಫ್ ದರ್ಗಾದಲ್ಲಿ ವೀಣಾ ದರ್ಬಾರ್

ಒಂದು ಕಾಲದಲ್ಲಿ ರೇಶ್ಮೆಯಂತಹ ತಮ್ಮ ಮೈಸಿರಿಯಿಂದಲೇ ಪ್ರೇಕ್ಷಕರನ್ನು ಬೆಚ್ಚಗೆ ಮಾಡಿದ್ದ ಸಿಲ್ಕ್ ಸ್ಮಿತಾ ಅವರೇ ಈ ಚಿತ್ರಕ್ಕೆ ಸ್ಫೂರ್ತಿ ಎನ್ನಲಾಗಿದೆ. ಆದರೆ ಹಿಂದಿಯ 'ಡರ್ಟಿ ಪಿಕ್ಚರ್' ಚಿತ್ರಕ್ಕೂ ಇದಕ್ಕೂ ಯಾವುದೇ ಸಂಬಂಧವಿರಲ್ಲ ಎನ್ನುತ್ತಿದ್ದಾರೆ ಚಿತ್ರದ ನಿರ್ದೇಶಕರು.

ಅಜ್ಮೀರ್ ಷರೀಫ್ ದರ್ಗಾದಲ್ಲಿ ವೀಣಾ ದರ್ಬಾರ್

ದರ್ಗಾಗೆ ಭೇಟಿ ನೀಡಿದ ಸಂದರ್ಭದಲ್ಲಿ ವೀಣಾ ಶ್ವೇತವರ್ಣದ ಸಲ್ವಾರ್ ಕಮೀಜ್ ನಲ್ಲಿ ಕಂಗೊಳಿಸುತ್ತಿದ್ದರು. ಅವರ ಮುಖಭಾವ ಮಾತ್ರ ಶಾಂತಚಿತ್ತವಾಗಿತ್ತು. ಆದರೆ ಮೇಕಪ್ ಮಾತ್ರ ಧಾರಾಳವಾಗಿತ್ತು.

ಅಜ್ಮೀರ್ ಷರೀಫ್ ದರ್ಗಾದಲ್ಲಿ ವೀಣಾ ದರ್ಬಾರ್

ವೀಣಾ ಬರುತ್ತಾರೆಂದರೆ ಅವರ ಅಭಿಮಾನಿಗಳು ಬರ್ದೆ ಇರ್ತಾರಾ. ವೀಣಾ ಬರುವುದಕ್ಕೂ ಮುನ್ನವೇ ಅಭಿಮಾನಿಗಳು ಅಲ್ಲಿಗೆ ಆಗಮಿಸಿದ್ದರು. ದೂರದಿಂದಲೇ ತಮ್ಮ ನೆಚ್ಚಿನ ತಾರೆಯನ್ನು ನೋಡುತ್ತಾ ಕಣ್ತುಂಬಿಕೊಂಡರು.

English summary
Bollywood Actress Veena Malik prays for the success of her upcoming film Zindagi 50 50 at Ajmer Sharif Dargah, Rajasthan.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada