ನಟ ದಿಲೀಪ್ ಕುಮಾರ್ ಸಹೋದರ ಕೊವಿಡ್‌ನಿಂದ ಸಾವು

ಬಾಲಿವುಡ್ ಖ್ಯಾತ ನಟ ದಿಲೀಪ್ ಕುಮಾರ್ ಕಿರಿಯ ಸಹೋದರ ಕೊರೊನಾ ವೈರಸ್ ರೋಗದಿಂದ ಮೃತಪಟ್ಟಿದ್ದಾರೆ. ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 88 ವರ್ಷದ ಅಸ್ಲಾಂ ಖಾನ್ ಶುಕ್ರವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಆಸ್ಪತ್ರೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, 'ದಿಲೀಪ್ ಕುಮಾರ್ ಅವರ ಕಿರಿಯ ಸಹೋದರ ಅಸ್ಲಂ ಖಾನ್ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ರಕ್ತಕೊರತೆಯ ಹೃದಯ ಕಾಯಿಲೆಯೊಂದಿಗೆ ಕೋವಿಡ್ 19 ಸಹ ತಗುಲಿತ್ತು. ಹೀಗಾಗಿ, ಚಿಕಿತ್ಸೆಗೆ ಸ್ಪಂದಿಸದೆ ಮುಂಜಾನೆ ನಿಧನರಾದರು' ಎಂದು ಡಾ. ಜಲೀಲ್ ಪಾರ್ಕರ್ ಅವರ ನೇತೃತ್ವದ ವೈದ್ಯ ತಂಡ ವಿವರಣೆ ನೀಡಿದೆ.

ಈ ಸುದ್ದಿಯನ್ನು ದಿಲೀಪ್ ಕುಮಾರ್ ಅವರ ವಕ್ತಾರ ಫೈಸಲ್ ಫಾರೂಕಿ ಟ್ವಿಟ್ಟರ್ ನಲ್ಲಿ ಈ ಸುದ್ದಿಯನ್ನು ದೃಢಪಡಿಸಿದ್ದಾರೆ.

Veteran Actor Dilip Kumar’s Brother Aslam Passes Away

ಕೊರೊನಾ ವೈರಸ್‌ ಪಾಸಿಟಿವ್ ಆದ ಕಾರಣ ದಿಲೀಪ್ ಕುಮಾರ್ ಅವರ ಸಹೋದರರಾದ ಇಶಾನ್ ಮತ್ತು ಅಸ್ಲಂ ಖಾನ್ ಇಬ್ಬರನ್ನು ಕಳೆದ ಶನಿವಾರ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನಿನ್ನೆ ಸಂಜೆಯೇ ಆಸ್ಪತ್ರೆಯ ವೈದ್ಯರು ಅಸ್ಲಾಂ ಖಾನ್ ಆರೋಗ್ಯದ ಕುರಿತು ಆತಂಕ ವ್ಯಕ್ತಪಡಿಸಿದ್ದರು. ''ಅಸ್ಲಾಂ ಖಾನ್ ವಯಸ್ಸು ಮತ್ತು ಅವರ ಪ್ರಮುಖ ಅಂಗಗಳು ಕಳವಳಕ್ಕೆ ಕಾರಣವಾಗಿವೆ. ಸದ್ಯ ಅವರ ಸ್ಥಿತಿ ಗಂಭೀರವಾಗಿದೆ" ಎಂದು ಹೇಳಿದ್ದರು.

More from Filmibeat

English summary
Aslam Khan, younger brother of Dilip Kumar passes away due to COVID19.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X