For Quick Alerts
  ALLOW NOTIFICATIONS  
  For Daily Alerts

  ರಸ್ತೆ ಅಪಘಾತಕ್ಕೆ ಒಳಗಾಗಿದ್ದ ನಟಿ ಶಬಾನ ಅಜ್ಮಿ ಆಸ್ಪತ್ರೆಯಿಂದ ಡಿಸ್ಚಾರ್ಜ್

  |

  ಬಾಲಿವುಡ್ ಹಿರಿಯ ನಟಿ ಶಬಾನ ಅಜ್ಮಿ ಮುಂಬೈ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಜನವರಿ 18 ರಂದು ಮುಂಬೈ ಹೆದ್ದಾರಿಯಲ್ಲಿ ಶಬಾನ ಅಜ್ಮಿ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿತ್ತು. ಗಂಭೀರ ಗಾಯಕ್ಕೆ ಒಳಗಾಗಿದ್ದ ನಟಿಯನ್ನು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

  ಎರಡು ವಾರದ ಚಿಕಿತ್ಸೆ ಬಳಿಕ ಸಂಪೂರ್ಣ ಗುಣಮುಖರಾಗಿರುವ ನಟಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಟ್ವಿಟ್ಟರ್ ನಲ್ಲಿ ಫೋಟೋ ಶೇರ್ ಮಾಡಿರುವ ನಟಿ ''ನನ್ನ ಸುರಕ್ಷಿತೆಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದ. ನಾನು ಮನೆಗೆ ಹಿಂತಿರುಗಿದ್ದೇನೆ. ನನ್ನ ಬಗ್ಗೆ ವಿಶೇಷವಾದ ಹಾರೈಕೆ ಮಾಡಿದ್ದಕ್ಕೆ ವಿಶೇಷವಾಗಿ ಟೀನಾ ಅಂಬಾನಿ ಮತ್ತು ಕೋಕಿಲಾಬೆನ್ ಆಸ್ಪತ್ರೆಯ ವೈದ್ಯರಿಗೆ ಧನ್ಯವಾದ'' ಎಂದು ಬರೆದಿದ್ದಾರೆ.

  ನಟಿ ಶಬಾನ ಅಜ್ಮಿ ಅವರು ಮನೆಗೆ ಹಿಂತಿರುಗಿದ ಸಂಗತಿ ತಿಳಿದ ಅಭಿಮಾನಿಗಳು ಸ್ವಾಗತಿಸಿದ್ದಾರೆ. ಚಪಾಕ್ ಸಿನಿಮಾ ನಟ ವಿಕ್ರಾಂತ್ ''ಗುಣಮುಖರಾಗಿ ನಿಮ್ಮನ್ನು ನೋಡಿದ್ದು ಖುಷಿ ಆಯ್ತು'' ಎಂದಿದ್ದಾರೆ. ನಿರ್ಮಾಪಕ ಅನಿಯರ್ ಟ್ವೀಟ್ ಮಾಡಿ ''ನೀವು ಗುಣಮುಖರಾಗಿ ಮನೆಗೆ ಹಿಂತಿರುಗಿದ್ದು ಸಂತಸ ತಂದಿದೆ'' ಎಂದಿದ್ದಾರೆ.

  ಕಳೆದ ವಾರ (ಜನವರಿ 18) ಮುಂಬೈ ಮತ್ತು ಪುಣೆ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ನಟಿ ಕಾರು ಟ್ರಕ್ ಗೆ ಡಿಕ್ಕಿ ಹೊಡೆದಿತ್ತು. ಅವರ ಪತಿ ಕೂಡ ಜೊತೆಯಲ್ಲಿದ್ದು ಅವರ ಬೇರೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಅಪಘಾತದಲ್ಲಿ ನಟಿ ಹಾಗೂ ಕಾರು ಚಾಲಕನಿಗೆ ಗಾಯಗಳಾಗಿದ್ದವು. ಕೂಡಲೇ ಅವರನ್ನು ನವಿ ಮುಂಬೈನ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕತ್ಸೆಗಾಗಿ ಕೋಕಿಲಾಬೆನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.

  ಈ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಶಬಾನ ಅಜ್ಮಿ ಕಾರು ಚಾಲಕನ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ. ಚಾಲಕನ ಅಜಾಗರೂಕತೆಯೇ ಈ ಅಪಘಾತಕ್ಕೆ ಕಾರಣ ಎಂದು ಪೊಲೀಸರು ಕೇಸ್ ದಾಖಲು ಮಾಡಿದ್ದಾರೆ.

  English summary
  Bollywood Veteran actress Shabana Azmi discharge from hospital after car accident.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X