For Quick Alerts
ALLOW NOTIFICATIONS  
For Daily Alerts

ಟ್ರೆಂಡ್ಸ್‌‌ ಪ್ರಚಾರ ರಾಯಭಾರಿಯಾಗಿ ವಿಕಿ ಕೌಶಲ್ - ಜಾಹ್ನವಿ ಕಪೂರ್ ಮಿಂಚು

By ಜೇಮ್ಸ್ ಮಾರ್ಟಿನ್
|

ಭಾರತದ ಅತಿದೊಡ್ಡ ಹಾಗೂ ಅತಿವೇಗವಾಗಿ ಬೆಳೆಯುತ್ತಿರುವ, ರಿಲಯನ್ಸ್ ರೀಟೇಲ್‌ನ ಉಡುಪು ಮತ್ತು ಪರಿಕರ ಮಳಿಗೆಗಳ ಸರಣಿ ಟ್ರೆಂಡ್ಸ್, ತನ್ನ ಪ್ರಚಾರ ರಾಯಭಾರಿಗಳಾಗಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ಬಾಲಿವುಡ್ ಸೆಲೆಬ್ರಿಟಿ ವಿಕಿ ಕೌಶಲ್ ಹಾಗೂ ಜಾಹ್ನವಿ ಕಪೂರ್ ಅವರ ಆಯ್ಕೆಯನ್ನು ಘೋಷಿಸಿದೆ.

ಮನರಂಜನಾ ವಾಹಿನಿಗಳು, ಮೂವಿ ಚಾನೆಲ್‌ಗಳು, ಸುದ್ದಿವಾಹಿನಿ ಹಾಗೂ ಕ್ರೀಡಾ ಚಾನೆಲ್‌ಗಳು ಸೇರಿದಂತೆ ಎಲ್ಲ ಪ್ರಮುಖ ರಾಷ್ಟ್ರೀಯ ಟಿವಿ ಚಾನೆಲ್‌ಗಳಲ್ಲಿ ವಿಕಿ ಮತ್ತು ಜಾಹ್ನವಿಯವರನ್ನು ಒಳಗೊಂಡ ಟ್ರೆಂಡ್ಸ್‌ನ ಹೊಸ ಹಬ್ಬದ ಅಭಿಯಾನ ಪ್ರಸಾರವಾಗುತ್ತಿದೆ ಮತ್ತು ಇದು ದೀಪಾವಳಿಯವರೆಗೆ ಮುಂದುವರಿಯುತ್ತದೆ.

ಭಿನ್ನ ಹಾದಿಯಲ್ಲಿ ಸಾಗುತ್ತಾ ಹೊಸ ಬಗೆಯ ಬಾಲಿವುಡ್ ಕಟ್ಟುತ್ತಿದ್ದಾರೆ 3 ಯುವರಾಜರು

ವಿಕಿ ಕೌಶಲ್ ಮಾತು: "ಉಡುಪುಗಳಿಗಾಗಿ ಭಾರತದ ಅತಿದೊಡ್ಡ ಗಮ್ಯಸ್ಥಾನವಾದ ಟ್ರೆಂಡ್ಸ್‌ನ ಪ್ರತಿನಿಧಿಯಾಗಿ ಕೈಜೋಡಿಸಲು ನಾನು ಸಂತೋಷಪಡುತ್ತೇನೆ. ಪುರುಷರ ಸ್ಮಾರ್ಟ್ ಕ್ಯಾಶುಯಲ್ಸ್ ಆಗಲಿ, ಎಥ್ನಿಕ್ ವೇರ್ ಆಗಲಿ, ನಾನು ಧರಿಸಿದ ಟ್ರೆಂಡ್ಸ್ ವಸ್ತ್ರಗಳನ್ನು ನಾನು ಬಹಳ ಇಷ್ಟಪಟ್ಟೆ. ಅವೆಲ್ಲವೂ ಕೂಲ್ ಮತ್ತು ಟ್ರೆಂಡಿ ಆಗಿವೆ.

ಟ್ರೆಂಡ್ಸ್‌ನ ಬ್ರಾಂಡ್ ಚಿಂತನೆ 'ಗೆಟ್ ದೆಮ್ ಟಾಕಿಂಗ್' ನನ್ನನ್ನು ಬಹುವಾಗಿ ಸೆಳೆದಿದೆ ಹಾಗೂ ಅದು ಭಾರತೀಯ ಗ್ರಾಹಕರನ್ನೂ ಹಾಗೆಯೇ ಸೆಳೆಯಲಿದೆ ಎಂದು ನಾನು ನಂಬುತ್ತೇನೆ. ಟ್ರೆಂಡ್ಸ್‌ನ ಹಬ್ಬದ ಟಿವಿ ಕಮರ್ಷಿಯಲ್‌ಗಳ ಭಾಗವಾಗಲು ನನಗೆ ಬಹಳ ಸಂತೋಷವಾಗಿದೆ. ಟ್ರೆಂಡ್ಸ್ ಉಡುಪುಗಳನ್ನು ಧರಿಸಿದಾಗ, ನೀವು ಸಾಕಷ್ಟು ತಲೆಗಳನ್ನು ತಿರುಗಿಸುವುದು ಖಚಿತ. ಆದ್ದರಿಂದಲೇ ಟ್ರೆಂಡ್ಸ್‌ಗೆ ಹೋಗಿ; ಫ್ಯಾಷನ್‌ನಲ್ಲಿ ಇತ್ತೀಚಿನದನ್ನು ಧರಿಸಿ ಮತ್ತು ಅವರೆಲ್ಲ ಮಾತನಾಡುವಂತೆ ಮಾಡಿ."

ಜಾಹ್ನವಿ ಕಪೂರ್ ಮಾತು

ಜಾಹ್ನವಿ ಕಪೂರ್ ಮಾತು

ಜಾಹ್ನವಿ ಕಪೂರ್ ಮಾತು: "ಫ್ಯಾಶನ್ ಹಾಗೂ ಟ್ರೆಂಡ್ಸ್ ಯಾವಾಗಲೂ ಜೊತೆಯಾಗಿಯೇ ಇರುತ್ತವೆ. ಅಲ್ಲದೆ ಟ್ರೆಂಡ್ಸ್ ಭಾರತದಾದ್ಯಂತ ಗೋಚರಿಸುವ ಬ್ರಾಂಡ್ ಆಗಿದ್ದು ದೇಶದೆಲ್ಲೆಡೆಯ ಗ್ರಾಹಕರು ಅದನ್ನು ಪ್ರೀತಿಸುತ್ತಾರೆ. ಟ್ರೆಂಡ್ಸ್‌ನಲ್ಲಿ ಉತ್ತಮ ಫ್ಯಾಶನ್ ಕೈಗೆಟುಕುವ ಬೆಲೆಯಲ್ಲಿ ದೊರಕುತ್ತದೆ ಹಾಗೂ ಅದರ ವ್ಯಾಪ್ತಿ ಬ್ರಾಂಡ್‌ಗೆ ಹೆಚ್ಚುವರಿ ಮೌಲ್ಯ ತಂದುಕೊಡುತ್ತದೆ. ಆಶ್ಚರ್ಯವೇನಿಲ್ಲ, ಭಾರತದ ಅತಿದೊಡ್ಡ ಉಡುಪು ತಾಣವಾಗಿರುವುದರಿಂದ, ಫ್ಯಾಷನ್ ಜಗತ್ತಿನಲ್ಲಿ ಟ್ರೆಂಡಿಂಗ್ ಆಗಿರುವುದರಲ್ಲಿ ಅತ್ಯುತ್ತಮವಾದ್ದನ್ನು ನೀವು ಟ್ರೆಂಡ್ಸ್‌ನಲ್ಲಿ ಪಡೆಯುತ್ತೀರಿ. ಟ್ರೆಂಡ್ಸ್‌ನ ಹಬ್ಬದ ಟಿವಿ ಕಮರ್ಷಿಯಲ್‌ನಲ್ಲಿ ನಾನು ಧರಿಸಿರುವ ಫೆಸ್ಟಿವಲ್ ವುಮೆನ್ಸ್ ಇಂಡಿಯನ್ ವೇರ್ ಶ್ರೇಣಿಯನ್ನು ನಾನು ಇಷ್ಟಪಟ್ಟೆ ಮತ್ತು ಬ್ರ್ಯಾಂಡ್‌ನ ಪ್ರತಿನಿಧಿಯಾಗಿರುವುದಕ್ಕೆ ನಾನು ಸಂತೋಷಿಸುತ್ತೇನೆ. ಯಾವಾಗಲೂ ಫ್ಯಾಶನಬಲ್ ಆಗಿರುವ ಟ್ರೆಂಡ್ಸ್ ಉಡುಪು-ಪರಿಕರಗಳನ್ನು ನೀವು ಧರಿಸಿದಾಗ, ಸಂಭಾಷಣೆಗಳನ್ನು ಹುಟ್ಟುಹಾಕುತ್ತೀರಿ ಮತ್ತು ಜನರು ಮಾತನಾಡುವಂತೆ ಮಾಡುತ್ತೀರಿ."

ಟ್ರೆಂಡ್ಸ್‌ನ ವ್ಯವಹಾರ ಮುಖ್ಯಸ್ಥ ಹಾಗೂ ಸಿಓಓ ವಿಪಿನ್ ತ್ಯಾಗಿ

ಟ್ರೆಂಡ್ಸ್‌ನ ವ್ಯವಹಾರ ಮುಖ್ಯಸ್ಥ ಹಾಗೂ ಸಿಓಓ ವಿಪಿನ್ ತ್ಯಾಗಿ

ಈ ಸಹಯೋಗದ ಬಗ್ಗೆ ಮಾತನಾಡಿದ ಟ್ರೆಂಡ್ಸ್‌ನ ವ್ಯವಹಾರ ಮುಖ್ಯಸ್ಥ ಹಾಗೂ ಸಿಓಓ ವಿಪಿನ್ ತ್ಯಾಗಿ, "ಟ್ರೆಂಡ್ಸ್ ಇಂದು ಭಾರತದಲ್ಲೇ ಅತಿದೊಡ್ಡ ಉಡುಪುಗಳ ಗಮ್ಯಸ್ಥಾನವಾಗಿದ್ದು ದೊಡ್ಡ ಸಂಖ್ಯೆಯ ಭಾರತೀಯರಿಗೆ ಹೊಸ ಫ್ಯಾಶನ್ ಅನ್ನು ಒದಗಿಸುತ್ತಿದೆ. ಭಾರತದ ಅತಿ ದೊಡ್ಡ ಹಾಗೂ ಅತಿ ಕ್ಷಿಪ್ರವಾಗಿ ಬೆಳೆಯುತ್ತಿರುವ ಉಡುಪುಗಳ ರೀಟೇಲ್ ಸರಣಿ ಆಗಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಯುವಜನತೆಯೊಡನೆ ನಮ್ಮ ಸಂಪರ್ಕ ಸದೃಢವಾಗಿರುವಂತೆ ಮಾಡುವುದು ನಮ್ಮ ಪ್ರಮುಖ ಆದ್ಯತೆಗಳಲ್ಲೊಂದಾಗಿತ್ತು. ಪ್ರತಿಭಾನ್ವಿತ ಬಾಲಿವುಡ್ ಯೂತ್ ಐಕನ್‌ಗಳಾಗಿರುವ ವಿಕಿ ಹಾಗೂ ಜಾಹ್ನವಿಯವರನ್ನು ಮಿಲೆನಿಯಲ್ ತಲೆಮಾರು ವ್ಯಾಪಕವಾಗಿ ಹಿಂಬಾಲಿಸುತ್ತಿದ್ದು, ಅವರೊಡನೆ ಸಹಭಾಗಿಗಳಾಗಲು ಟ್ರೆಂಡ್ಸ್ ಸಂತೋಷಪಡುತ್ತದೆ" ಎಂದು ಹೇಳಿದರು.

ಭಾರತದಾದ್ಯಂತ ನಮ್ಮ 750 ಮಳಿಗೆಗಳಿವೆ

ಭಾರತದಾದ್ಯಂತ ನಮ್ಮ 750 ಮಳಿಗೆಗಳಿವೆ

ಟ್ರೆಂಡ್ಸ್‌ನ ವಿವಿಧ ರೀಟೇಲ್ ರೂಪಗಳಲ್ಲಿ, ಭಾರತದಾದ್ಯಂತ ನಮ್ಮ 750 ಮಳಿಗೆಗಳಿವೆ - ಇದು ಯಾವುದೇ ಫ್ಯಾಶನ್ ರೀಟೇಲರ್‌ಗಳ ಹೋಲಿಕೆಯಲ್ಲಿ ಅತಿದೊಡ್ಡ ಸಂಖ್ಯೆಯಾಗಿದ್ದು, ನಮ್ಮ ಉಪಸ್ಥಿತಿಯನ್ನು ಹೆಚ್ಚಿಸಿಕೊಳ್ಳುವ ಹಾಗೂ ಭಾರತದ ಮುಂಚೂಣಿ ಉಡುಪುಗಳ ಗಮ್ಯಸ್ಥಾನವಾಗಿ ನಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಇನ್ನೂ ಬೆಳೆಯಲಿದ್ದೇವೆ. ವಿಕಿ ಮತ್ತು ಜಾಹ್ನವಿ ಅವರೊಂದಿಗಿನ ನಮ್ಮ ಹೊಸ ಹಬ್ಬದ ಟಿವಿ ಜಾಹೀರಾತು ಅಭಿಯಾನದ ಮೂಲಕ ‘ಗೆಟ್ ದೆಮ್ ಟಾಕಿಂಗ್' ಎಂಬ ನಮ್ಮ ಬ್ರಾಂಡ್ ಚಿಂತನೆಯು ದೇಶಾದ್ಯಂತ ನಮ್ಮ ಗ್ರಾಹಕ ಸಂಪರ್ಕವನ್ನು ಬಲಪಡಿಸುವುದನ್ನು ಮುಂದುವರಿಸುತ್ತದೆ." ಎಂದು ಟ್ರೆಂಡ್ಸ್‌ನ ವ್ಯವಹಾರ ಮುಖ್ಯಸ್ಥ ಹಾಗೂ ಸಿಓಓ ವಿಪಿನ್ ತ್ಯಾಗಿ ಪ್ರತಿಕ್ರಿಯಿಸಿದ್ದಾರೆ.

ಟ್ರೆಂಡ್ಸ್‌ ಹೊಸ ಹಬ್ಬದ ಅಭಿಯಾನ

ಟ್ರೆಂಡ್ಸ್‌ ಹೊಸ ಹಬ್ಬದ ಅಭಿಯಾನ

ಹೊಸ ಹಬ್ಬದ ಅಭಿಯಾನವು ಟ್ರೆಂಡ್ಸ್‌ ಅನ್ನು ಉಡುಪುಗಳ ಅಪೇಕ್ಷಣೀಯ ಗಮ್ಯಸ್ಥಾನವಾಗಿ ಇರಿಸುತ್ತದೆ. ಇದು ಫ್ಯಾಷನ್ ಪ್ರಜ್ಞೆಯ ಇಂದಿನ ಪೀಳಿಗೆಗೆ ಆತ್ಮವಿಶ್ವಾಸದ ಫ್ಯಾಷನ್ ಹೇಳಿಕೆಗಳನ್ನು ನೀಡಲು ಅನುವುಮಾಡಿಕೊಡುತ್ತದೆ. "ಇಂದಿನ ಯುವಪೀಳಿಗೆ ಫ್ಯಾಷನ್ ಪ್ರಜ್ಞೆ ಹೊಂದಿದ್ದಾರೆ ಮತ್ತು ಫ್ಯಾಷನ್‌ನೊಂದಿಗೆ ಪ್ರಯೋಗ ಮಾಡಲು ಸಿದ್ಧರಿದ್ದಾರೆ. ಸಾಮಾಜಿಕ ಮಾಧ್ಯಮದ ಪ್ರಾಬಲ್ಯವಿರುವ ಈ ಕಾಲಘಟ್ಟದಲ್ಲಿ, ಅವರು ಏನು ಧರಿಸುತ್ತಾರೆ ಮತ್ತು ಹೇಗೆ ಸ್ಟೈಲ್ ಅಪ್ ಮಾಡುತ್ತಾರೆ ಎಂಬುದರ ಬಗ್ಗೆ ಎಲ್ಲರ ಗಮನವನ್ನೂ ಸೆಳೆಯಲು ಅವರು ಬಯಸುತ್ತಾರೆ. ತಲೆಗಳನ್ನು ತಿರುಗಿಸಲು, ಸಂಭಾಷಣೆ ಪ್ರಾರಂಭಿಸಲು ಮತ್ತು ಜನರೆಲ್ಲ ಮಾತನಾಡುವಂತೆ ಮಾಡಲು ಟ್ರೆಂಡ್ಸ್ ಅವರಿಗೆ ನೆರವಾಗುವ ಬ್ರಾಂಡ್ ಎಂದು ನಾವು ನಂಬಿದ್ದೇವೆ," ಎಂದು ವಿಪಿನ್ ತ್ಯಾಗಿ ಹೇಳಿದರು.

English summary
Trends festive campaign with Kaushal and Kapoor is on air in all leading national TV channels across genres and will go on till Deepavali.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more