For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಟ ವಿಕ್ಕಿ ಕೌಶಲ್ ದ್ವಿಚಕ್ರ ವಾಹನ ನಂಬರ್ ಪ್ಲೇಟ್ ವಿವಾದ: ಕ್ಲೀನ್ ಚಿಟ್ ನೀಡಿದ ಪೊಲೀಸರು

  |

  ಬಾಲಿವುಡ್ ಸ್ಟಾರ್ ನಟಿ ಕತ್ರಿನಾ ಕೈಫ್ ಜೊತೆ ವಿವಾಹವಾದ ಬಳಿಕ ವಿಕ್ಕಿ ಕೌಶಲ್ ಜೋಷ್‌ನಲ್ಲಿದ್ದರು. ಮದುವೆ ಮೂಡ್‌ನಿಂದ ಹೊರಬರಲು ಸಾಧ್ಯವಾಗದೆ ಇದ್ದರೂ, ಸಿನಿಮಾ ಕಮಿಟ್ಮೆಂಟ್ ಮುಗಿಸಿಕೊಳ್ಳಲು ಮತ್ತೆ ಸೆಟ್ಟಿಗೆ ಎಂಟ್ರಿಕೊಟ್ಟಿದ್ದರು. ಆದರೆ, ಇದೇ ವೇಳೆ ಇಂದೋರ್‌ನ ನಿವಾಸಿ ಜೈ ಸಿಂಗ್ ಯಾದವ್ ಎಂಬುವವರು ವಿಕ್ಕಿ ವಿರುದ್ಧ ದೂರು ದಾಖಲಾಗಿತ್ತು. ದ್ವಿಚಕ್ರ ವಾಹನದ ನಂಬರ್ ಪ್ಲೇಟ್ ಅನ್ನು ಅನುಮತಿ ಇಲ್ಲದೆ ಬಳಸಿಕೊಂಡಿದ್ದಾರೆ ಎಂಬ ಆರೋಪ ಮಾಡಲಾಗಿತ್ತು.

  ಇಂದೋರಿನಲ್ಲಿ ದೂರು ದಾಖಲಾಗುತ್ತಿದ್ದಂತೆ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಆದ್ರೀಗ ಇಂದೋರಿನ ಪೊಲೀಸರು ಈ ಪ್ರಕರಣವನ್ನು ಇತ್ಯರ್ಥಗೊಳಿಸಿದ್ದಾರೆ. ವಿಕ್ಕಿ ಕೌಶಲ್ ಮೇಲೆ ದೂರು ದಾಖಲಾಗಲು ಒಂದೇ ಒಂದು ನಂಬರ್ ಕಾರಣವೆಂದು ತನಿಖೆಯಲ್ಲಿ ತಿಳಿದು ಬಂದಿದೆ. ಹಾಗಿದ್ದರೆ, ಇಂದೋರ್‌ನ ಯುವಕ ದಾಖಲಿಸಿದ ದೂರು ಏನು? ಪೊಲೀಸರು ಪ್ರಕರಣ ಇತ್ಯರ್ಥಗೊಳಿಸಿದ್ದು ಹೇಗೆ ? ಎಂಬುದನ್ನು ತಿಳಿಯಲು ಮುಂದೆ ಓದಿ.

  ವಿಕ್ಕಿ ವಿರುದ್ಧ ದೂರಿಗೆ ಒಂದು ನಂಬರ್ ಕಾರಣ

  ವಿಕ್ಕಿ ವಿರುದ್ಧ ದೂರಿಗೆ ಒಂದು ನಂಬರ್ ಕಾರಣ

  ವಿಕ್ಕಿ ಕೌಶಲ್ ಹಾಗೂ ಸಾರಾ ಅಲಿಖಾನ್ ನಟಿಸುತ್ತಿರುವ ಹೊಸ ಸಿನಿಮಾ ಇಂದೋರ್‌ನಲ್ಲಿ ಶೂಟ್ ಮಾಡಲಾಗುತ್ತಿದೆ. ಈ ಸಿನಿಮಾ ಒಂದು ದೃಶ್ಯದಲ್ಲಿ ವಿಕ್ಕಿ ಹಾಗೂ ಸಾರಾ ಅಲಿ ಖಾನ್ ಇಬ್ಬರೂ ಬೈಕ್‌ನಲ್ಲಿ ಹೋಗುತ್ತಿರುವ ಫೋಟೊವೊಂದು ರಿವೀಲ್ ಆಗಿತ್ತು. ಆ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಇಂದೋರ್‌ನ ಯುವಕ ಜೈ ಸಿಂಗ್ ಯಾದವ್ ಎಂಬುವ ವ್ಯಕ್ತಿ "ನನ್ನ ಅನುಮತಿ ಇಲ್ಲದೆ ನನ್ನ ದ್ವಿಚಕ್ರ ವಾಹನದ ನಂಬರ್ ಅನ್ನು ಬಳಸಿಕೊಂಡಿದ್ದಾರೆ" ಎಂದು ಪೊಲೀಸರ ಬಳಿ ದೂರು ದಾಖಲಿಸಿದ್ದರು. ಆ ದೂರಿನ ಅನ್ವಯ ತನಿಖೆ ನಡೆಸಲಾಗಿತ್ತು. ಈ ವೇಳೆ ದೂರಿಗೆ ಒಂದೇ ಒಂದು ನಂಬರ್ ಕಾರಣವೆಂದು ತಿಳಿದು ಬಂದಿದೆ.

  ಗೊಂದಲಕ್ಕೆ ಒಳಗಾಗಿದ್ದ ದೂರುದಾರ

  ಗೊಂದಲಕ್ಕೆ ಒಳಗಾಗಿದ್ದ ದೂರುದಾರ

  ಇಂದೋರ್‌ನ ದೂರುದಾರ ಜೈ ಸಿಂಗ್ ಯಾದವ್ ತನ್ನ ಬೈಕ್‌ನ ಸಂಖ್ಯೆ '4872' ಈ ಸಂಖ್ಯೆಯನ್ನೇ ವಿಕ್ಕಿ ಕೌಶಲ್ ಹಾಗೂ ಸಾರಾ ಅಲಿಖಾನ್ ಸಿನಿಮಾದಲ್ಲಿ ಬಳಸಲಾಗಿದೆ ಎಂದು ದೂರು ನೀಡಿದ್ದ. ಈ ದೂರಿನ ಅನ್ವಯ ಇಂದೋರಿನ ಪೊಲೀಸರು ತನಿಖೆ ನಡೆಸಿದ್ದರು. ಆ ವೇಳೆ ದೂರುದಾರ ಮೊದಲ ನಂಬರ್ ಅನ್ನು ತಪ್ಪಾಗಿ ತಿಳಿದಿದ್ದ ಎಂದು ಗೊತ್ತಾಗಿದೆ. ಸಿನಿಮಾ ತಂಡ ಬಳಸಿದ ನಂಬರ್ '1872' ಎಂಬುದಾಗಿತ್ತು. ಆದರೆ, ದೂರುದಾರನಿಗೆ ಮೊದಲ ಸಂಖ್ಯೆ 4 ಎಂದು ಕಂಡಿದೆ. ಹೀಗಾಗಿ ಇಷ್ಟೆಲ್ಲ ಗೊಂದಲಕ್ಕೆ ಕಾರಣವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

  ಗೊಂದಲಕ್ಕೆ ಒಂದು ಬೋಲ್ಟ್ ಕಾರಣ

  ಗೊಂದಲಕ್ಕೆ ಒಂದು ಬೋಲ್ಟ್ ಕಾರಣ

  ವಿಕ್ಕಿ ಕೌಶಲ್ ವಿರುದ್ಧ ದೂರು ನೀಡಿದ್ದ ದೂರುದಾರನಿಗೆ ಚಮಕ್ ಕೊಟ್ಟಿದ್ದು ಒಂದೇ ಒಂದು ಬೋಲ್ಟ್. ಹೌದು.. ವಿಕ್ಕಿ ಕೌಶಲ್ ಹಾಗೂ ಸಾರಾ ಅಲಿಖಾನ್ ಸವಾರಿ ಮಾಡುತ್ತಿದ್ದ ಬೈಕ್‌ನ ನಂಬರ್ ಪ್ಲೇಟ್ ಮೇಲೆ ಎರಡು ಬೋಲ್ಡ್ ಅನ್ನು ಅಳವಡಿಸಲಾಗಿತ್ತು. ಅದರಲ್ಲಿಒಂದು ಬೋಲ್ಟ್‌ 1 ಅಂಕಿಯ ಮೇಲೆ ಇತ್ತು. ಹೀಗಾಗಿ ದೂರುದಾರ, ಇದು ತನ್ನದೇ ದ್ವಿಚಕ್ರ ವಾಹನದ ಸಂಖ್ಯೆ ಎಂದು ಭಾವಿಸಿದ್ದ. ಹೀಗಾಗಿ ತಕ್ಷಣವೇ ತನ್ನ ಅನುಮತಿ ಇಲ್ಲದೆ ತನ್ನ ಬೈಕಿನ ನಂಬರ್ ಪ್ಲೇಟ್ ಅನ್ನು ಬಳಸಿಕೊಂಡಿದ್ದಾರೆ ಎಂದು ದೂರು ದಾಖಲಿಸಿದ್ದ.

  ಏನಂತಾರೆ ಇಂದೋರಿನ ಪೊಲೀಸರು

  ಏನಂತಾರೆ ಇಂದೋರಿನ ಪೊಲೀಸರು

  ಇಂದೋರಿನ ಬಂಗಾಂಗ ಏರಿಯಾದ ಪೊಲೀಸ್ ಅಧಿಕಾರಿ ರಾಜೇಂದ್ರ ಸೋನಿ ತನಿಖೆ ನಡೆಸಿದ ವೇಳೆ ಗೊಂದಲಕ್ಕೆ ಕಾರಣವಾಗಿದ್ದು ಒಂದು ಬೋಲ್ಡ್ ಎಂದು ತಿಳಿದು ಬಂದಿದೆ. ಇದೇ ವೇಳೆ ಸಿನಿಮಾ ತಂಡಕ್ಕೆ 1872 ನಂಬರ್ ಪ್ಲೇಟ್ ಅನ್ನು ಬಳಸಲು ಅನುಮತಿ ನೀಡಲಾಗಿದೆ. ಹೀಗಾಗಿ ಯಾವುದೇ ರೀತಿ ಕಾನೂನು ತೊಡಕುಗಳಿಲ್ಲವೆಂದು ಹೇಳಿದ್ದಾರೆ. ಹೀಗಾಗಿ ಕತ್ರಿನಾ ಕೈಫ್ ಪತಿ ಬಾಲಿವುಡ್ ನಟ ವಿಕ್ಕಿ ಕೌಶಲ್ ನಿರಾಳರಾಗಿ, ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ.

  English summary
  Vicky Kaushal number plate controversy solved. Misunderstanding caused due to a bolt fixed on the number plate said Indore police.
  Monday, January 3, 2022, 19:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X