For Quick Alerts
  ALLOW NOTIFICATIONS  
  For Daily Alerts

  ವಿದ್ಯಾ ಬಾಲನ್ ಗೆ 18 ಸೀರೆ, 14 ಕೋಟಿ ಬಂಗಲೆ

  By Rajendra
  |

  ಇದೇ ಶುಕ್ರವಾರ (ಡಿ.14) ಊ ಲಾ ಲಾ ಬೆಡಗಿ ವಿದ್ಯಾ ಬಾಲನ್ ಮದುವೆ. ಈ ಬಗ್ಗೆ ಬಾಲಿವುಡ್ ನಲ್ಲಿ ಸಂಭ್ರಮ ಮನೆ ಮಾಡಿದೆ. ಕಳೆದ ಎರಡು ವರ್ಷಗಳಿಂದ ಸಿದ್ಧಾರ್ಥ್ ರಾಯ್ ಕಪೂರ್ ಅವರನ್ನು ವಿದ್ಯಾ ಬಾಲನ್ ಪ್ರೀತಿಸುತ್ತಿದ್ದರು.

  ಈಗ ಮದುವೆ ಎಂಬ ಬಾಳ ಬಂಧನಕ್ಕೆ ಒಳಗಾಗುತ್ತಿದ್ದಾರೆ. ವಿದ್ಯಾ ಬಾಲನ್ ಮನೆಯಲ್ಲಿ ಸಂಗೀತ್ ಸಂಭ್ರಮ ಮಂಗಳವಾರ (ಡಿ.11) ಅದ್ದೂರಿಯಾಗಿ ನಡೆಯಿತು. ಈ ಸಂಭ್ರಮದ ಸಡಗರದ ಫೋಟೋಗಳು ಇಲ್ಲಿವೆ.

  ಮದುವೆಯ ಈ ಬಂಧ ಅನುರಾಗದ ಅನುಬಂಧ

  ಮದುವೆಯ ಈ ಬಂಧ ಅನುರಾಗದ ಅನುಬಂಧ

  ವಿವಾಹವನ್ನು ಸರಳವಾಗಿ ಮಾಡಿಕೊಳ್ಳಬೇಕು ಎಂದು ವಿದ್ಯಾ ಹಾಗೂ ಸಿದ್ಧಾರ್ಥ್ ನಿರ್ಧರಿಸಿದ್ದಾರೆ. ಆದರೆ ಬಟ್ಟೆ ಬರೆ ಸೀರೆಗಳ ಖರೀದಿಯಲ್ಲಿ ಮಾತ್ರ ಯಾವುದೇ ಕಂಜೂಸ್ ಮಾಡಿಲ್ಲ. ವಿದ್ಯಾ ಈಗಾಗಲೆ ಮದುವೆಗೆಂದೇ ವಿಶೇಷ ಸೀರೆಗಳನ್ನು ಖರೀದಿಸಿದ್ದಾರೆ.

  ಮದುವೆಗೆ ಹದಿನೆಂಟು ರೇಶ್ಮೆ ಸೀರೆಗಳು

  ಮದುವೆಗೆ ಹದಿನೆಂಟು ರೇಶ್ಮೆ ಸೀರೆಗಳು

  ಡಿಸೈನರ್ ಸವ್ಯಸಾಚಿ ಮುಖರ್ಜಿ ಅವರು 18 ಸೀರೆಗಳನ್ನು ವಿನ್ಯಾಸಗೊಳಿಸಿದ್ದಾರೆ. ಎಲ್ಲವೂ ದಕ್ಷಿಣ ಭಾರತದ ಶೈಲಿಯಲ್ಲಿ ವಿನ್ಯಾಸಗೊಳಿಸಿದ ಸೀರೆಗಳು. 18 ಸೀರೆಗಳಲ್ಲಿ ಒಂದು ಮಾತ್ರ ಮದ್ರಾಸ್ ರೇಷ್ಮೆ ಸೀರೆ. ಇದಕ್ಕಾಗಿ ಅಗತ್ಯವಾದ ರೇಶ್ಮೆಯನ್ನು ತಮಿಳುನಾಡಿನಿಂದ ತರಿಸಿದ್ದರು. ವಿದ್ಯಾ ಅವರ ಅಭಿರುಚಿಗೆ ತಕ್ಕಂತೆ ಸೀರೆಯನ್ನು ವಿನ್ಯಾಸಗೊಳಿಸಲಾಗಿದೆ.

  ರು.14 ಕೋಟಿ ಬಂಗಲೆ ಭರ್ಜರಿ ಉಡುಗೊರೆ

  ರು.14 ಕೋಟಿ ಬಂಗಲೆ ಭರ್ಜರಿ ಉಡುಗೊರೆ

  ಇದಿಷ್ಟೇ ಅಲ್ಲದೆ ಸಿದ್ಧಾರ್ಥ್ ರಾಯ್ ಭಾರಿ ಉಡುಗೊರೆಯನ್ನೂ ಸಿದ್ಧ ಮಾಡಿಕೊಂಡಿದ್ದಾರೆ. ಅದೇನೆಂದರೆ ಐಶಾರಾಮಿ ಬಂಗಲೆ. 'ಸೀ ಫೇಸಿಂಗ್ ಬಂಗ್ಲಾ' ಬೆಲೆ ಸುಮಾರು ರು.14 ಕೋಟಿ. ಮದುವೆ ಬಳಿಕೆ ಈ ಬಂಗಲೆಯಲ್ಲೇ ವಿದ್ಯಾ ಹಾಗೂ ಸಿದ್ಧಾರ್ಥ್ ಕಳೆಯಲಿದ್ದಾರೆ. ಮುಂಬೈನ ಜುಹೂ ತಾರಾ ರಸ್ತೆಯಲ್ಲಿ ಈ ಬಂಗಲೆ ಇದೆ.

  ಪರಿಮಿತ ಸಂಖ್ಯೆಯಲ್ಲಿ ಮಾತ್ರ ಆಹ್ವಾನ

  ಪರಿಮಿತ ಸಂಖ್ಯೆಯಲ್ಲಿ ಮಾತ್ರ ಆಹ್ವಾನ

  ಇನ್ನು ಮದುವೆ ವಿಚಾರಕ್ಕೆ ಬರುವುದಾದರೆ ಕೇವಲ ಆಪ್ತರು, ಸಂಬಂಧಿಕರು ಮಾತ್ರ ಆಹ್ವಾನಿಸಲಾಗಿದೆ. ಪರಿಮಿತ ಸಂಖ್ಯೆಯಲ್ಲಿ ಆಹ್ವಾನ ನೀಡಲಾಗಿದೆ. ಅಮಿತಾಬ್, ಏಕ್ತಾ ಕಪೂರ್ ಸೇರಿದಂತೆ ಮುಂತಾದ ಗಣ್ಯರಿಗೆ ಆಹ್ವಾನಪತ್ರಿಕೆ ಕಳುಹಿಸಿ ಕೊಡಲಾಗಿದೆ.

  ಮದುವೆ ಔತಣಕೂಟ ಚೆನ್ನೈನಲ್ಲಂತೆ

  ಮದುವೆ ಔತಣಕೂಟ ಚೆನ್ನೈನಲ್ಲಂತೆ

  ಮದುವೆ ಮುಂಬೈನಲ್ಲಿ ನೆರವೇರಲಿದೆ. ಮದುವೆ ಔತಣಕೂಟವನ್ನು ಚೆನ್ನೈನಲ್ಲಿ ಏರ್ಪಡಿಸಲಾಗಿದೆ. ಸದ್ಯಕ್ಕೆ ವಿದ್ಯಾ ಬಾಲನ್ 'ಘನ್ ಚಕ್ಕರ್' ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರೀಕರಣ ಕೊನೆಯ ಹಂತದಲ್ಲಿದೆ.

  ಕೆರೇಬಿಯನ್ ದ್ವೀಪಗಳಲ್ಲಿ ಹನಿಮೂನ್

  ಕೆರೇಬಿಯನ್ ದ್ವೀಪಗಳಲ್ಲಿ ಹನಿಮೂನ್

  ವಿದ್ಯಾ ಅವರ ಹನಿಮೂನ್ ಮಾತ್ರ ಕೆರೀಬಿಯನ್ ದ್ವೀಪಗಳಲ್ಲಿ ನಡೆಯುತ್ತದೆ. ಕೆರೀಬಿಯನ್ ಸಮುದ್ರಲ್ಲಿ 7000ಕ್ಕೂ ಅಧಿಕ ದ್ವೀಪಗಳಿವೆ. ಅವುಗಳಲ್ಲಿ ಇವರ ಮಧುಚಂದ್ರಕ್ಕೆ ಸೂಕ್ತ ತಾಣ ಯಾವುದು ಎಂಬುದು ಮಾತ್ರ ಇನ್ನೂ ನಿಗೂಢವಾಗಿದೆ.


  ಮುಂಬೈನ ಚೆಂಬೂರು ಪ್ರದೇಶದ ಶ್ರೀಸುಬ್ರಹ್ಮಣ್ಯ ಸಮಾಜ್ ದೇವಸ್ಥಾನದಲ್ಲಿ ಇವರಿಬ್ಬರು ಮದುವೆಯಾಗುತ್ತಿದ್ದಾರೆ. ಪಂಜಾಬಿ ಹಾಗೂ ಮಲಯಾಳಿ ಸಂಪ್ರದಾಯದಂತೆ ಮದುವೆ ನಡೆಯಲಿದೆ. ಸಿದ್ಧಾರ್ಥ್ ಪಂಜಾಬಿಯಾದರೆ ವಿದ್ಯಾ ಮಲಯಾಳಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಇದು ಅಂತರ್ಧಮೀಯ ವಿವಾಹ.
  English summary
  It is ringing wedding bells in Bollywood again! Vidya Balan and Siddharth Roy Kapur are ready to tie the knot and here are the elated and glowing couple at a private wedding bash organized for close family and friends.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X