For Quick Alerts
  ALLOW NOTIFICATIONS  
  For Daily Alerts

  ಬಾಕ್ಸ್ ಆಫೀಸ್ ನಲ್ಲಿ 'ಬೇಗಂ ಜಾನ್' ನರ್ತನ

  By Suneel
  |

  ಏಪ್ರಿಲ್ 14 ರಂದು ಬಿಡುಗಡೆ ಆದ ವಿದ್ಯಾಬಾಲನ್ ಮುಖ್ಯ ಭೂಮಿಕೆಯ 'ಬೇಗಂ ಜಾನ್' ಚಿತ್ರವು ದೇಶದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಶ್ರೀಜಿತ್ ಮುಖರ್ಜಿ ಆಕ್ಷನ್ ಕಟ್ ಹೇಳಿರುವ ಈ ಚಿತ್ರ ಈಗ ಬಾಕ್ಸ್ ಆಫೀಸ್ ಗಳಿಕೆಯಲ್ಲೂ ಉತ್ತಮ ರೆಸ್ಪಾನ್ಸ್ ನೀಡಿದೆ.[ವಿಮರ್ಶೆ: ಬೇಗಂ ಓಕೆ, 'ಜಾನ್' ನಲ್ಲಿ ಧಮ್ ಇಲ್ಲ]

  ಬಿಡುಗಡೆ ಆದ ದಿನದಂದು 3.50 ಕೋಟಿ ಗಳಿಸಿದ್ದ 'ಬೇಗಂ ಜಾನ್', ಎರಡನೇ ದಿನ 3.25 ಕೋಟಿ ಬಾಚಿದ್ದು, ಒಟ್ಟಾರೆ ಎರಡು ದಿನಗಳ ಅಂತ್ಯಕ್ಕೆ 6.75 ಕೋಟಿಯನ್ನು ಬಾಕ್ಸ್ ಆಫೀಸ್ ಗೆ ನೀಡಿದೆ ಎಂದು Boxofficeindia.com ವರದಿ ಮಾಡಿದೆ. ಅಲ್ಲದೇ ಆರಂಭಿಕ ದಿನಗಳಲ್ಲೇ ಉತ್ತಮ ರೆಸ್ಪಾನ್ಸ್ ಪಡೆದಿರುವ ಕಾರಣ ಬಾಕ್ಸ್ ಆಫೀಸ್ ನಿರೀಕ್ಷೆಯನ್ನು ಮುಟ್ಟುವ ಭರವಸೆಯನ್ನು ಚಿತ್ರ ನೀಡಿದೆ.

  ವಿದ್ಯಾಬಾಲನ್ ಅಭಿನಯದ 'ಬೇಗಂ ಜಾನ್' ಬೆಂಗಾಲಿ ಸಿನಿಮಾ 'ರಾಜ್ ಕಹಿನಿ'ಯ ಹಿಂದಿ ರಿಮೇಕ್ ಚಿತ್ರ. ದೇಶ ವಿಭಜನೆ ಬಳಿಕ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಕೊಂಡಿದ್ದ ಮಹಿಳೆಯರು, ರಾಣಿಯರಂತೆ ಹೋರಾಟ ಮಾಡಿರುವ ಸತ್ಯಘಟನೆ ಆಧಾರಿತ ಚಿತ್ರಕಥೆ ಹೊಂದಿರುವ ಸಿನಿಮಾ.

  ವಿದ್ಯಾಬಾಲನ್ ಸಖತ್ ಬೋಲ್ಡ್ ಮತ್ತು ಜಬರ್ದಸ್ತ್ ಲುಕ್ ನಲ್ಲಿ ಕಾಣಿಸಿಕೊಂಡಿರುವ 'ಬೇಗಂ ಜಾನ್' ನಲ್ಲಿ, ನಾಸಿರುದ್ದೀನ್ ಶಾ, ಗೌಹರ್ ಖಾನ್, ಇಳಾ ಅರುಣ್, ರಜಿತ್ ಕಪೂರ್, ಚುಂಕಿ ಪಾಂಡೆ, ಪೂನಂ ಸಿಂಗ್ ರಾಜ್ ಪುತ್, ಪಲ್ಲವಿ ಶಾರ್ದ, ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

  English summary
  Vidya Balan Starrer 'Begum Jaan' collected Rs 3.25 crore on its first Saturday after opening at Rs 3.50 crore, according to a report on Boxofficeindia.com. This takes its two-day total to Rs 6.75 crore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X