For Quick Alerts
  ALLOW NOTIFICATIONS  
  For Daily Alerts

  'ಕಹಾನಿ-2' ವಿಮರ್ಶೆ: ವಿದ್ಯಾಬಾಲನ್ ಅಭಿನಯ 'ಕಹಾನಿ-2' ಚಿತ್ರದ ನೈಜ ಶಕ್ತಿ

  By Bharath Kumar
  |

  ವಿದ್ಯಾಬಾಲನ್ ಹಾಗೂ ನಟ ಅರ್ಜುನ್ ರಾಮ್ ಪಾಲ್ ಮೊದಲ ಬಾರಿಗೆ ಜತೆಯಾಗಿ ಅಭಿನಯಿಸಿರುವ 'ಕಹಾನಿ-2' ಚಿತ್ರ, ಇಂದು ಬಿಡುಗಡೆಯಾಗಿದೆ. ಸುಜೋಯ್ ಘೋಷ್ ನಿರ್ದೇಶನದ 'ಕಹಾನಿ-2' ಸಸ್ಪೆನ್ಸ್ ಥ್ರಿಲ್ಲಿಂಗ್ ಸಿನಿಮಾ ಅಂತ ಹೇಳಲಾಗುತ್ತಿತ್ತು. ಈ ನಿರೀಕ್ಷೆಯಂತೆ ಚಿತ್ರಮಂದಿರದಲ್ಲೂ ಆ ಕುತೂಹಲವನ್ನ 'ಕಹಾನಿ-2' ಕಾಪಾಡಿಕೊಂಡಿದೆ.

  Rating:
  3.0/5

  ಚಿತ್ರ: ಕಹಾನಿ-2
  ನಿರ್ದೇಶನ: ಸುಜೋಯ್ ಘೋಷ್
  ಕಥೆ, ಚಿತ್ರಕಥೆ: ಸುಜೋಯ್ ಘೋಷ್
  ಕಲಾವಿದರು: ವಿದ್ಯಾಬಾಲನ್, ಅರ್ಜುನ್ ರಾಮ್ ಪಾಲ್

  ಕಥಾಹಂದರ
  ''ವಿದ್ಯಾಬಾಲನ್ ಗೆ (ವಿದ್ಯಾ ಸಿನ್ಹಾ), ಪಾರ್ಶ್ವವಾಯುಗೊಳಗಾಗಿರುವ ಅವರ ಮಗಳು (ಮಿನಿ) ಅಂದ್ರೆ ತುಂಬಾ ಇಷ್ಟ. ತಮ್ಮ ಮಗಳಿಗೆ ನ್ಯೂಯಾರ್ಕ್ ಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಬೇಕು ಎಂಬ ಆಶಯವನ್ನ ವಿದ್ಯಾಬಾಲನ್ ಹೊಂದಿರುತ್ತಾಳೆ. ಆದ್ರೆ, ಒಂದು ದಿನ ವಿದ್ಯಾಬಾಲನ್ ಕೆಲಸದಿಂದ ಮನೆಗೆ ಬರುವಷ್ಟರಲ್ಲಿ ತಮ್ಮ ಮಗಳು ಕಾಣೆಯಾಗಿರುತ್ತಾಳೆ. ಮಗಳಿಗಾಗಿ ಹುಡುಕಾಟ ನಡೆಸುವ ವಿದ್ಯಾಬಾಲನ್ ಗೆ ರಸ್ತೆ ಅಪಘಾತವಾಗುತ್ತೆ. ರಸ್ತೆ ಅಪಘಾತವಾಗಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾಬಾಲನ್ ಹಿನ್ನೆಲೆ ಪತ್ತೆಗೆ ಹೊರಡುವ ಪೊಲೀಸ್‌ ಅಧಿಕಾರಿ, ಕೊಲೆ ಮತ್ತು ಅಪಹರಣ ಪ್ರಕರಣದಲ್ಲಿ ಅವಳನ್ನೇ ಹುಡುಕುತ್ತಿರುವ ಮತ್ತೊಬ್ಬ ಪೊಲೀಸ್‌, ದುರ್ಗಾರಾಣಿ ಸಿಂಗ್‌ ಕಥೆಯನ್ನು ಬರೆದುಕೊಂಡಿರುವ ದಿನಚರಿ ಪುಸ್ತಕ, ಮಗಳ ಮಾತು,... ಹೀಗೆ ಹಲವು ತಿರುವುಗಳನ್ನು ಹೊಂದಿರುವ ರೋಚಕ ಕಥೆ 'ಕಹಾನಿ 2'.

  Vidya Balan Starrer Kahaani 2 Movie Review

  ಅಭಿನಯ
  ವಿದ್ಯಾಬಾಲನ್ ಅವರ ಅಭಿನಯದ ಚಿತ್ರದ ಪ್ಲಸ್ ಪಾಯಿಂಟ್. ಇಡೀ ಚಿತ್ರವನ್ನ ವಿದ್ಯಾಬಾಲನ್ ಆವರಿಸಿಕೊಂಡಿದ್ದಾರೆ. ವಿದ್ಯಾಬಾಲನ್ ಬಾಲಿವುಡ್ ಬೆಸ್ಟ್ ಫರ್ಫಾಮರ್ ಎನ್ನುವುದಕ್ಕೆ 'ಕಹಾನಿ 2' ತಾಜಾ ಉದಾಹರಣೆ. ಭಯ, ಆತಂಕ, ದುಃಖ ಹೀಗೆ ಪ್ರತಿಯೊಂದು ದೃಶ್ಯದಲ್ಲೂ ವಿದ್ಯಾ ಬಾಲನ್ ಅವರು ಗಮನ ಸೆಳೆಯುತ್ತಾರೆ. ಇನ್ನೂ ಅರ್ಜುನ್ ರಾಮ್ ಪಾಲ್ ಕೂಡ ತಮ್ಮದೇ ಆದ ಆಕ್ಟಿಂಗ್ ಮೂಲಕ ಚಿತ್ರಕ್ಕೆ ಸಾಥ್ ಕೊಟ್ಟಿದ್ದಾರೆ. ನೈಶಾ ಖನ್ನಾ, ಜುಗಲ್ ಹನ್ಸ್ ರಾಜ್ ತಮ್ಮ ಪಾತ್ರಗಳನ್ನ ಉತ್ತಮವಾಗಿ ನಿಭಾಯಿಸಿದ್ದಾರೆ.

  ನಿರ್ದೇಶನ
  ಸುಜೋಯ್ ಘೋಷ್ ಅವರ ನಿರ್ದೇಶನ ಚೆನ್ನಾಗಿದೆ. 'ಕಹಾನಿ' ಚಿತ್ರದಂತೆ 'ಕಹಾನಿ 2' ಚಿತ್ರದಲ್ಲೂ ಮೋಡಿ ಮಾಡಿದ್ದಾರೆ. ಕುತೂಹಲವಾಗಿ ಕಥೆಯನ್ನ ಹೆಣೆಯಲಾಗಿದ್ದು, ಅತ್ಯುತ್ತಮ ಚಿತ್ರಕಥೆ ಮಾಡಿದ್ದಾರೆ.

  ಸಂಗೀತ
  'ಕಹಾನಿ 2' ಚಿತ್ರದಲ್ಲಿ ಹಾಡುಗಳಿಗೆ ಪ್ರಾಮುಖ್ಯತೆಯಿಲ್ಲ. ಆದ್ರೆ, ಚಿತ್ರದ ಹಿನ್ನಲೆ ಸಂಗೀತ ಶಕ್ತಿಯುತವಾಗಿದ್ದು, ಕಥೆಗೆ ಪೂರಕವಾಗಿದೆ. ತಪನ್ ಬಸು ಅವರ ಛಾಯಗ್ರಹಣ ಹಾಗೂ ನರ್ಮತಾ ರಾವ್ ಅವರ ಸಂಕಲನ ಗಮನ ಸೆಳೆಯುತ್ತೆ.

  ಒಟ್ಟಾರೆ, 'ಕಹಾನಿ 2' ಚಿತ್ರ ಕುತೂಹಲಭರಿತವಾಗಿದ್ದು, ಪ್ರೇಕ್ಷಕರನ್ನ ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಥ್ರಿಲ್ಲಿಂಗ್ ಇಷ್ಟ ಪಡುವ ಪ್ರೇಕ್ಷಕರಿಗೆ ವಿದ್ಯಾಬಾಲನ್ ಅವರ 'ದುರ್ಗ ರಾಣಿ ಸಿಂಗ್' ಪಾತ್ರ ಸಖತ್ ಮನರಂಜನೆ ನೀಡುತ್ತೆ.

  English summary
  Bollywood Actress Vidyabalan starerr Kahani 2 has hit the screens today (December 02nd). The movie Directed by sujoy ghosh. here is the complete review of Kahani 2

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X