Don't Miss!
- News
'ರಾಜ್ಯದ ಜನ ಮತ್ತೆ ಬಿಎಸ್ ಯಡಿಯೂರಪ್ಪರನ್ನು ನಂಬುವುದಿಲ್ಲ: ಸಿದ್ದರಾಮಯ್ಯ ವಾಗ್ದಾಳಿ
- Sports
ಭಾರತ vs ಆಸ್ಟ್ರೇಲಿಯಾ: ಅದುವೇ ನನ್ನ ಜೀವನದ ಅತ್ಯಂತ ಶ್ರೇಷ್ಠ ಸರಣಿ ಎಂದ ಚೇತೇಶ್ವರ್ ಪೂಜಾರ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಮೀರ್ ಖಾನ್ ಸಿನಿಮಾ ಒಲ್ಲೆ ಎಂದು, ಶಾರುಖ್ ಸಿನಿಮಾಕ್ಕೆ ಎಸ್ ಎಂದ ವಿಜಯ್ ಸೇತುಪತಿ
ನಟ ವಿಜಯ್ ಸೇತುಪತಿ ದಕ್ಷಿಣ ಭಾರತದ ಅತ್ಯಂತ ಬ್ಯುಸಿ ಹಾಗೂ ಪ್ರತಿಭಾವಂತ ನಟ. ಗಂಟೆಗಳ ಆಧಾರದಲ್ಲಿ ಕಾಲ್ ಶೀಟ್ ನೀಡುವ ವಿಜಯ್ ಸೇತುಪತಿ ಅದೇ ಲೆಕ್ಕಾಚಾರದಲ್ಲಿ ಸಂಭಾವನೆ ಪಡೆಯುತ್ತಾರೆ!
ಕೋವಿಡ್ ನಡುವೆಯೂ 2021 ರಲ್ಲಿ ವಿಜಯ್ ನಟಿಸಿರುವ ಒಂಬತ್ತು ಸಿನಿಮಾಗಳು ತೆರೆಗೆ ಬಂದಿವೆ! 2022 ಪ್ರಾರಂಭವಾಗಿ ಕೇವಲ ಏಳು ತಿಂಗಳಾಗಿವೆ. ಈವರೆಗೆ ವಿಜಯ್ ನಟಿಸಿರುವ ನಾಲ್ಕು ಸಿನಿಮಾಗಳು ಬಿಡುಗಡೆ ಆಗಿದ್ದು, ಎರಡು ಸಿನಿಮಾಗಳು ಬಿಡುಗಡೆ ಹಂತದಲ್ಲಿವೆ. ಮೂರು ಸಿನಿಮಾಗಳ ಚಿತ್ರೀಕರಣ ನಡೆಯುತ್ತಿವೆ. ಈ ವರ್ಷ ವಿಜಯ್ ಸೇತುಪತಿ ನಟನೆಯ ಅಂದಾಜು 13-14 ಸಿನಿಮಾಗಳು ಬಿಡುಗಡೆ ಆದರೆ ಅಚ್ಚರಿಯಿಲ್ಲ.
'ಪುಷ್ಪ
2'ಗೆ
ಎಂಟ್ರಿಕೊಟ್ಟ
ವಿಜಯ್
ಸೇತುಪತಿ!
ವಿಜಯ್ ಸೇತುಪತಿಗೆ ತಮಿಳು-ತೆಲುಗಿನಲ್ಲಿ ಮಾತ್ರವೇ ಅಲ್ಲದೆ ಹಿಂದಿಯಲ್ಲಿಯೂ ದೊಡ್ಡ ಮಟ್ಟದ ಬೇಡಿಕೆ ಇದೆ. ಅದೂ ದೊಡ್ಡ ಸ್ಟಾರ್ ನಟರೇ ತಮ್ಮ ಸಿನಿಮಾಗಳಲ್ಲಿ ವಿಜಯ್ ಸೇತುಪತಿಯನ್ನು ಹಾಕಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಹಿಂದೆ ಅಮೀರ್ ಖಾನ್ ತಮ್ಮ ಸಿನಿಮಾದಲ್ಲಿ ನಟಿಸುವಂತೆ ವಿಜಯ್ ಸೇತುಪತಿಗೆ ಆಹ್ವಾನ ನೀಡಿದ್ದರು, ಆದರೆ ಆಗ ಬೇಡ ಎಂದಿದ್ದ ವಿಜಯ್ ಈಗ ಶಾರುಖ್ ಖಾನ್ ಸಿನಿಮಾದಲ್ಲಿ ನಟಿಸಲು ಯೆಸ್ ಎಂದಿದ್ದಾರೆ.

'ಜವಾನ್' ಸಿನಿಮಾದಲ್ಲಿ ವಿಜಯ್ ಸೇತುಪತಿ
ಶಾರುಖ್ ಖಾನ್ ನಟನೆಯ 'ಜವಾನ್' ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದ್ದು, ಸಿನಿಮಾದ ಮುಖ್ಯ ಪಾತ್ರಗಳಲ್ಲಿ ನಟಿಸುವ ಕಲಾವಿದರ ಹೆಸರುಗಳು ಒಂದೊಂದಾಗಿ ಬಹಿರಂಗಗೊಳ್ಳುತ್ತಿವೆ. 'ಜವಾನ್' ಸಿನಿಮಾದಲ್ಲಿ ನಯನತಾರಾ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಅಂಶ ಬಹಿರಂಗವಾಗಿತ್ತು. ಇದೀಗ ಈ ಸಿನಿಮಾದಲ್ಲಿ ವಿಲನ್ ಪಾತ್ರವನ್ನು ವಿಜಯ್ ಸೇತುಪತಿ ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ.
'ವಿಕ್ರಂ'
ಸಿನಿಮಾಕ್ಕೆ
ಕಮಲ್
ಹಾಸನ್
ಪಡೆದ
ಸಂಭಾವನೆ
ಎಷ್ಟು?
ವಿಜಯ್,
ಫಹಾದ್ಗೆ
ಸಿಕ್ಕಿದ್ದೆಷ್ಟು?

ರಾಣಾ ದಗ್ಗುಬಾಟಿಯನ್ನು ಕೇಳಲಾಗಿತ್ತು
'ಜವಾನ್' ಸಿನಿಮಾದಲ್ಲಿ ನಾಯಕನ ಪಾತ್ರದಷ್ಟೆ ವಿಲನ್ ಪಾತ್ರ ಸಹ ಶಕ್ತಿಶಾಲಿಯಾಗಿದ್ದು, ಈ ಪಾತ್ರಕ್ಕಾಗಿ ಮೊದಲಿಗೆ ರಾಣಾ ದಗ್ಗುಬಾಟಿಯನ್ನು ಕೇಳಲಾಗಿತ್ತಂತೆ, ಆದರೆ ರಾಣಾ ದಗ್ಗುಬಾಟಿ ಆರೋಗ್ಯ ಹಾಗೂ ಡೇಟ್ಸ್ ಸಮಸ್ಯೆಯಿಂದಾಗಿ ಸಿನಿಮಾ ನಿರಾಕರಿಸಿದ್ದಾರೆ. ಬಳಿಕ ಪಾತ್ರ ವಿಜಯ್ ಸೇತುಪತಿ ಬಳಿ ತೆರಳಿದೆ. ವಿಜಯ್ ಸೇತುಪತಿ ಈ ದೊಡ್ಡ ಅವಕಾಶವನ್ನು ಬಿಟ್ಟಿಲ್ಲ. ಈ ಹಿಂದೆ ಅಮೀರ್ ಖಾನ್ ತಮ್ಮ 'ಲಾಲ್ ಸಿಂಗ್ ಛಡ್ಡಾ' ಸಿನಿಮಾದಲ್ಲಿ ನಟಿಸುವಂತೆ ಕೇಳಿದಾಗ ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಸಿನಿಮಾದಲ್ಲಿ ನಟಿಸಿರಲಿಲ್ಲ ವಿಜಯ್ ಸೇತುಪತಿ.

ಹಲವು ದಕ್ಷಿಣ ಭಾರತದ ನಟರು 'ಜವಾನ್' ಸಿನಿಮಾದಲ್ಲಿ
ಬಾಲಿವುಡ್ ಸಿನಿಮಾ 'ಜವಾನ್' ನಲ್ಲಿ ಹಲವು ದಕ್ಷಿಣ ಭಾರತದ ನಟರು ನಟಿಸುತ್ತಿದ್ದಾರೆ. ತಮಿಳಿನ ಸ್ಟಾರ್ ನಿರ್ದೇಶನದ ಅಟ್ಟಿಲಿ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ನಯನತಾರಾ, ಯೋಗಿ ಬಾಬು, ಪ್ರಿಯಾಮಣಿ ಇನ್ನೂ ಕೆಲವರಿದ್ದಾರೆ. ಇವರ ಜೊತೆಗೆ ಬಾಲಿವುಡ್‌ನವರಾದ ನಟಿ ಸಾನ್ಯಾ ಮಲ್ಹೋತ್ರಾ, ಸುನಿಲ್ ಗ್ರೋವರ್, ಸಿಮರ್‌ಜಿತ್ ಸಿಂಗ್ ನಾಗ್ರಾ, ಅಜ್ಜಿ ಬಗೀರ ಇನ್ನೂ ಕೆಲವರಿದ್ದಾರೆ. ಈ ಸಿನಿಮಾದ ಮೂಲಕ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್ ಬಾಲಿವುಡ್‌ಗೆ ಪ್ರವೇಶ ಪಡೆಯುತ್ತಿದ್ದಾರೆ.

ಹಲವು ಸಿನಿಮಾಗಳಲ್ಲಿ ವಿಜಯ್ ಸೇತುಪತಿ ಬ್ಯುಸಿ
ಇನ್ನು ವಿಜಯ್ ಸೇತುಪತಿ ಪ್ರಸ್ತುತ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಿಂದಿಯ 'ಮೇರಿ ಕ್ರಿಸ್‌ಮಸ್', 19 (1) (ಎ) ಹೆಸರಿನ ಮಲಯಾಳಂ ಸಿನಿಮಾ, 'ವಿಧುತಲೈ' ತಮಿಳು ಸಿನಿಮಾ, ಮೂಕಿ ಸಿನಿಮಾ 'ಗಾಂಧಿ ಟಾಕೀಸ್', ಹಿಂದಿ ಸಿನಿಮಾ 'ಮುಂಬೈಕರ್' ಚಿತ್ರೀಕರಣಗಳಲ್ಲಿ ವಿಜಯ್ ಸೇತುಪತಿ ತೊಡಗಿಸಿಕೊಂಡಿದ್ದಾರೆ. ಇದರ ಜೊತೆಗೆ ತೆಲುಗಿನ 'ಪುಷ್ಪ 2' ಸಿನಿಮಾದ ವಿಲನ್ ಪಾತ್ರದಲ್ಲಿ ವಿಜಯ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ತಮಿಳಿನ 'ವಿಕ್ರಮ್' ಸಿನಿಮಾದ ಮುಂದಿನ ಭಾಗದಲ್ಲಿಯೂ ವಿಜಯ್ ಸೇತುಪತಿ ಇರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಂದಹಾಗೆ ಶಾರುಖ್ ಖಾನ್‌ರ 'ಜವಾನ್' ಸಿನಿಮಾ ಜನವರಿ 25, 2023 ಕ್ಕೆ ಬಿಡುಗಡೆ ಆಗಲಿದೆ.