'ಬ್ರಹ್ಮಾಸ್ತ್ರ 2'ನಲ್ಲಿ ಹೃತಿಕ್ ರೋಷನ್ ನಟಿಸೋದು ನಿಜವೇ? ಹ್ಯಾಂಡ್ಸಮ್ ಹಂಕ್ ಕೊಟ್ಟ ಸುಳಿವೇನು?

ಈ ವರ್ಷ ಬಾಲಿವುಡ್ ಮರ್ಯಾದೆ ಉಳಿಸಿದ ಸಿನಿಮಾಗಳಲ್ಲಿ 'ಬ್ರಹ್ಮಾಸ್ತ್ರ' ಕೂಡ ಒಂದು. ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಕಾಂಬಿನೇಷನ್ ಸಿನಿಮಾ ಇನ್ನೂ ಬಾಕ್ಸಾಫೀಸ್‌ನಲ್ಲಿ ಗಟ್ಟಿಯಾಗಿ ನಿಂತಿದೆ. ಹೀಗಾಗಿ 'ಬ್ರಹ್ಮಾಸ್ತ್ರ 2' ಬರೋದು ಬಹುತೇಕ ಪಕ್ಕಾ ಅಂತಾಗಿದೆ.

ಈ ಸಿನಿಮಾ ಮೂರು ಭಾಗಗಳಲ್ಲಿ ನಿರ್ಮಾಣ ಆಗತ್ತೆ ಅನ್ನೋ ಸುಳಿವನ್ನು ನಿರ್ದೇಶಕ ಅಯಾನ್ ಮುಖರ್ಜಿ ನೀಡಿದ್ದರು. 'ಬ್ರಹ್ಮಾಸ್ತ್ರ' ಸಿನಿಮಾದ ಮೊದಲ ಭಾಗ ಈಗಾಗಲೇ ರಿಲೀಸ್ ಆಗಿದೆ. ಈಗಾಗಲೇ ಈ ಸಿನಿಮಾ 400 ಕೋಟಿ ರೂ. ಕ್ಲಬ್ ಕೂಡ ಸೇರಿದೆ.

Vikram Vedha Actor Hrithik Roshan Gave Hint About Being Part Of Brahmastra 2 As Dev

ಈ ಬೆನ್ನಲೇ ಕಳೆದ ಕೆಲವು ದಿನಗಳಿಂದ ಬಾಲಿವುಡ್‌ನಲ್ಲಿ 'ಬ್ರಹ್ಮಾಸ್ತ್ರ' ಪಾರ್ಟ್ 2 ಬಗ್ಗೆನೂ ಹಲ್‌ಚಲ್ ಎದ್ದಿತ್ತು. 'ಬ್ರಹ್ಮಾಸ್ತ್ರ 2' ನಲ್ಲಿ ದೇವ್ ಪಾತ್ರದಲ್ಲಿ ಬಾಲಿವುಡ್‌ನ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ ನಟಿಸುತ್ತಿದ್ದಾರೆ ಅಂತ ಸುದ್ದಿಯಾಗಿತ್ತು. ಅದಕ್ಕೀಗ ಹೃತಿಕ್ ಪರೋಕ್ಷವಾಗಿ ಸುಳಿವು ನೀಡಿದ್ದಾರೆ.

'ಬ್ರಹ್ಮಾಸ್ತ್ರ' ಎರಡನೇ ಪಾರ್ಟ್‌ನಲ್ಲಿ ದೇವ್ ಪಾತ್ರ ಪ್ರಮುಖವಾಗಿರುತ್ತೆ. ಹೀಗಾಗಿ ಪವರ್‌ ಫುಲ್ ರೋಲ್‌ಗೆ ಮತ್ತೊಬ್ಬ ಬಾಲಿವುಡ್ ದಿಗ್ಗಜನನ್ನೇ ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಲಾಗಿತ್ತು. ಅದಕ್ಕೀಗ ಹೃತಿಕ್ ರೋಷನ್ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗೆ 'ವಿಕ್ರಂ ವೇದ' ಪ್ರಚಾರದಲ್ಲಿ ಹೃತಿಕ್ ರೋಷನ್ ಭಾಗಿಯಾಗಿದ್ದರು. ಈ ವೇಳೆ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಪ್ರಶ್ನೆಯನ್ನು ಕೇಳಲಾಗಿತ್ತು. "ವಿಕ್ರಂ ವೇದ ಸಿನಿಮಾ ಮುಗಿದ ಬಳಿಕ ಫೈಟರ್ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗುತ್ತೇನೆ. ಆ ಬಳಿಕ ನೀವು ಈಗಾಗಲೇ ಹೇಳುತ್ತಿರುವ ಸಿನಿಮಾದಲ್ಲೂ ನಟಿಸುವ ಸಾಧ್ಯತೆಯಿದೆ." ಎಂದು ಹೃತಿಕ್ ರೋಷನ್ ಸುಳಿವು ನೀಡಿದ್ದಾರೆ.

Vikram Vedha Actor Hrithik Roshan Gave Hint About Being Part Of Brahmastra 2 As Dev

ಹೀಗಾಗಿ ಹೃತಿಕ್ ರೋಷನ್ ಎರಡು ಬಿಗ್ ಬಜೆಟ್ ಸಿನಿಮಾಗಳಲ್ಲಿ ನಟಿಸೋದು ಪಕ್ಕಾ. ಅಯಾನ್ ಮುಖರ್ಜಿ ನಿರ್ದೇಶನದ 'ಬ್ರಹ್ಮಾಸ್ತ್ರ 2' ಹೃತಿಕ್ ನಟಿಸಿದ್ರೆ, ಆ ಬಳಿಕ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ರಾಮಾಯಣದಲ್ಲೂ ಅಭಿನಯಿಸಲಿದ್ದಾರೆ ಎಂದು ಸುದ್ದಿಯಾಗುತ್ತಿದೆ.

ಸದ್ಯ ಇದೇ ಸೆಪ್ಟೆಂಬರ್ 30 ರಂದು ಹೃತಿಕ್ ರೋಷನ್ ಹಾಗೂ ಸೈಫ್ ಅಲಿಖಾನ್ ಜೊತೆಯಾಗಿ ನಟಿಸಿದ 'ವಿಕ್ರಂ ವೇದ' ರಿಲೀಸ್ ಆಗುತ್ತಿದೆ. ಇದು ತಮಿಳಿನ 'ವಿಕ್ರಂ ವೇದ' ಸಿನಿಮಾದ ರಿಮೇಕ್. ನವರಾತ್ರಿಗೆ ಈ ಪವರ್‌ಫುಲ್ ಸಿನಿಮಾ ರಿಲೀಸ್ ಆಗಲಿದ್ದು, ಪ್ರೇಕ್ಷಕರು ಪ್ರತಿಕ್ರಿಯೆ ಹೇಗಿರುತ್ತೆ ಅನ್ನೋ ಕುತೂಹಲ ಬಾಲಿವುಡ್ ಮಂದಿಗಿದೆ.

More from Filmibeat

English summary
Vikram Vedha Actor Hrithik Roshan Gave Hint About Being Part Of Brahmastra 2 As Dev, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X