Just In
- 1 hr ago
ಬಾಯ್ ಫ್ರೆಂಡ್ ನನ್ನು ತಬ್ಬಿಕೊಂಡಿದ್ದಾರಾ ಕತ್ರಿನಾ ಕೈಫ್; ಇದು ಆ ಸ್ಟಾರ್ ನಟನೇ ಎನ್ನುತ್ತಿದ್ದಾರೆ ನೆಟ್ಟಿಗರು
- 2 hrs ago
ತಮನ್ನಾ ಮತ್ತು ವಿರಾಟ್ ಕೊಹ್ಲಿಗೆ ಕೇರಳ ಹೈಕೋರ್ಟ್ ನೋಟಿಸ್
- 3 hrs ago
ಕಿಶೋರ್ ಮತ್ತು ಹರಿಪ್ರಿಯಾ ನಟನೆಯ 'ಅಮೃತಮತಿ' ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ
- 11 hrs ago
ಡ್ರಗ್ಸ್ ಪ್ರಕರಣ: ಇಂದ್ರಜಿತ್ ಲಂಕೇಶ್ ಗೆ ಮತ್ತೆ ಬುಲಾವ್ ನೀಡಿದ ಸಿಸಿಬಿ
Don't Miss!
- Sports
ಆಲ್ರೌಂಡರ್ ವಿಜಯ್ ಶಂಕರ್ ದಾಂಪತ್ಯದ ಇನ್ನಿಂಗ್ಸ್ ಆರಂಭ
- News
ಚಿನ್ನದ ಬೆಲೆ ಸತತ 5ನೇ ದಿನ ಇಳಿಕೆ: ಬೆಳ್ಳಿ ಬೆಲೆಯು ಕುಸಿತ
- Finance
ಭಾರತದ ಮಾರುಕಟ್ಟೆಯಲ್ಲಿ ಈಗ ಚೀನಾ ಸ್ಮಾರ್ಟ್ ಫೋನ್ ಗಳದ್ದೇ ಹಿಡಿತ
- Automobiles
3 ಡೋರುಗಳ, 5 ಡೋರುಗಳ ಫೇಸ್ಲಿಫ್ಟ್ ಆವೃತ್ತಿಗಳನ್ನು ಪರಿಚಯಿಸಿದ ಮಿನಿ
- Lifestyle
ಕರ್ನಾಟಕ ಶೈಲಿಯ ಅವರೆಕಾಳು ಚಿತ್ರಾನ್ನ ನಿಮಗಾಗಿ
- Education
BEL Recruitment 2021: 22 ಸರಂಕ್ಷಣೆ ಅಧಿಕಾರಿ, ಕಿರಿಯ ಮೇಲ್ವಿಚಾರಕರು ಮತ್ತು ಹವಿಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸುದ್ದಿವಾಹಿನಿಗಳ ವಿರುದ್ಧ ಗೆದ್ದ ರಕುಲ್ ಪ್ರೀತ್ ಸಿಂಗ್: ನಟಿ ಬಳಿ ಕ್ಷಮೆ ಕೇಳಿ ಎಂದ ಎನ್‌ಬಿಎಸ್ಎ
ಬಾಲಿವುಡ್ ಡ್ರಗ್ಸ್ ಪ್ರಕರಣಗಳ ತನಿಖೆ ಆರಂಭವಾದಾಗ ನಟಿ ರಕುಲ್ ಪ್ರೀತ್ ಸಿಂಗ್ ಹೆಸರು ಸಹ ಅದರಲ್ಲಿ ಕೇಳಿ ಬಂದಿತ್ತು. ನಟಿಗೆ ನೊಟೀಸ್ ನೀಡಿದ್ದ ಎನ್‌ಸಿಬಿ ವಿಚಾರಣೆಯನ್ನು ಸಹ ನಡೆಸಿತ್ತು.
ಆ ಸಂದರ್ಭದಲ್ಲಿ ರಕುಲ್ ವಿರುದ್ಧ ಸುದ್ದಿವಾಹಿನಿಗಳಲ್ಲಿ ಕೆಲವು ವರದಿಗಳು ಪ್ರಕಟವಾಗಿದ್ದವು. ಕೆಲವು ವರದಿಗಳಲ್ಲಿ ರಕುಲ್ ಅಪರಾಧಿ ಎಂಬಂತೆ ಬಿಂಬಿಸಲಾಗಿತ್ತು. ತಮ್ಮ ವಿರುದ್ಧ ಸುಳ್ಳು ಸುದ್ದಿ ಪ್ರಕಟಿಸಿದ್ದ ಕೆಲವು ಮಾಧ್ಯಗಳ ವಿರುದ್ಧ ದೂರು ನೀಡಿದ್ದರು ರಾಕುಲ್ ಪ್ರೀತ್ ಸಿಂಗ್, ಈ ಪ್ರಕರಣದಲ್ಲಿ ರಕುಲ್ ಗೆ ಜಯವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಕಣ್ಣು ಕುಕ್ಕುತ್ತಿದೆ ರಕುಲ್ ಪ್ರೀತ್ ಬಿಕಿನಿ ಫೋಟೋ
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ನಿಂದನಾತ್ಮಕ ಸುದ್ದಿಯನ್ನು ಪ್ರಕಟಿಸಿದ್ದಾರೆ ಎಂದು ರಕುಲ್ ಪ್ರೀತ್ ಸಿಂಗ್ ದೂರು ನೀಡಿದ್ದರು. ಇದರ ವಿಚಾರಣೆ ನಡೆಸಿದ , ಎನ್‌ಬಿಎಸ್‌ಎ (ಸುದ್ದಿ ಪ್ರಸಾರ ಮಾನದಂಡಗಳ ಪ್ರಾಧಿಕಾರ), ಮೂರು ಸುದ್ದಿವಾಹಿನಿಗಳ ವಿರುದ್ಧ ಶಿಸ್ತು ಕ್ರಮ ಪ್ರಕಟಿಸಿದೆ.

ಮೂರು ಸುದ್ದಿವಾಹಿನಿಗಳಿಗೆ ತಪರಾಕಿ ಹಾಕಿದ ಎನ್‌ಬಿಎಸ್‌ಎ
ಝೀ ಚಾನೆಲ್‌ನ ಮೂರು ಸುದ್ದಿ ವಾಹಿನಿಗಳು ರಕುಲ್ ಪ್ರೀತ್ ಸಿಂಗ್‌ಗೆ ಕ್ಷಮಾಪಣೆ ಕೇಳಬೇಕು, ಕ್ಷಮೆ ವರದಿಯನ್ನು ಡಿಸೆಂಬರ್ 17 ರಂದು ಟಿವಿಯಲ್ಲಿ ಪ್ರದರ್ಶಿಸಬೇಕು ಎಂದು ಎನ್‌ಬಿಎಸ್‌ಎ ಆದೇಶ ನೀಡಿದೆ.

ರಕುಲ್ ಬಗೆಗಿನ ಸುದ್ದಿ ಲಿಂಕ್‌ಗಳನ್ನು ಡಿಲೀಟ್ ಮಾಡಲು ಆದೇಶ
ಅಷ್ಟೇ ಅಲ್ಲದೆ, ಟೈಮ್ಸ್ ನೌ, ಇಂಡಿಯಾ ಟಿವಿ, ಆಜ್ ತಕ್, ಇಂಡಿಯಾ ಟುಡೆ, ಟೈಮ್ಸ್ ನೇಷನ್, ಎಬಿಪಿ ನ್ಯೂಸ್‌ಗಳು ರಕುಲ್ ವಿರುದ್ಧ ಪ್ರಕಟಿಸಿರುವ ನಿಂದನಾತ್ಮಕ ಅಥವಾ ಸುಳ್ಳು ಸುದ್ದಿಗಳನ್ನು ತಮ್ಮ ವೆಬ್‌ಸೈಟ್‌ನಿಂದ ಡಿಲೀಟ್ ಮಾಡಬೇಕು, ಡಿಲೀಟ್ ಮಾಡಿದ ನಂತರ ಪತ್ರ ಮುಖೇನ ಅದನ್ನು ದೃಢೀಕರಿಸಬೇಕು ಎಂದಿದೆ ಎನ್ಬಿಎಸ್ಎ.
ರಕುಲ್ ಬೇಡ ಎಂದ ಆ ಚಿತ್ರ ರಶ್ಮಿಕಾ ಮಾಡಿದ್ರು: ಆಮೇಲೆ ಸ್ಟಾರ್ ಆದ್ರು! ಯಾವುದು ಚಿತ್ರ?

ತಪ್ಪೊಪ್ಪಿಗೆ ಪತ್ರ ಪ್ರಸಾರ ಮಾಡಲು ಸೂಚನೆ
ಎನ್‌ಬಿಎಸ್‌ಎ ಸ್ವತಃ ಹೇಳಿಕೆಯೊಂದನ್ನು ಝೀ ಚಾನೆಲ್‌ಗೆ ನೀಡಿದ್ದು, ಅದೇ ತಪ್ಪೊಪ್ಪಿಗೆ ಹೇಳಿಕೆಯನ್ನು ಡಿಸೆಂಬರ್ 17 ರಂದು ಟಿವಿಯನ್ನು ಪ್ರಸಾರ ಮಾಡಬೇಕು ಎಂದು ಕಟ್ಟುನಿಟ್ಟಾಗಿ ಆದೇಶಿಸಿದೆ.

ವಿಚಾರಣೆಗೆ ಹಾಜರಾಗಿದ್ದ ರಕುಲ್ ಪ್ರೀತ್ ಸಿಂಗ್
ಸುಶಾಂತ್ ಸಿಂಗ್ ಸಾವಿನ ನಂತರ ಹೊರಬಂದ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಕುಲ್ ಪ್ರೀತ್ ಸಿಂಗ್ ಅನ್ನು ಎನ್‌ಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ರಾಕುಲ್ ಜೊತೆಗೆ ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್, ದೀಪಿಕಾ ಪಡುಕೋಣೆಯನ್ನೂ ಸಹ ವಿಚಾರಣೆ ಮಾಡಲಾಗಿತ್ತು.