»   » ವಿರಾಟ್-ಅನುಷ್ಕಾ ನೆಲೆಸಿರುವ ಮುಂಬೈ ಫ್ಲಾಟ್ ಬಾಡಿಗೆ ಅಬ್ಬಬ್ಬಾ ಅಷ್ಟೊಂದಾ!?

ವಿರಾಟ್-ಅನುಷ್ಕಾ ನೆಲೆಸಿರುವ ಮುಂಬೈ ಫ್ಲಾಟ್ ಬಾಡಿಗೆ ಅಬ್ಬಬ್ಬಾ ಅಷ್ಟೊಂದಾ!?

Posted By:
Subscribe to Filmibeat Kannada

ಒಂದು ಮನೆಗೆ ಎಷ್ಟು ಬಾಡಿಗೆ ಕೊಡಬಹುದು.? ಸಿಂಗಲ್ ಬೆಡ್ ರೂಮ್ ಇದ್ದರೆ ಹತ್ತು ಸಾವಿರ.? ಡಬಲ್, ತ್ರಿಬಲ್ ಬೆಡ್ ರೂಮ್ ಬೇಕು... ಮನೆ ಸ್ವಲ್ಪ ದೊಡ್ಡದಾಗಿ ಇರಬೇಕು, ಒಳ್ಳೆ ಏರಿಯಾದಲ್ಲಿ ಮನೆ ಇರಬೇಕು ಅಂದ್ರೆ ಕನಿಷ್ಟ ಅಂದರೂ 15-20 ಸಾವಿರ ಬಾಡಿಗೆ ಕೊಡಬೇಕು. ಇದು ಮಧ್ಯಮ ವರ್ಗದ ಕುಟುಂಬದ ಕಥೆ.

ಆದ್ರೆ, ನಾವೀಗ ಹೇಳಲು ಹೊರಟಿರುವುದು ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೋಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕುಟುಂಬದ ಕಥೆ.

ಇದೀಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ವಿರಾಟ್-ಅನುಷ್ಕಾಗೆ ಏನು ಕಮ್ಮಿ ಹೇಳಿ.? ದೂರದ ಇಟಲಿಯಲ್ಲಿ ಧಾಂ ಧೂಂ ಆಗಿ ಮದುವೆ ಮಾಡಿಕೊಂಡು, ದೆಹಲಿಯಲ್ಲೊಂದು, ಮುಂಬೈನಲ್ಲೊಂದು ಆರತಕ್ಷತೆ ಮಾಡಿಕೊಂಡ ಈ ಜೋಡಿ ಸದ್ಯ ಫ್ಲಾಟ್ ಒಂದರದಲ್ಲಿ ಬಾಡಿಗೆಗೆ ಇದ್ದಾರೆ.

ಒಂದು ತಿಂಗಳಿಗೆ 'ವಿರುಷ್ಕಾ' ಕಟ್ಟುವ ಬಾಡಿಗೆ ಎಷ್ಟು ಗೊತ್ತಾ.? ಕೇಳಿದ್ರೆ, ಖಂಡಿತ ನೀವು ಸುಸ್ತಾಗದೆ ಇರಲ್ಲ.!

ಫ್ಲಾಟ್ ಗೆ 'ವಿರುಷ್ಕಾ' ಕಟ್ಟು ಬಾಡಿಗೆ ಎಷ್ಟು.?

ತಾವು ನೆಲೆಸಿರುವ ಫ್ಲಾಟ್ ಗೆ ವಿರಾಟ್ ಕೋಹ್ಲಿ ಹಾಗೂ ಅನುಷ್ಕಾ ಶರ್ಮಾ ತಿಂಗಳಿಗೆ ಕಟ್ಟುವ ಬಾಡಿಗೆ ಮೊತ್ತ ಬರೋಬ್ಬರಿ 15 ಲಕ್ಷ ರೂಪಾಯಿ.! ತಿಂಗಳಿಗೆ ಹದಿನೈದು ಲಕ್ಷ ಬಾಡಿಗೆ ಕೊಡ್ತಾರೆ ಅಂದ್ರೆ, ಇನ್ನು ಆ ಮನೆ ಹೇಗಿರಬಹುದು.?

ವಿರಾಟ್-ಅನುಷ್ಕಾ ಜೋಡಿಯ 'ಫ್ಲ್ಯಾಟ್' ನೋಡಿ

ಎಲ್ಲಿದೆ, ಹೇಗಿದೆ ವಿರಾಟ್-ಅನುಷ್ಕಾ ಮನೆ.?

ವರದಿಗಳ ಪ್ರಕಾರ, ರಹೇಜಾ ಲೆಜೆಂಡ್ಸ್ ಅಪಾರ್ಟ್ ಮೆಂಟ್ ನ 40ನೇ ಮಹಡಿಯ ಫ್ಲಾಟ್ ನಲ್ಲಿ ವಿರಾಟ್-ಅನುಷ್ಕಾ ನೆಲೆಸಿದ್ದಾರೆ. 2675 ಚದರ ಅಡಿ ಹೊಂದಿರುವ ಈ ಫ್ಲಾಟ್ ಗೆ 1.50 ಕೋಟಿ ರೂಪಾಯಿ ಡೆಪಾಸಿಟ್ ಇಟ್ಟಿರುವ ದಂಪತಿ, ತಿಂಗಳಿಗೆ ಹದಿನೈದು ಲಕ್ಷ ಬಾಡಿಗೆ ನೀಡುತ್ತಿದೆ. ಇದು ತಾತ್ಕಾಲಿಕ ಅಗ್ರೀಮೆಂಟ್ ಆಗಿದ್ದು, 24 ತಿಂಗಳ ಕಾಲ ವಿರುಷ್ಕಾ ಇಲ್ಲಿ ನೆಲೆಸಲಿದ್ದಾರಂತೆ.

ಅನುಷ್ಕಾ-ವಿರಾಟ್ ಮದುವೆಗೆ ಹೋಗುವ ಅತಿ ಮುಖ್ಯ 'ಗಣ್ಯರು' ಇವರೇ.!

ಸ್ವಂತ ಮನೆ ಬೇರೆ ಇದೆ.!

2016 ರಲ್ಲಿ 34 ಕೋಟಿ ರೂಪಾಯಿ ಕೊಟ್ಟು ವೊರ್ಲಿಯಲ್ಲಿ ಇರುವ ಓಂಕಾರ್ 1973 ಯಲ್ಲಿ ಮನೆ ಖರೀದಿಸಿದ್ದರು ವಿರಾಟ್ ಕೋಹ್ಲಿ. ಅದೇ ಮನೆಯಲ್ಲೇ 'ವಿರುಷ್ಕಾ' ದಂಪತಿ ನೆಲೆಸಿರಬಹುದು ಎಂದು ಹಲವರು ಊಹಿಸಿದ್ದರು. ಆದ್ರೀಗ, ಇಬ್ಬರೂ ಬಾಡಿಗೆ ಫ್ಲಾಟ್ ನಲ್ಲಿ ನೆಲೆಸಿರುವುದು ಬಹಿರಂಗವಾಗಿದೆ.

ಸೆಲ್ಫಿ ಪೋಸ್ಟ್ ಮಾಡಿದ್ದ ವಿರಾಟ್

ತಮ್ಮ ಹೊಸ ಫ್ಲಾಟ್ ನಲ್ಲಿ ಸೆಲ್ಫಿ ಕ್ಲಿಕ್ ಮಾಡಿದ್ದ ವಿರಾಟ್ ಕೋಹ್ಲಿ, ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ವಿರುಷ್ಕಾ ಮದುವೆ

ಡಿಸೆಂಬರ್ 11 ರಂದು ಇಟಲಿಯಲ್ಲಿ ಮದುವೆ ಆದರು ವಿರಾಟ್-ಅನುಷ್ಕಾ. ಬಳಿಕ ದೆಹಲಿ ಹಾಗೂ ಮುಂಬೈನಲ್ಲಿ ದಂಪತಿಯ ರಿಸೆಪ್ಷನ್ ನಡೆಯಿತು.

English summary
Virat Kohli and Anushka Sharma's rent for new Mumbai flat is Rs.15 Lakh per month.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada