For Quick Alerts
  ALLOW NOTIFICATIONS  
  For Daily Alerts

  ವಿರಾಟ್-ಅನುಷ್ಕಾ ದಂಪತಿಯ ಮಾರುಕಟ್ಟೆ ಮೌಲ್ಯ ಎಷ್ಟು ಕೋಟಿ ಗೊತ್ತೆ?

  |

  ನಟಿ ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ ಭಾರತದ ಪ್ರಖ್ಯಾತ ದಂಪತಿ. ಇಬ್ಬರೂ ತಮ್ಮ-ತಮ್ಮ ವೃತ್ತಿಯಲ್ಲಿ ಟಾಪ್‌ನಲ್ಲಿರುವವರು.

  ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಅವರುಗಳ ಮೇಲೆ ಬಂಡವಾಳ ಹೂಡಲು ಸಂಸ್ಥೆಗಳು, ಸಿನಿಮಾಗಳು ತುದಿಗಾಲ ಮೇಲೆ ನಿಂತಿದ್ದಾರೆ. ಈ ದಂಪತಿಯ ಒಟ್ಟು ಮಾರುಕಟ್ಟೆ ಮೌಲ್ಯ ಬಹು ದೊಡ್ಡದು.

  ಭಾರತ ಕ್ರಿಕೆಟ್ ತಂಡದಲ್ಲಿ ಅತಿ ಹೆಚ್ಚು ಸಂಬಳ ಪಡೆಯುವ ವಿರಾಟ್ ಕೊಹ್ಲಿ, ಕೋಟ್ಯಂತರ ಸಂಭಾವನೆ ಪಡೆದು ಹಲವು ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಮತ್ತು ಹಲವು ಬ್ರ್ಯಾಂಡ್‌ಗಳ ರಾಯಭಾರಿ ಸಹ ಆಗಿದ್ದಾರೆ. 2019 ರ ಅಂತ್ಯಕ್ಕೆ ವಿರಾಟ್ ಕೊಹ್ಲಿಯವರ ಒಟ್ಟು ಮಾರುಕಟ್ಟೆ ಮೌಲ್ಯ ಬರೋಬ್ಬರಿ 900 ಕೋಟಿ ಇತ್ತು.

  ಇನ್ನು ಅನುಷ್ಕಾ ಶರ್ಮಾ ಹಲವು ಸಿನಿಮಾಗಳ ಮೂಲಕ ಕೋಟ್ಯಂತರ ಸಂಭಾವನೆ ಪಡೆದಿದ್ದಾರೆ. ತಮ್ಮದೇ ಆದ ನಿರ್ಮಾಣ ಸಂಸ್ಥೆಯನ್ನೂ ಹೊಂದಿರುವ ಅನುಷ್ಕಾ, ಹಲವು ಜಾಹೀರಾತುಗಳಲ್ಲಿ ಸಹ ನಟಿಸಿದ್ದಾರೆ. ಅವರ ಮಾರುಕಟ್ಟೆ ಮೌಲ್ಯ ಕೊಹ್ಲಿ ಮಾರುಕಟ್ಟೆ ಮೌಲ್ಯಕ್ಕೆ ಹತ್ತಿರದಲ್ಲಿಯೇ ಇತ್ತು 2019 ರಲ್ಲಿ.

  ಇದೀಗ ಆಂಗ್ಲ ಮಾಧ್ಯಮವೊಂದರ ಲೆಕ್ಕಾಚಾರದಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾರ ಒಟ್ಟು ಮಾರುಕಟ್ಟೆ ಮೌಲ್ಯ 1200 ಕೋಟಿಗೂ ಹೆಚ್ಚಿದೆಯಂತೆ. ಅಮ್ಮನಾಗುತ್ತಿರುವ ಅನುಷ್ಕಾ ಕೆಲ ಕಾಲ ಸಿನಿಮಾರಂಗದಿಂದ ದೂರ ಉಳಿಯಲಿದ್ದಾರೆ ಹಾಗಾಗಿ ಅವರ ಮಾರುಕಟ್ಟೆ ಮೌಲ್ಯ ಈ ವರ್ಷ ತುಸು ಕುಸಿದಿದೆ.

  ವಿರಾಟ್ ಕೊಹ್ಲಿ ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಂಡಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ ಏಕದಿನ ಸರಣಿಯನ್ನು 1-2 ರಲ್ಲಿ ಭಾರತ ಸೋತಿದೆ. ಟಿ20 ಆರಂಭವಾಗಲಿದ್ದು, ಟೆಸ್ಟ್ ಪಂದ್ಯಕ್ಕೆ ಕೊಹ್ಲಿ ಅಲಭ್ಯರಾಗಲಿದ್ದಾರೆ.

  ಅನುಷ್ಕಾ ಶರ್ಮಾ ತಾಯಿಯಾಗಲಿದ್ದು, ಜನವರಿಯಲ್ಲಿ ಅವರಿಗೆ ಮಗು ಜನಿಸಲಿದೆ. ಆ ಸಮಯದಲ್ಲಿ ಅನುಷ್ಕಾ ಜೊತೆಗಿರಲೆಂದು ಕೊಹ್ಲಿ ರಜೆ ಪಡೆದಿದ್ದಾರೆ.

  English summary
  Virat Kohli and Mom to be Anushka Sharma's net worth in more than 1200 crore rs.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X