»   » ಅನುಷ್ಕಾ ಹೊಸ ಚಿತ್ರದ ಟ್ರೈಲರ್ ಗೆ ವಿರಾಟ್ ಮಾಡಿದ ಕಾಮೆಂಟ್ ಏನು?

ಅನುಷ್ಕಾ ಹೊಸ ಚಿತ್ರದ ಟ್ರೈಲರ್ ಗೆ ವಿರಾಟ್ ಮಾಡಿದ ಕಾಮೆಂಟ್ ಏನು?

Posted By:
Subscribe to Filmibeat Kannada

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮದುವೆ ಆದ ನಂತರ ಅನುಷ್ಕಾ ಅಭಿನಯದ ಯಾವ ಚಿತ್ರಗಳು ಬಿಡುಗಡೆಯಾಗಿಲ್ಲ. ಮದುವೆ ಬಳಿಕ ವಿರಾಟ್ ಜೊತೆಯಲ್ಲಿ ದಕ್ಷಿಣ ಆಫ್ರಿಕಾಕ್ಕೆ ಹಾರಿದ್ದರು ಬಾಲಿವುಡ್ ನಟಿ.

ಇದೀಗ, ಅನುಷ್ಕಾ ಶರ್ಮಾ ಅಭಿನಯದ 'ಪರಿ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಚಿತ್ರದ ಆರಂಭದಿಂದಲೂ ದೊಡ್ಡ ಕುತೂಹಲ ಮೂಡಿಸುತ್ತಿದೆ. ಅನುಷ್ಕಾ ಅವರ ಗೆಟಪ್ ನಿಂದ ಹೆಚ್ಚು ಸಂಚಲನ ಸೃಷ್ಟಿಸಿದ್ದಾರೆ. ಅದಕ್ಕೆ ತಕ್ಕಂತೆ ಟ್ರೈಲರ್ ಈಗ ರಿಲೀಸ್ ಆಗಿದ್ದು, ಬಾಲಿವುಡ್ ಮಂದಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಮದುವೆ ನಂತರ ಭಯ ಹುಟ್ಟಿಸೋಕೆ ಬಂದ ಅನುಷ್ಕಾ ಶರ್ಮಾ

Virat kohli comment on pari trailer

ಈ ಮಧ್ಯೆ ವಿರಾಟ್ ಕೊಹ್ಲಿ ಕೂಡ ತಮ್ಮ ಮಡದಿಯ ಚಿತ್ರದ ಬಗ್ಗೆ ಕಾಮೆಂಟ್ ಮಾಡಿದ್ದಾರೆ. 'ಪರಿ' ಟ್ರೈಲರ್ ನೋಡಿರುವ ವಿರಾಟ್ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದು, ''ಪರಿ ಚಿತ್ರವನ್ನ ನೋಡಲು ಕಾತುರದಿಂದ ಕಾಯುತ್ತಿದ್ದೇನೆ. ಈ ಹಿಂದೆ ಇಂತಹ ಅವತಾರದಲ್ಲಿ ನಾನು ಯಾವತ್ತೂ ನೋಡಿಲ್ಲ'' ಎಂದು ಟ್ವೀಟ್ ಮಾಡಿದ್ದಾರೆ.

'ಪರಿ' ಹಾರರ್ ಸಿನಿಮಾವಾಗಿದ್ದು, ದ್ವಿಪಾತ್ರದಲ್ಲಿ ಅನುಷ್ಕಾ ಶರ್ಮಾ ಅಭಿನಯಿಸಿದ್ದಾರೆ. ಅನುಷ್ಕಾ ಅವರ ಗೆಟಪ್ ಭಯಾನಕವಾಗಿದ್ದು, ಸಖತ್ ಸದ್ದು ಮಾಡಿದೆ. ವಿಶೇಷ ಅಂದ್ರೆ, ಸ್ವತಃ ಅನುಷ್ಕಾ ಶರ್ಮಾ ಅವರೇ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

ಪ್ರೊಸಿಟ್ ರಾಯ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಪರಂಬ್ರಟ ಚಟರ್ಜಿ, ರಜತ್ ಕಪೂರ್, ರಿತಿಬಾರಿ ಚಕ್ರವರ್ತಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಸದ್ಯ, ಪೋಸ್ಟರ್ ಮತ್ತು ಟ್ರೈಲರ್ ಮೂಲಕ ಗಮನ ಸೆಳೆದಿರುವ ಪರಿ ಮಾರ್ಚ್ 2 ರಂದು ತೆರೆಕಾಣಲಿದೆ.

English summary
Pari trailer has Anushka Sharma and Parambrata Chatterjee in various stages of being afraid. Virat Kohli is mighty impressed.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X