»   » ಅನುಷ್ಕಾ ಸಂಬಂಧದ ಬಗ್ಗೆ ಮೌನ ಮುರಿದ ಕೊಹ್ಲಿ

ಅನುಷ್ಕಾ ಸಂಬಂಧದ ಬಗ್ಗೆ ಮೌನ ಮುರಿದ ಕೊಹ್ಲಿ

Posted By:
Subscribe to Filmibeat Kannada

ಕೆಲವು ವಿಷಯಗಳನ್ನು ಎಷ್ಟೇ ಗುಟ್ಟಾಗಿ ಇಟ್ಟರೂ ರಟ್ಟಾಗುತ್ತವೆ. ಈ ಮಾತು ಸೆಲೆಬ್ರಿಟಿಗಳ ವಿಷಯದಲ್ಲಿ ಅಕ್ಷರಶಃ ನಿಜ. ಅವರ ಚಲನವಲನಗಳ ಬಗ್ಗೆ ಮಾಧ್ಯಮಗಳು ಸದಾ ಒಂದು ಕಣ್ಣು ನೆಟ್ಟೇ ಇರುತ್ತವೆ. ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರ ಸಂಬಂಧ ಬಗೆಗೂ ಇದೇ ರೀತಿ ಆಗಿತ್ತು.

ಇದೇ ಮೊದಲ ಬಾರಿಗೆ ವಿರಾಟ್ ಕೊಹ್ಲಿ ತನ್ನ ಮತ್ತು ಅನುಷ್ಕಾ ಸಂಬಂಧದ ಬಗ್ಗೆ ಬಾಯ್ಬಿಟ್ಟಿದ್ದಾರೆ. ತಾವಿಬ್ಬರೂ ಪ್ರೇಮಿಸಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಮೂಗು ತೂರಿಸುವುದನ್ನು ಕಡಿಮೆ ಮಾಡಿ ಎಂದೂ ವಿನಂತಿಸಿಕೊಂಡಿದ್ದಾರೆ. [ಶೀಘ್ರ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ನಿಶ್ಚಿತಾರ್ಥ]

Anushka Sharma, Kohli

"ಈಗ ಎಲ್ಲವೂ ಬಹಿರಂಗವಾಗಿದೆ. ನಾವೇನೂ ಮುಚ್ಚಿಟ್ಟಿಲ್ಲ. ಮುಚ್ಚಿಡುವ ಪ್ರಯತ್ನವನ್ನೂ ಮಾಡಲಿಲ್ಲ. ಆದರೆ ಜನ ಇದೇ ವಿಷಯವಾಗಿ ಮತ್ತೆ ಮತ್ತೆ ಕೆದಕುತ್ತಿರುವುದು, ಅದನ್ನೊಂದು ವಿವಾದ ಮಾಡುವುದು ಸರಿಯಲ್ಲ" ಎಂದಿದ್ದಾರೆ.

ತನ್ನ ಹಾಗೂ ಅನುಷ್ಕಾ ನಡುವಿನ ಸಂಬಂಧ ಎಲ್ಲರಿಗೂ ಗೊತ್ತಾಗಿದೆ. ಈ ಬಗ್ಗೆ ಕುತೂಹಲ ತೋರಿಸುವ ಅವಶ್ಯಕತೆ ಇಲ್ಲ. ನಾವಿಬ್ಬರೂ ಜೊತೆಯಾಗಿ ಸಿಕ್ಕಿದರೆ ಈಗಲೂ ನಿಮ್ಮಬ್ಬರ ಸಂಬಂಧದ ಬಗ್ಗೆ ಕೇಳುತ್ತಿದ್ದಾರೆ. ಇವರೆಲ್ಲಾ ಒಂಚೂರು ಕಾಮನ್ ಸೆನ್ಸ್ ಬಳಸಿದರೆ ಉತ್ತಮ. ಗೊತ್ತಿದ್ದೂ ಮತ್ತೆ ಮತ್ತೆ ಅದೇ ಪ್ರಶ್ನೆಯನ್ನು ಕೇಳುತ್ತಿರುವುದೇಕೆ?

ನಮ್ಮ ಸಂಬಂಧದ ಬಗ್ಗೆ ಮಾತನಾಡಲು ನಮಗೆ ಇಷ್ಟವಿಲ್ಲ. ಏಕೆಂದರೆ ಅದು ನಮ್ಮ ವೈಯಕ್ತಿಯ ವಿಚಾರ. ಮಾಧ್ಯಮಗಳ ಜೊತೆಗೆ ಇದನ್ನು ಎಲ್ಲರೂ ಗೌರವಿಸಬೇಕು ಎಂದಿದ್ದಾರೆ ಕೊಹ್ಲಿ. ಈ ಮೂಲಕ ಕೊಹ್ಲಿ ಮತ್ತು ಅನುಷ್ಕಾ ನಡುವಿನ ಸಂಬಂಧಕ್ಕೆ ಅಧಿಕೃತ ಮುದ್ರೆ ಬಿದ್ದಿದೆ. (ಏಜೆನ್ಸೀಸ್)

English summary
Virat Kohli has asked the public to use common sense on his much talked about relationship with actress Anushka Sharma, saying they indeed are seeing each other and their privacy should be respected.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada