»   » 'ಕಜ್ರಾ ರೇ..' ಹಾಡಿಗೆ ಸೂಪರ್ ಸ್ಟೆಪ್ ಹಾಕಿದ ವಿರಾಟ್ ಕೋಹ್ಲಿ

'ಕಜ್ರಾ ರೇ..' ಹಾಡಿಗೆ ಸೂಪರ್ ಸ್ಟೆಪ್ ಹಾಕಿದ ವಿರಾಟ್ ಕೋಹ್ಲಿ

Posted By:
Subscribe to Filmibeat Kannada

ಕ್ರೀಡಾಂಗಣದಲ್ಲಿ ಸಿಕ್ಸರ್ ಮೇಲೆ ಸಿಕ್ಸರ್ ಬಾರಿಸೋದ್ರಲ್ಲಿ ಮಾತ್ರ ಅಲ್ಲ. ಡ್ಯಾನ್ಸ್ ಮಾಡೋದ್ರಲ್ಲೂ ವಿರಾಟ್ ಕೋಹ್ಲಿ ಎತ್ತಿದ ಕೈ. ಕ್ರೀಡಾಂಗಣದಲ್ಲಿಯೇ ಅನೇಕ ಬಾರಿ ನೃತ್ಯ ಮಾಡಿರುವ ವಿರಾಟ್ ಕೋಹ್ಲಿ ಸದ್ಯ ಮದುವೆಯೊಂದರಲ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇತ್ತೀಚೆಗಷ್ಟೇ, ಸ್ನೇಹಿತರೊಬ್ಬರ ಮದುವೆಯಲ್ಲಿ ತಮ್ಮ ಪತ್ನಿ ನಟಿ ಅನುಷ್ಕಾ ಶರ್ಮಾ ಜೊತೆ ವಿರಾಟ್ ಕೋಹ್ಲಿ ಪಾಲ್ಗೊಂಡಿದ್ದರು. ನವ ಜೋಡಿಗೆ ಶುಭ ಹಾರೈಸಿದ ಬಳಿಕ ವಿರಾಟ್ ಕೋಹ್ಲಿ ಕುಣಿದು ಕುಪ್ಪಳಿಸಿದ್ದಾರೆ.

Virat Kohli dances to 'Kajra Re' at a wedding reception

ಜನಪ್ರಿಯ ಗೀತೆ 'ಕಜ್ರಾ ರೇ...' ಹಾಡಿಗೆ ವಿರಾಟ್ ಕೋಹ್ಲಿ ಸೂಪರ್ ಸ್ಟೆಪ್ ಹಾಕಿದ್ದಾರೆ. ಅಸಲಿಗೆ, 'ಬಂಟಿ ಔರ್ ಬಬ್ಲಿ' ಚಿತ್ರದ 'ಕಜ್ರಾ ರೇ...' ಹಾಡಲ್ಲಿ ಸೊಂಟ ಬಳುಕಿಸಿರುವುದು ನಟಿ ಐಶ್ವರ್ಯ ರೈ ಬಚ್ಚನ್, ಅಮಿತಾಬ್ ಬಚ್ಚನ್ ಹಾಗೂ ಅಭಿಶೇಕ್ ಬಚ್ಚನ್.

ಮದುವೆ ನಂತರ ವಿರಾಟ್ ಅನುಷ್ಕಾ ಆರತಕ್ಷತೆಗೆ ಭರ್ಜರಿ ತಯಾರಿ

ಥೇಟ್ ಐಶ್ವರ್ಯ ರೈ ಬಚ್ಚನ್ ಸ್ಟೈಲ್ ನಲ್ಲೇ ವಿರಾಟ್ ಕೋಹ್ಲಿ 'ಕಜ್ರಾ ರೇ...' ಅಂತ ಹಾಡ್ತಾ ಸ್ಟೆಪ್ ಹಾಕಿದ್ದಾರೆ. ವಿರಾಟ್ ಕೋಹ್ಲಿ ಡ್ಯಾನ್ಸ್ ನೋಡಿ ಫ್ಯಾನ್ಸ್ ಅಂತೂ ಖುಷಿ ಆಗಿದ್ದಾರೆ.

English summary
Team India Captain Virat Kohli dances to 'Kajra Re' at a wedding reception.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada