For Quick Alerts
  ALLOW NOTIFICATIONS  
  For Daily Alerts

  ಅನುಷ್ಕಾ ಶರ್ಮಾ ಹೆರಿಗೆ ದಿನಾಂಕ ಬಹಿರಂಗಪಡಿಸಿದ ವಿರಾಟ್ ಕೊಹ್ಲಿ!

  |

  ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಚೊಚ್ಚಲ ಹೆರಿಗೆ ದಿನಾಂಕ ಯಾವಾಗ ಎನ್ನುವುದು ಕುತೂಹಲ ಹುಟ್ಟಿಸಿದೆ. ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ತಮ್ಮ ಚೊಚ್ಚಲ ಮಗುವನ್ನು ಯಾವಾಗ ಸ್ವಾಗತಿಸಲಿದ್ದಾರೆ ಎನ್ನುವುದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾಗಿದೆ.

  ಅಕ್ಟೋಬರ್ ತಿಂಗಳು ಇರಬಹುದು, ನವೆಂಬರ್ ತಿಂಗಳು ಇರಬಹುದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಆದ್ರೆ ಇಬ್ಬರ ಕಡೆಯಿಂದಲೂ ಅಧಿಕೃತ ಮಾಹಿತಿ ಇರಲಿಲ್ಲ. ಇದೀಗ, ಅನುಷ್ಕಾ ಚೊಚ್ಚಲ ಹೆರಿಗೆ ಯಾವಾಗ ಎಂದು ಸ್ವತಃ ವಿರಾಟ್ ಕೊಹ್ಲಿ ಹೇಳಿದ್ದಾರೆ. ಮುಂದೆ ಓದಿ...

  ದುಬೈನಲ್ಲಿ ವಿರಾಟ್-ಅನುಷ್ಕಾ ದಂಪತಿ

  ದುಬೈನಲ್ಲಿ ವಿರಾಟ್-ಅನುಷ್ಕಾ ದಂಪತಿ

  ಪ್ರೆಗ್ನೆನ್ಸಿ ದಿನಗಳನ್ನು ಎಂಜಾಯ್ ಮಾಡುತ್ತಿರುವ ಅನುಷ್ಕಾ ಶರ್ಮಾ ಸೋಶಿಯಲ್ ಮೀಡಿಯಾದ ಪ್ರಮುಖ ಆಕರ್ಷಣೆಗಳಲ್ಲಿ ಒಬ್ಬರಾಗಿದ್ದಾರೆ. ಗರ್ಭಿಣಿಯಾಗಿದ್ದರೂ ಐಪಿಎಲ್ ಟೂರ್ನಿಯಲ್ಲಿ ಪತಿಗೆ ಬೆಂಬಲಿಸುತ್ತಾ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದರು. ಈ ಫೋಟೋಗಳು ವೈರಲ್ ಆಗಿದ್ದವು. ಇದೀಗ, ಅನುಷ್ಕಾ ಹೆರಿಗೆ ದಿನಾಂಕದ ಬಗ್ಗೆ ಸುಳಿವು ನೀಡಿದ್ದಾರೆ ಕೊಹ್ಲಿ.

  ಗೂಗಲ್‌ನಲ್ಲಿ ರಶೀದ್ ಖಾನ್ ಪತ್ನಿ ಎಂದು ಹುಡುಕಿದರೆ ಅನುಷ್ಕಾ ಹೆಸರು ಬರುತ್ತೆ ಏಕೆ?

  ಅನುಷ್ಕಾ ಹೆರಿಗೆ ದಿನಾಂಕ ಹೇಳಿದ ಕೊಹ್ಲಿ

  ಅನುಷ್ಕಾ ಹೆರಿಗೆ ದಿನಾಂಕ ಹೇಳಿದ ಕೊಹ್ಲಿ

  'ರಾಯಲ್ ಚಾಲೆಂಜರ್ಸ್ ಬೆಂಗಳೂರು' ಯ್ಯೂಟ್ಯೂಬ್ ಚಾನಲ್‌ನಲ್ಲಿ ವಿರಾಟ್ ಕೊಹ್ಲಿಯ ಸಂದರ್ಶನದ ವಿಡಿಯೋ ತುಣುಕು ಪ್ರಸಾರ ಮಾಡಲಾಗಿತ್ತು. ಈ ಸಂದರ್ಶನದಲ್ಲಿ, 'ಅನುಷ್ಕಾ ಶರ್ಮಾ ಹೆರಿಗೆ ಬಹುಶಃ ನವೆಂಬರ್ 10ಕ್ಕೆ ಆಗಬಹುದು' ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

  ಸೆಲೆಬ್ರಿಟಿ ಫೋಟೋಗ್ರಾಫರ್ ಪೋಸ್ಟ್

  ಸೆಲೆಬ್ರಿಟಿ ಫೋಟೋಗ್ರಾಫರ್ ಪೋಸ್ಟ್

  ಇದೇ ವಿಚಾರವಾಗಿ ಸೆಲೆಬ್ರಿಟಿ ಫೋಟೋಗ್ರಾಫರ್ ವೈರಲ್ ಭಯಾನಿ ಸಹ ಒಂದು ಪೋಸ್ಟ್ ಹಾಕಿದ್ದರು. ಅನುಷ್ಕಾ ಮತ್ತು ಕೊಹ್ಲಿ ಫೋಟೋ ಹಂಚಿಕೊಂಡಿದ್ದ ವೈರಲ್ ಭಯಾನಿ, ಅನುಷ್ಹಾ ಅವರ ಹೆರಿಗೆ ನವೆಂಬರ್ 10ಕ್ಕೆ ಆಗಬಹುದು ಎಂಬ ವಿಚಾರವನ್ನು ಕೊಹ್ಲಿ ಸ್ವತಃ ಬಹಿರಂಗಪಡಿಸಿದ್ದಾರೆ ಎಂದು ಹಾಕಿದ್ದರು.

  ವಿರಾಟ್ ಕೊಹ್ಲಿ 'ದಿ ಬೆಸ್ಟ್ ಚೇಸರ್' ಎಂದ ನೆಟ್ಟಿಗರು!

  ಚಿಕ್ಕಣ್ಣ ಹೀರೋ ಅಲ್ಲ ಒಬ್ಬ ಒಳ್ಳೆ ನಟ | Tharun Sudeer | Chikkanna | Upadyaksha | Filmibeat Kannada
  ಆರ್‌ಸಿಬಿ ಚಾನಲ್‌ನಲ್ಲೂ ವಿಡಿಯೋ ಡಿಲೀಟ್

  ಆರ್‌ಸಿಬಿ ಚಾನಲ್‌ನಲ್ಲೂ ವಿಡಿಯೋ ಡಿಲೀಟ್

  ಅನುಷ್ಕಾ ಹೆರಿಗೆ ದಿನಾಂಕ ಹೇಳಿರುವ ಕೊಹ್ಲಿಯ ವಿಡಿಯೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಧಿಕೃತ ಯ್ಯೂಟ್ಯೂಬ್ ಚಾನಲ್‌ನಿಂದ ತೆಗೆಯಲಾಗಿದೆ. ಅದೇ ರೀತಿ ಸೆಲೆಬ್ರಿಟಿ ಫೋಟೋಗ್ರಾಫರ್ ವೈರಲ್ ಭಯಾನಿ ಹಾಕಿದ್ದ ಪೋಸ್ಟ್ ಸಹ ಡಿಲೀಟ್ ಮಾಡಲಾಗಿದೆ. ಆದ್ರೆ, ಈ ಎರಡು ಕಡೆ ವಿಡಿಯೋ ಮತ್ತು ಪೋಸ್ಟ್ ಡಿಲೀಟ್ ಆಗುವಷ್ಟರಲ್ಲಿ ಸುದ್ದಿ ವೈರಲ್ ಆಗಿದೆ.

  English summary
  Virat Kohli Reveals Anushka Sharma Delivery Date, Shares a romantic photo with his wife post RCB win.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X