ಕರ್ನಾಟಕದ ಅಳಿಯ ವಿವೇಕ್ ಮನೆಗೆ 3 ಕೆ.ಜಿ ಬಂಗಾರ
ಕರ್ನಾಟಕದ ಅಳಿಮಯ್ಯ ವಿವೇಕ್ ಒಬೆರಾಯ್ ಅವರ ಪಾಲಿಗೆ ಇಂದು ಮರೆಯಲಾಗದ ದಿನ. ಇಂದು ಅವರ ಮನೆಗೆ ಅದೃಷ್ಟ ಲಕ್ಷ್ಮಿ ಆಗಮನವಾಗಿದೆ. ಹಿಂದೂ ಧರ್ಮದಲ್ಲಿ ವಿಶೇಷ ಪ್ರಾಮುಖ್ಯತೆ ಪಡೆದಿರುವ ಅಕ್ಷಯ ತೃತೀಯ ದಿನ (ಏ.21) ಅವರ ಪತ್ನಿ ಪ್ರಿಯಾಂಕಾ ಆಳ್ವ ಅವರು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಈ ದಂಪತಿಗಳು ಹೊಸ ಸದಸ್ಯೆಯನ್ನು ಬರಮಾಡಿಕೊಂಡಿದ್ದಾರೆ. ಈ ಜೋಡಿಗೆ 2013ರಲ್ಲಿ ಗಂಡು ಮಗುವಾಗಿತ್ತು. ಇದೀಗ ಎರಡನೇ ಮಗು ಹೆಣ್ಣು ಎಂಬುದು ವಿಶೇಷ. ತಾಯಿ ಮತ್ತು ಮಗು ಆರೋಗ್ಯದಿಂದ ಇರುವುದಾಗಿ Jackace ಟ್ವಿಟ್ಟರ್ ಹೇಳಿದೆ. [ನಟ ವಿವೇಕ್ ಪತ್ನಿ ಪ್ರಿಯಾಂಕಾ ಆಳ್ವಗೆ ಗಂಡು ಮಗು]
ಇದು ಸಹಜ ಹೆರಿಗೆಯೋ ಅಥವಾ ಸಿಸೇರಿಯನ್ ಹೆರಿಗೆಯೋ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಅಕ್ಷಯ ತೃತೀಯ ವಿಶೇಷ ದಿನಕ್ಕೇ ಹೆರಿಗೆ ಮಾಡಿಸಿಕೊಳ್ಳಲು ಈ ದಂಪತಿಗಳು ಬಯಸಿರಲೂ ಬಹುದು.

ಏನೇ ಆಗಲಿ ಈ ವಿಶೇಷ ದಿನ ಅವರ ಮನೆಗೆ ಮಹಾಲಕ್ಷ್ಮಿಯ ಆಗಮನವಾಗಿದೆ. ಈ ಮೂಲಕ ಅವರಿಗೆ 3 ಕೆಜಿ ಬಂಗಾರ ಸಿಕ್ಕಂತಾಗಿದೆ. ಇಸವಿ 2010ರ ಅಕ್ಟೋಬರ್ 29ರಂದು ಪ್ರಿಯಾಂಕಾ ಆಳ್ವ ಅವರನ್ನು ವರಿಸಿದರು ವಿವೇಕ್.
ಜೆಡಿ(ಯು) ಮುಖಂಡ ದಿವಂಗತ ಜೀವರಾಜ್ ಆಳ್ವ ಅವರ ಮಗಳ ಕೈಹಿಡಿದ ಬಳಿಕ ವಿವೇಕ್ ಕರ್ನಾಟಕದ ಅಳಿಯನಾಗಿದ್ದರು. ಮದುವೆಯಾಗಿ ಮೂರು ವರ್ಷಗಳ ಬಳಿಕ ವಿವೇಕ್ ದಂಪತಿಗೆ ಗಂಡು ಮಗುವಾಗಿತ್ತು. ಇದೀಗ ಮತ್ತೊಮ್ಮೆ ಹೆಣ್ಣುಮಗುವಿನ ತಂದೆಯಾಗಿದ್ದಾರೆ ವಿವೇಕ್. ನಿಮ್ಮ ಕಡೆಯಿಂದ ಲಿಟ್ಲ್ ಸ್ಟಾರ್ ಗೆ ಒಂದು ಹಾಯ್ ಹೇಳಿ.


Click it and Unblock the Notifications











