Just In
Don't Miss!
- Finance
ಫಾಸ್ಟ್ಟ್ಯಾಗ್ ಟೋಲ್ ಕಲೆಕ್ಷನ್: ಒಂದು ದಿನಕ್ಕೆ 104 ಕೋಟಿ ರೂಪಾಯಿ
- Automobiles
ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಬಗ್ಗೆ ಸುಳಿವು ನೀಡಿದ ಪೆಟ್ರೋಲಿಯಂ ಸಚಿವ
- Lifestyle
ಮಾರ್ಚ್ ತಿಂಗಳಲ್ಲಿ ವಿವಾಹವಾಗಲು ಇಲ್ಲಿದೆ ಶುಭದಿನಾಂಕಗಳು
- News
ರೈತರ ಕಲ್ಯಾಣಕ್ಕಾಗಿ ಅರ್ಪಿಸಿಕೊಂಡವರು: ಜನ್ಮದಿನದಂದು ಯಡಿಯೂರಪ್ಪಗೆ ಮೋದಿ ಶುಭಾಶಯ
- Sports
ಮೊಟೆರಾ ಪಿಚ್ ಬಗ್ಗೆ ವಿರಾಟ್ ಕೊಹ್ಲಿ ಹೇಳಿಕೆಗೆ ಅಲಾಸ್ಟೇರ್ ಕುಕ್ ಕಿಡಿ
- Education
RBI Grade B Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪೊಲೀಸರ ಕಣ್ಣು ಕೆಂಪಗೆ ಮಾಡಿದ ನಟ ವಿವೇಕ್ ಒಬೆರಾಯ್ ದಂಪತಿ ಬೈಕ್ ರೈಡ್
ಕೆಲವು ದಿನಗಳ ಹಿಂದಷ್ಟೆ ಬಾಲಿವುಡ್ ನಟ ವಿವೇಕ್ ಒಬೆರಾಯ್ ಹಾಗೂ ಅವರ ಪತ್ನಿ ತಡರಾತ್ರಿ ಬೈಕ್ ರೈಡ್ ಮಾಡಿ ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಪ್ರೇಮಿಗಳ ದಿನದಂದು ವಿವೇಕ್ ಒಬೆರಾಯ್ ತಮ್ಮ ಪತ್ನಿ ಪ್ರಿಯಾಂಕಾ ಆಳ್ವಾ ಜೊತೆಗೆ ದುಬಾರಿ ಹಾರ್ಲೆ ಡೇವಿಡ್‌ಸನ್ ಬೈಕ್‌ನಲ್ಲಿ ಜಾಲಿ ರೈಡ್ ಹೋಗಿದ್ದರು. 'ಪ್ರೇಮಿಗಳ ದಿನಕ್ಕೆ ಇದು ಒಳ್ಳೆಯ ಪ್ರಾರಂಭ' ಎಂದು ಕ್ಯಾಪ್ಷನ್ ಸಹ ಹಾಕಿದ್ದರು. ಆದರೆ ಬೈಕ್ ರೈಡ್ ವೇಳೆ ವಿವೇಕ್ ಒಬೆರಾಯ್ ಹಾಗೂ ಅವರ ಪತ್ನಿ ಇಬ್ಬರೂ ಸಹ ಹೆಲ್ಮೆಟ್ ಹಾಗೂ ಮಾಸ್ಕ್ ಎರಡೂ ಧರಿಸಿರಲಿಲ್ಲ್.
ವಿಡಿಯೋ ಗಮನಿಸಿದ ಮುಂಬೈ ಪೊಲೀಸರು ವಿವೇಕ್ ಒಬೆರಾಯ್ ಮೇಲೆ ದಂಡ ವಿಧಿಸಿದ್ದಾರೆ. ಹೆಲ್ಮೆಟ್ ಧರಿಸಿದ ಕಾರಣದಿಂದ ಈ ದಂಡ ವಿಧಿಸಲಾಗಿದೆ. ಮುಂಬೈ ಪೊಲೀಸರು ದಂಡ ವಿಧಿಸಿರುವ ಬಗ್ಗೆ ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ ವಿವೇಕ್ ಒಬೆರಾಯ್.
'ಪ್ರೀತಿ ಎಂಬುದು ಯಾವ ಹಂತಕ್ಕೆ ನನ್ನನ್ನು ತಂದು ನಿಲ್ಲಿಸಿತು ನೋಡಿ, ನಾನು ನನ್ನ ಪ್ರೀತಿ ಪಾತ್ರಳು ಹೆಲ್ಮೆಟ್ ಇಲ್ಲದೆ ಬೈಕ್ ಮೇಲೆ ಹೊರಟಿದ್ದಕ್ಕೆ ದಂಡ ಕಟ್ಟಿದ್ದೇವೆ. ಮುಂಬೈ ಪೊಲೀಸರನ್ನು ನೀವು ವಂಚಿಸಲು ಸಾಧ್ಯವಿಲ್ಲ. ಯಾವಾಗಲೇ ಆಗಲಿ, ಬೈಕ್‌ನಲ್ಲಿ ಹೋಗಬೇಕಾದರೆ ಹೆಲ್ಮೆಟ್ ಮತ್ತು ಮಾಸ್ಕ್ ಧರಿಸುವುದು ಮರೆಯಬೇಡಿ' ಎಂದಿದ್ದಾರೆ ವಿವೇಕ್.
ನಟ ವಿವೇಕ್ ಒಬೆರಾಯ್ ಪತ್ನಿ ಪ್ರಿಯಾಂಕಾ ಆಳ್ವಾ ಕನ್ನಡತಿಯೇ ಆಗಿದ್ದಾರೆ. ಕನ್ನಡದ ಪ್ರಖ್ಯಾತ ರಾಜಕಾರಣಿ ಜೀವರಾಜ್ ಆಳ್ವಾ ಮಗಳು ಈ ಪ್ರಿಯಾ ಆಳ್ವಾ. ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆದಿತ್ಯ ಆಳ್ವಾ, ಇದೇ ಪ್ರಿಯಾ ಆಳ್ವಾರ ಸ್ವಂತ ತಮ್ಮ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಾ ಆಳ್ವಾಗೂ ಸಿಸಿಬಿ ನೊಟೀಸ್ ಹೋಗಿತ್ತು.
ಇನ್ನು ನಟ ವಿವೇಕ್ ಒಬೆರಾಯ್ ಬಾಲಿವುಡ್‌ನಲ್ಲಿ ಮಾತ್ರವೇ ಅಲ್ಲದೆ ದಕ್ಷಿಣ ಭಾರತದ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಕನ್ನಡದಲ್ಲಿ ಶಿವರಾಜ್ ಕುಮಾರ್ ಜೊತೆಗೆ 'ರುಸ್ತುಂ' ಸಿನಿಮಾದಲ್ಲಿ ನಟಿಸಿದ್ದಾರೆ ವಿವೇಕ್ ಒಬೆರಾಯ್.