For Quick Alerts
  ALLOW NOTIFICATIONS  
  For Daily Alerts

  ಮೋದಿ ಬಯೋಪಿಕ್ ಚಿತ್ರಕ್ಕೆ ಕರ್ನಾಟಕದ ಅಳಿಯ ನಾಯಕ.!

  |
  ಬೆಳ್ಳಿತೆರೆ ಮೇಲೆ ಸದ್ಯದಲ್ಲೇ ಬರಲಿದೆ ನರೇಂದ್ರ ಮೋದಿ ಸಿನಿಮಾ | ನಾಯಕ ಯಾರು ಗೊತ್ತಾ? | FILMIBEAT KANNADA

  ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತು ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಟಿಸುತ್ತಿದ್ದಾರೆ ಎನ್ನಲಾಗಿತ್ತು. ಚಿತ್ರಕ್ಕೆ 'ಮೋದಿ' ಎಂದು ಟೈಟಲ್ ಇಟ್ಟು ಪೋಸ್ಟರ್ ಕೂಡ ರಿಲೀಸ್ ಆಗಿತ್ತು. ಆದ್ರೆ, ಆ ಚಿತ್ರ ಶುರುವಾಗಲೇ ಇಲ್ಲ.

  ಇದಾದ ಬಳಿಕ ನಿರ್ದೇಶಕಿ ರೂಪ ಅಯ್ಯರ್ ಅವರು ಮೋದಿ ಕುರಿತು ಸಿನಿಮಾ ಮಾಡುತ್ತೇನೆ ಘೋಷಿಸಿದರು. ಅದಕ್ಕೆ ಬೇಕಾದ ತಯಾರಿ ಕೂಡ ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದರು. ನಂತರ ಅದು ಸೈಲೆಂಟ್ ಆಗಿದೆ.

  ಪ್ರಧಾನಿ 'ಮೋದಿ' ಮತ್ತು ನಟ ಉಪೇಂದ್ರ ನಡುವೆ ಏನೋ ಐತೆ !

  ಇವರಿಬ್ಬರಿಗೆ ಸೆಡ್ಡು ಹೊಡೆದಿರುವ ಬಾಲಿವುಡ್ ನರೇಂದ್ರ ಮೋದಿ ಬಗ್ಗೆ ಬಯೋಪಿಕ್ ಮಾಡಲು ಮುಂದಾಗಿದೆ. ಚಿತ್ರಕ್ಕೆ ಟೈಟಲ್ ಇಟ್ಟು, ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡುವ ದಿನಾಂಕವನ್ನ ಕೂಡ ಪ್ರಕಟಮಾಡಿದ್ದಾರೆ. ಹಾಗಿದ್ರೆ, ತೆರೆಮೇಲೆ ನರೇಂದ್ರಮೋದಿ ಆಗೋದು ಯಾರು?

  ಮೋದಿ ಆದ ವಿವೇಕ್ ಒಬೆರಾಯ್

  ಮೋದಿ ಆದ ವಿವೇಕ್ ಒಬೆರಾಯ್

  ಬಾಲಿವುಡ್ ಹಾಗೂ ದಕ್ಷಿಣ ಭಾರತದ ಹಲವು ಚಿತ್ರಗಳಲ್ಲಿ ಬ್ಯುಸಿಯಿರುವ ವಿವೇಕ್ ಒಬೆರಾಯ್ ಈಗ ನರೇಂದ್ರ ಮೋದಿ ಆಗ್ತಿದ್ದಾರೆ. ಮೋದಿ ಬಯೋಪಿಕ್ ನಲ್ಲಿ ಮೋದಿ ಪಾತ್ರವನ್ನ ಕರ್ನಾಟಕದ ಅಳಿಯ ವಿವೇಕ್ ಒಬೆರಾಯ್ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಅಧಿಕೃತವಾಗಿ ಘೋಷಣೆಯಾಗಿದೆ.

  ಜನವರಿ 7ಕ್ಕೆ ಪೋಸ್ಟರ್

  ಜನವರಿ 7ಕ್ಕೆ ಪೋಸ್ಟರ್

  ನರೇಂದ್ರ ಮೋದಿ ಬಯೋಪಿಕ್ ಚಿತ್ರಕ್ಕೆ 'ಪಿಎಂ ನರೇಂದ್ರ ಮೋದಿ' ಎಂದು ಹೆಸರಿಟ್ಟಿದ್ದು, ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಜನವರಿ 7 ರಂದು ಬಿಡುಗಡೆಯಾಗಲಿದೆ. ಚಿತ್ರದ ಶೂಟಿಂಗ್ ಜನವರಿ ಮಧ್ಯದಲ್ಲಿ ಆರಂಭವಾಗಲಿದೆಯಂತೆ. ಒಮಂಗ್ ಕುಮಾರ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಸಂದೀಪ್ ಎಸ್ ಸಿಂಗ್ ನಿರ್ಮಾಣ ಮಾಡುತ್ತಿದ್ದಾರೆ.

  ಎಲ್ಲೆಲ್ಲಿ ಶೂಟಿಂಗ್ ಆಗಲಿದೆ

  ಎಲ್ಲೆಲ್ಲಿ ಶೂಟಿಂಗ್ ಆಗಲಿದೆ

  ಮೋದಿ ಬಯೋಪಿಕ್ ಕುರಿತಂತೆ ದೇಶದ ಹಲವು ಕಡೆ ಚಿತ್ರೀಕರಣ ನಡೆಯಲಿದೆ. ಗುಜರಾತ್, ದೆಹಲಿ, ಉತ್ತರಖಂಡ್, ಹಿಮಾಚಲ್ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲು ನಿರ್ಧರಿಸಲಾಗಿದೆಯಂತೆ.

  'ಮೋದಿ'ಯಂತೆ ಪ್ರಧಾನಿ ಆಗಲಿದ್ದಾರೆ ನಟ ಅಕ್ಷಯ್ ಕುಮಾರ್?

  ಮೋದಿ ಆಗಲಿಲ್ಲ ಅಕ್ಷಯ್

  ಮೋದಿ ಆಗಲಿಲ್ಲ ಅಕ್ಷಯ್

  ಈ ಹಿಂದೆ ನರೇಂದ್ರ ಮೋದಿ ಬಯೋಪಿಕ್ ನಲ್ಲಿ ಅಕ್ಷಯ್ ಕುಮಾರ್ ನಟಿಸಲಿದ್ದಾರೆ ಎನ್ನಲಾಗಿತ್ತು. ಬಯೋಪಿಕ್ ಪಾತ್ರಗಳನ್ನ ಮಾಡುವಲ್ಲಿ ಯಶಸ್ವಿಯಾಗಿದ್ದ ಅಕ್ಷಯ್, ಈ ಪಾತ್ರಕ್ಕೆ ಸೂಕ್ತ ಎಂಬ ಮಾತುಗಳು ಕೇಳಿಬಂದಿದ್ದವು. ಆದ್ರೆ, ಅಂತಿಮವಾಗಿ ವಿವೇಕ್ ಒಬೆರಾಯ್ ಮೋದಿ ಆಗುತ್ತಿದ್ದಾರೆ.

  ಮನಮೋಹನ್ ಸಿಂಗ್ ಬಯೋಪಿಕ್

  ಮನಮೋಹನ್ ಸಿಂಗ್ ಬಯೋಪಿಕ್

  ಈಗಾಗಲೇ 'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಹೆಸರಿನಲ್ಲಿ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಬಯೋಪಿಕ್ ಸಿದ್ಧವಾಗಿದ್ದು, ಬಿಡುಗಡೆಯಾಗಲು ಸಜ್ಜಾಗಿದೆ.

  ಮನಮೋಹನ್ ಸಿಂಗ್ ಕುರಿತು ಸಿನಿಮಾ, ಸೋನಿಯಾ ಪಾತ್ರದಲ್ಲಿ ಯಾರು?

  English summary
  Confirmed! Vivek Oberoi will feature in PM Narendra Modi biopic, first poster to be out on January 7. Directed by Omung Kumar, Produced by Sandip Singh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X