For Quick Alerts
  ALLOW NOTIFICATIONS  
  For Daily Alerts

  'ಬಾದ್‌ಶಾಹೋ' ಟೀಸರ್ ಔಟ್, ಟ್ವಿಟ್ಟರ್ ಟ್ರೆಂಡಿಂಗ್‌ನಲ್ಲಿ 2ನೇ ಸ್ಥಾನ!

  By Suneel
  |

  ಬಾಲಿವುಡ್ ನಲ್ಲಿ ಇತ್ತೀಚೆಗೆ ಪ್ರಯೋಗಾತ್ಮಕ, ಐತಿಹಾಸಿಕ, ವಿವಿಧ ಕ್ಷೇತ್ರಗಳ ಸಾಧಕರ ಹಿನ್ನೆಲೆಯ ಆಧಾರಿತ ಸಾಲು ಸಾಲು ಚಿತ್ರಗಳು ಮೂಡಿಬರುತ್ತಿವೆ. ಅದಕ್ಕೆ ಉದಾಹರಣೆ ಅಮೀರ್ ಖಾನ್ ಅಭಿನಯದ 'ದಂಗಲ್', ಸಲ್ಮಾನ್ ಖಾನ ಅಭಿನಯದ 'ಸುಲ್ತಾನ್', ಸಚಿನ್ ತೆಂಡೂಲ್ಕರ್ ರವರ 'ಸಚಿನ್: ದಿ ಬಿಲಿಯನ್ ಡ್ರೀಮ್ಸ್' ಚಿತ್ರಗಳು. ಈಗ ಇವುಗಳ ಸಾಲಿಗೆ ಬಾಲಿವುಡ್ ನಟ ಅಜಯ್ ದೇವಗನ್ ಅಭಿನಯದ ಚಿತ್ರವೊಂದು ಸೇರಿಕೊಂಡಿದೆ.

  ಅಜಯ್ ದೇವಗನ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಬಾದ್‌ಶಾಹೊ' ಟೀಸರ್ ಬಿಡುಗಡೆ ಆಗಿದ್ದು, ಟ್ಟಿಟ್ಟರ್ ಟ್ರೆಂಡಿಂಗ್ ನಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಚಿತ್ರವು ಸಹ 1975 ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿನ ಕಥೆ ಆಧಾರಿತವಾಗಿದ್ದು, 6 ಜನರು ಮಿಲಿಟರಿ ಪಡೆಗಳಿಂದ ತಪ್ಪಿಸಿಕೊಂಡು 600 ಕಿಲೋ ಮೀಟರ್ ದೂರ ಚಿನ್ನವನ್ನು ಟ್ರಕ್ ನಲ್ಲಿ ಸಾಗಿಸುವ ಕುತೂಹಲಕಾರಿ ಕಥೆ ಚಿತ್ರದಲ್ಲಿದೆ.

  'ಬಾದ್‌ಶಾಹೊ' ಪಕ್ಕಾ ಆಕ್ಷನ್ ಥ್ರಿಲ್ಲರ್ ಸಿನಿಮಾ. ಚಿತ್ರದಲ್ಲಿ ಅಜಯ್ ದೇವಗನ್ ಮಾತ್ರವಲ್ಲದೇ ಬಾಲಿವುಡ್ ತಾರೆಯರ ಬಹುದೊಡ್ಡ ತಾರಾಬಳಗವೇ ಇದೆ. ಸೀರಿಯಲ್ ಕಿಸ್ಸರ್ ಇಮ್ರಾನ್ ಹಶ್ಮಿ, ವಿದ್ಯುತ್ ಜಮ್ವಾಲ್, ಇಶಾ ಗುಪ್ತಾ, ಇಲಿಯಾನ ಡಿ'ಕ್ರುಜ್ ಅಭಿನಯಿಸಿದ್ದಾರೆ.

  ಅಂದಹಾಗೆ ಚಿತ್ರಕ್ಕೆ ಮಿಲನ್ ಲುಥ್ರಿಯ ಆಕ್ಷನ್ ಕಟ್ ಹೇಳಿದ್ದು, 'ವರ್ಟೆಕ್ಸ್ ಮೋಶನ್ ಪಿಕ್ಚರ್ಸ್' ಕಂಪನಿ ಅಡಿಯಲ್ಲಿ ಗುಲ್ಶಾನ್ ಕುಮಾರ್, ಭೂಷಣ್ ಕುಮಾರ್, ಕಿಶನ್ ಕುಮಾರ್ ಮತ್ತು ಮಿಲನ್ ಲುಥ್ರಿಯ ನಿರ್ಮಾಣ ಮಾಡಿದ್ದಾರೆ. ಚಿತ್ರ ಸೆಪ್ಟೆಂಬರ್ 1 ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. 'ಬಾದ್‌ಶಾಹೊ' ಚಿತ್ರದ ಟೀ ಟೀಸರ್ ನೋಡಲು ಕ್ಲಿಕ್ ಮಾಡಿ.

  English summary
  Bollywood Actors Ajay Devgn, Emraan Hashmi starrer 'Baadshaho' teaser out. This Movie is directed by Milan Luthria, features Ileana D'Cruz, Esha Gupta, Vidyut Jammwal.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X