»   » ಯುವ ಮನಸ್ಸುಗಳ ನಿದ್ದೆಕೆಡಿಸಿದ ಈಶಾ ಗುಪ್ತಾ ಬಿಕಿನಿ ವಿಡಿಯೋ!

ಯುವ ಮನಸ್ಸುಗಳ ನಿದ್ದೆಕೆಡಿಸಿದ ಈಶಾ ಗುಪ್ತಾ ಬಿಕಿನಿ ವಿಡಿಯೋ!

Posted By:
Subscribe to Filmibeat Kannada

ಕೆಲವು ನಟಿಯರು ತಮ್ಮ ನಟನೆಯ ಸಿನಿಮಾ ಹಿನ್ನೆಲೆಗಿಂತ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳ ಮೂಲಕವೇ ಆಗಾಗ ಸುದ್ದಿ ಆಗುತ್ತಿರುತ್ತಾರೆ. ಅದರಲ್ಲೂ ಹೆಚ್ಚಾಗಿ ಬಿಕಿನಿ ಪೋಟೋಗಳು, ಸ್ವಿಮ್ ಡ್ರೆಸ್‌ಗಳಲ್ಲಿ ತೆಗೆಸಿಕೊಂಡ ಫೋಟೋಗಳನ್ನು ಅಪ್‌ಲೋಡ್ ಮಾಡುವ ಮೂಲಕ ಪಡ್ಡೆಗಳ ಹೃದಯದಲ್ಲಿ ಕಚಗುಳಿ ಇಡುವುದೇ ಹೆಚ್ಚು. ಅಂತಹ ಸೆಲೆಬ್ರಿಟಿಗಳ ಸಾಲಿನಲ್ಲಿ ದೀರ್ಘಕಾಲದ ನಂತರ ಬಾಲಿವುಡ್ ನಟಿ ಈಶಾ ಗುಪ್ತಾ ಕಾಣಿಸಿಕೊಂಡಿದ್ದಾರೆ.

ಹೌದು, ಈವರೆಗೂ ಸಾಮಾಜಿಕ ಜಾಲತಾಣದ ಮೂಲಕ ಹೆಚ್ಚು ಸದ್ದು ಮಾಡದ ಈಶಾ ಗುಪ್ತಾ ನಿನ್ನೆಯಷ್ಟೇ ಒಂದು ವಿಡಿಯೋ ತುಣುಕನ್ನು ಇನ್‌ಸ್ಟಗ್ರಾಂ ನಲ್ಲಿ ಬಿಡುಗಡೆ ಮಾಡುವ ಮೂಲಕ ಇಂಟರ್ನೆಟ್ ಬಳಕೆದಾರರ ಗಮನ ಸೆಳೆದಿದ್ದಾರೆ.

watch: Esha Gupta's mind blowing bikini hot photo shoot video

ಈಶಾ ಗುಪ್ತಾ, ವಿವಿಧ ಬಿಕಿನಿ ಡ್ರೆಸ್‌ಗಳಲ್ಲಿ ಇರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯುವಕರ ನಿದ್ದೆಕೆಡಿಸಿದೆ. ಈ ವಿಡಿಯೋದ ಬ್ಯಾಗ್ರೌಂಡ್ ಮ್ಯೂಸಿಕ್ ಸಹ ಮನಸ್ಸಿಗೆ ಹೆಚ್ಚು ಮುದನೀಡುವಂತಿದ್ದು, ಪ್ರೇಕ್ಷಕರನ್ನು ಬೇರೆಯದೇ ಲೋಕದಲ್ಲಿ ತೇಲಾಡಿಸುವಂತಿದೆ. ಈಶಾ ಬಿಕಿನಿ ಡ್ರೆಸ್ ನಲ್ಲಿ ತಮ್ಮ ಮೈಮಾಟ ಪ್ರದರ್ಶನದ ಜೊತೆಗೆ ಅವರ ಮೈಮೇಲಿನ ಟ್ಯಾಟೂಗಳು ಕಾಣಿಸಿಕೊಂಡಿದ್ದು ಗಮನಸೆಳೆದಿವೆ. ವಿಡಿಯೋದಲ್ಲಿ ಕಮಿಂಗ್ ಸೂನ್ ವಿತ್ ಮೋಹಿತ್ ರೈ ಮತ್ತು ಅರ್ಜುನ್ ಮಾರ್ಕ್ ಎಂದು ಬರೆಯಲಾಗಿದೆ. ಆ ಮನಮೋಹಕ ವಿಡಿಯೋ ಈ ಕೆಳಗಿನಂತಿದೆ ನೋಡಿ.

Coming Soon.. film by @arjun.mark

A post shared by Esha Gupta (@egupta) on Jul 10, 2017 at 7:03am PDT

ಈಶಾ ಗುಪ್ತಾ ಈ ವಿಡಿಯೋವನ್ನು ಅಪ್‌ಲೋಡ್ ಮಾಡಿದ ಒಂದು ದಿನದ ಅಂತರದಲ್ಲೇ 2.7 ಲಕ್ಷಕ್ಕಿಂತ ಹೆಚ್ಚು ಬಾರಿ ವೀಕ್ಷಣೆ ಪಡೆದಿದೆ. ಹಲವರು ಈ ವಿಡಿಯೋ ನೋಡಿ ಈಶಾಗೆ 'ಲವ್ ಯು, ಉಸಿರುಗಟ್ಟಿಸುವಂತಿದೆ, ಮೈ ಬೇಬಿ ಗರ್ಲ್' ಎಂದು ಕಾಮೆಂಟ್ ಮಾಡಿದ್ದಾರೆ.

ಅಂದಹಾಗೆ ಈಶಾ ಗುಪ್ತಾ ಸದ್ಯದಲ್ಲಿ ಅಜಯ್ ದೇವಗನ್ ಅಭಿನಯದ 'ಬಾದ್‌ಶಾಹೋ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ಮಿಲನ್ ಲೂಥ್ರಿಯ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ಸೀರಿಯಲ್ ಕಿಸ್ಸರ್ ಇಮ್ರಾನ್ ಹಸ್ಮಿ ಮತ್ತು ವಿದ್ಯುತ್ ಜಮ್ವಾಲ್ ರವರು ಅಭಿನಯಿಸಿದ್ದಾರೆ.

English summary
Esha Gupta Bares In Sexy Lingerie For a Photo Shoot; Watch Video

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada