»   » ಬನ್ಸಾಲಿ ಅವರ 'ಬಾಜಿರಾವ್ ಮಸ್ತಾನಿ' ಟ್ರೈಲರ್ ಸೂಪರ್

ಬನ್ಸಾಲಿ ಅವರ 'ಬಾಜಿರಾವ್ ಮಸ್ತಾನಿ' ಟ್ರೈಲರ್ ಸೂಪರ್

Posted By:
Subscribe to Filmibeat Kannada

ಬಿಟೌನ್ ನಲ್ಲಿ ಒಂದು ಕಾಲದಲ್ಲಿ ಭಾರಿ ಸುದ್ದಿ ಮಾಡಿದ್ದ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಯನ್ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ 'ರಾಮ್ ಲೀಲಾ' ಚಿತ್ರದ ಮೂಲಕ ತೆರೆಯ ಮೇಲೆ ಒಂದಾಗಿಸಿದ್ದರು.

ಇದೀಗ ಅದೇ ಬನ್ಸಾಲಿ ಮತ್ತೆ ಇದೇ ಜೋಡಿಯನ್ನ ತಮ್ಮ ಬಹುನಿರೀಕ್ಷಿತ ಚಿತ್ರ 'ಬಾಜಿರಾವ್ ಮಸ್ತಾನಿ' ಮೂಲಕ ಬಿಗ್ ಸ್ಕ್ರೀನ್ ಗೆ ಕರೆತಂದಿದ್ದಾರೆ. ಈಗಾಗಲೆ 'ಬಾಜಿರಾವ್ ಮಸ್ತಾನಿ' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಬಿಟೌನ್ ನಲ್ಲಿ ಹೊಸ ಹವಾ ಎಬ್ಬಿಸುತ್ತಿದೆ.

ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಪ್ರಿಯಾಂಕ ಚೋಪ್ರಾ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ 'ಬಾಜಿರಾವ್ ಮಸ್ತಾನಿ' ಚಿತ್ರದ ಟೀಸರ್ ನೀವೇ ನೋಡಿ...

Watch Hindi movie 'Bajirao Mastani' official teaser

ಎರೋಸ್ ಇಂಟರ್ ನ್ಯಾಷನಲ್ ಹಾಗೂ ಬನ್ಸಾಲಿ ಪ್ರೊಡಕ್ಷನ್ಸ್ ಅರ್ಪಿಸುವ 'ಬಾಜಿರಾವ್ ಮಸ್ತಾನಿ' ಟೀಸರ್ ನಲ್ಲಿ 'ಬಾಜಿರಾವ್' ಪಾತ್ರ ನಿರ್ವಹಿಸಿರುವ ರಣವೀರ್ ಸಿಂಗ್ ಕುದುರೆಯ ಮೇಲೆ ಕುಳಿತು ಗ್ರ್ಯಾಂಡ್ ಎಂಟ್ರಿ ಕೊಡುವ ಆ ಭವ್ಯವಾದ ನೋಟ ಸಖತ್ ಆಗಿ ಮೂಡಿಬಂದಿದೆ.

ದೀಪಿಕಾ ಪಡುಕೋಣೆ 'ಮಸ್ತಾನಿ' ಆಗಿ ಮಿಂಚಿದ್ದಾರೆ. ಇನ್ನೂ ರಾಣಿ ಕಾಶಿ ಪಾತ್ರದಲ್ಲಿ ಪ್ರಿಯಾಂಕ ಚೋಪ್ರಾ ರಾಯಲ್ ಕಾಸ್ಟ್ಯೂಮ್ ನಲ್ಲಿ ಕಾಣಿಸಿಕೊಂಡಿರುವುದು ಟೀಸರ್ ನ ಹೈಲೈಟ್.

'ಬಾಜಿರಾವ್ ಮಸ್ತಾನಿ' ಚಿತ್ರದ ಅದ್ಧುತ ಮೇಕಿಂಗ್ ಕಣ್ಣು ಕುಕ್ಕುವಂತಿದೆ. ಚಿತ್ರಕ್ಕೆ ಸಂಜಯ್ ಲೀಲಾ ಬನ್ಸಾಲಿ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಒಟ್ಟಾರೆ ಹೇಳಬೇಕೆಂದರೆ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು ಚಿತ್ರವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ನಿರ್ದೇಶಕ ಬನ್ಸಾಲಿ ಡಿಸೆಂಬರ್ ನಲ್ಲಿ ಚಿತ್ರವನ್ನು ತೆರೆಗೆ ತರಲು ಪ್ಲಾನ್ ಮಾಡಿದ್ದಾರೆ. ಕಿಂಗ್ ಖಾನ್, ಶಾರುಖ್ ಅಭಿನಯದ 'ದಿಲ್ ವಾಲೆ' ಕೂಡ ಡಿಸೆಂಬರ್ 18 ಕ್ಕೆ ತೆರೆ ಮೇಲೆ ಬರುವುದರಿಂದ ಯಾವ ಚಿತ್ರ 2015 ರ ಬ್ಲಾಕ್ ಬಸ್ಟರ್ ಹಿಟ್ ಆಗುತ್ತೆ ಅಂತ ಕಾದು ನೋಡಬೇಕಿದೆ.

English summary
Hindi movie 'Bajirao Mastani' official teaser is out. 'Bajirao Mastani' features Bollywood actor Ranveer singh, Actress Deepika Padukone, Priyanka Chopra in the lead. The movie is directed by Sanjay Leela Bhansali. Watch the teaser here

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada