»   »  50 ಲಕ್ಷ ಜನರನ್ನು ಆಕರ್ಷಿಸಿದ, 'ಪ್ರೇಮ್ ರತನ್ ಧನ್ ಪಾಯೋ'

50 ಲಕ್ಷ ಜನರನ್ನು ಆಕರ್ಷಿಸಿದ, 'ಪ್ರೇಮ್ ರತನ್ ಧನ್ ಪಾಯೋ'

Posted By:
Subscribe to Filmibeat Kannada

ಬಾಲಿವುಡ್ ನ ಬಾಕ್ಸಾಫೀಸ್ ಸುಲ್ತಾನ ಸಲ್ಮಾನ್ ಖಾನ್ ಅವರ 'ಭಜರಂಗಿ ಭಾಯ್ ಜಾನ್' ಬಾಕ್ಸಾಫೀಸ್ ನಲ್ಲಿ ಕೋಟಿ ಕೋಟಿ ಬಾಚಿಕೊಂಡು ಇಡೀ ಬಿಟೌನ್ ನಲ್ಲಿ ಸುದ್ದಿ ಮಾಡಿರುವ ವಿಚಾರ ನಿಮಗೆ ತಿಳಿದೇ ಇದೆ.

ಜೊತೆಗೆ ಕರೀನಾ ಕಪೂರ್, ಸಲ್ಮಾನ್ ಖಾನ್ ಹಾಗೂ ಹರ್ಷಾಲಿ ಮಲ್ಹೋತ್ರಾ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದ 'ಭಜರಂಗಿ ಭಾಯ್ ಜಾನ್' ಚಿತ್ರದಲ್ಲಿ ಸಲ್ಮಾನ್ ಖಾನ್ ಅವರು ಪ್ರೇಮ್ ಎಂಬ ಹೆಸರಿನಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು ಮೋಡಿ ಮಾಡಿದ್ದರು.

Watch Hindi Movie 'Prem Ratan Dhan Payo' Official Trailer

ಇದೀಗ ಮತ್ತೆ 'ಪ್ರೇಮ್ ರತನ್ ಧನ್ ಪಾಯೋ' ಎಂಬ ಹೊಸ ಚಿತ್ರದ ಮೂಲಕ ಪ್ರೇಮ್ ಎಂಬ ಹೆಸರಿನಲ್ಲಿ ವಾಪಸಾಗಿದ್ದಾರೆ. ಇನ್ನು ಈ ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು, ಎಲ್ಲೆಡೆ ಸಖತ್ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ.

ಸಲ್ಮಾನ್ ಖಾನ್, ಸೋನಂ ಕಪೂರ್, ನೀಲ್ ನಿತಿನ್ ಮುಖೇಶ್, ಅನುಪಮ್ ಖೇರ್ ಮುಂತಾದವರು ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ 'ಪ್ರೇಮ್ ರತನ್ ಧನ್ ಪಾಯೋ' ಚಿತ್ರದ ಟ್ರೈಲರ್ ಬಿಡುಗಡೆಯಾದ ಒಂದೇ ದಿನದಲ್ಲಿ, (ಕೇವಲ 24 ಘಂಟೆಯಲ್ಲಿ) ಸುಮಾರು 50 ಲಕ್ಷ ನೋಡುಗರನ್ನು ಆಕರ್ಷಿಸುವ ಮೂಲಕ ದಾಖಲೆ ಸೃಷ್ಟಿಸಿದೆ. ಚಿತ್ರದಲ್ಲಿ ಪ್ರೇಮ್ ರತನ್ ಕಮಾಲ್ ನೋಡಲು ಈ ಟ್ರೈಲರ್ ನೋಡಿ.

Watch Hindi Movie 'Prem Ratan Dhan Payo' Official Trailer

ಸಲ್ಮಾನ್ ಖಾನ್ ಹೊಸ ಚಿತ್ರದ ಟ್ರೈಲರ್ ಇಷ್ಟು ಹಿಟ್ ಆಗಲು ಮುಖ್ಯ ಕಾರಣವೇನೆಂದರೆ, ಚಿತ್ರದಲ್ಲಿ ಸೋನಂ ಕಪೂರ್ ಲವ್ಲೀ ಆಕ್ಟ್, ಹಾಗೂ ಇದು ಪಕ್ಕಾ ಫ್ಯಾಮಿಲಿ ಎಂರ್ಟಟೈನರ್ ಕಥೆಯಾಧರಿಸಿದ ಚಿತ್ರ. ಜೊತೆಗೆ ಬಹಳ ಅದ್ದೂರಿ ಸೆಟ್ ಹಾಕಿ ಚಿತ್ರವನ್ನು ಕಲಾತ್ಮಕವಾಗಿ ಮಾಡಲಾಗಿದೆ.

'ಪ್ರೇಮ್ ರತನ್ ಧನ್ ಪಾಯೋ' ಚಿತ್ರದಲ್ಲಿ ಸಲ್ಮಾನ್ ಖಾನ್ ಅವರು 'ಭಜರಂಗಿ ಭಾಯ್ ಜಾನ್' ಚಿತ್ರಕ್ಕಿಂತಲೂ ಮನೋಜ್ಞ ಅಭಿನಯ ನೀಡಿದ್ದು, ಪ್ರೇಕ್ಷಕರ ಮನಮುಟ್ಟುತ್ತಿದೆ. ಒಟ್ನಲ್ಲಿ 'ಭಜರಂಗಿ ಭಾಯ್ ಜಾನ್' ಚಿತ್ರದ ಭರ್ಜರಿ ಯಶಸ್ಸಿನಲ್ಲಿರುವ ಸಲ್ಮಾನ್ ಅವರು ಮತ್ತೊಮ್ಮೆ ಪ್ರೇಮ್ ಎಂಬ ಹೆಸರಿನಲ್ಲಿ ಪ್ರೇಕ್ಷಕರ ಹೃದಯಕ್ಕೆ ಲಗ್ಗೆ ಇಡುತ್ತಿದ್ದಾರೆ.

Watch Hindi Movie 'Prem Ratan Dhan Payo' Official Trailer

'ಮೈನೇ ಪ್ಯಾರ್ ಕಿಯಾ', 'ಹಮ್ ಆಪ್ ಕೆ ಹೈ ಕೌನ್', 'ದೀವಾನಾ ಮಸ್ತಾನಾ', 'ನೋ ಎಂಟ್ರಿ', 'ಹಮ್ ಸಾಥ್ ಸಾತ್ ಹೈ', 'ಬೀವಿ ನಂಬರ್ ಒನ್', 'ಸಿರ್ಫ್ ತುಮ್' ಹೀಗೆ ಹಲವಾರು ಚಿತ್ರಗಳಲ್ಲಿ ಪ್ರೇಮ್ ಆಗಿದ್ದ ಸಲ್ಮಾನ್ ಮುಂಬರುವ ಚಿತ್ರದಲ್ಲೂ ಪ್ರೇಮ್ ಹೆಸರಿನಲ್ಲಿ ಮಿಂಚಲಿದ್ದಾರೆ.

ರಾಜಶ್ರೀ ಪ್ರೊಡಕ್ಷನ್ಸ್ ಅರ್ಪಿಸುವ ಚಿತ್ರಕ್ಕೆ ನಿರ್ದೇಶಕ ಸೂರಜ್ ಬರಜಾತ್ಯ ಆಕ್ಷನ್-ಕಟ್ ಹೇಳಿದ್ದು, ಹಿಮೇಶ್ ರೆಶಿಮೀಯಾ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಇದೇ ವರ್ಷ ದೀಪಾವಳಿಗೆ ಕಲರ್ ಫುಲ್ 'ಪ್ರೇಮ್ ರತನ್ ಧನ್ ಪಾಯೋ' ಚಿತ್ರ ಬಿಡುಗಡೆಯಾಗಲಿದೆ.

English summary
Watch Prem Ratan Dhan Payo Official Trailer. Starring Salman Khan, Sonam Kapoor, Neil Nitin Mukesh, Anupam Kher and others. The movie set to release this Diwali on 12th November 2015. The Movie is Directed by Sooraj Barjatya.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada