»   » ಗೆಲುವಿನ ಕುದುರೆ ಅಕ್ಷಯ್ ಕುಮಾರ್ ಪಡೆಯುವ ಸಂಭಾವನೆ ಎಷ್ಟು?

ಗೆಲುವಿನ ಕುದುರೆ ಅಕ್ಷಯ್ ಕುಮಾರ್ ಪಡೆಯುವ ಸಂಭಾವನೆ ಎಷ್ಟು?

Posted By: Sonu Gowda
Subscribe to Filmibeat Kannada

ಬಾಲಿವುಡ್ ನಲ್ಲಿ ಸದ್ಯಕ್ಕೆ ಗೆಲುವಿನ ಬೆನ್ನತ್ತಿ ಓಡುತ್ತಿರುವ ನಟ ಅಕ್ಷಯ್ ಕುಮಾರ್ ಅವರಿಗೆ ಬಿಟೌನ್ ನಲ್ಲಿ ರಾಜ ಮರ್ಯಾದೆ ದೊರೆಯುತ್ತಿದೆ. ಅಕ್ಕಿ ಮುಟ್ಟಿದ್ದೆಲ್ಲಾ ಚಿನ್ನ ಆಗುತ್ತಿರುವುದರಿಂದ ಅವರ ನಟನೆಯ ಸಾಲು-ಸಾಲು ಚಿತ್ರಗಳು ಬ್ಲಾಕ್ ಬಸ್ಟರ್ ಹಿಟ್ ಲಿಸ್ಟಿಗೆ ಸೇರುತ್ತಿದೆ.

'ಏರ್ ಲಿಫ್ಟ್', 'ಹೌಸ್ ಫುಲ್ 3' ನಂತೆ ಇದೀಗ ಹಿಟ್ ಲಿಸ್ಟಿಗೆ ಸೇರಲು 'ರುಸ್ತುಂ' ಎಂಬ ಮತ್ತೊಂದು ಸಿನಿಮಾ ತಯಾರಾಗುತ್ತಿದ್ದು, ಚಿತ್ರದ ಟ್ರೈಲರ್ ಕೂಡ ಬಿಡುಗಡೆ ಆಗಿ ಸಾಕಷ್ಟು ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ.

ತಮ್ಮ 'ಏರ್ ಲಿಫ್ಟ್' ಚಿತ್ರದಲ್ಲಿ ತಾಯ್ನಿಡು ಭಾರತದ ಮಕ್ಕಳ ಬಗ್ಗೆ ಕಳಕಳಿ ಇಟ್ಟುಕೊಂಡು ಅವರ ಸಹಾಯಕ್ಕೆ ಧಾವಿಸುವ ಪಾತ್ರದಲ್ಲಿ ನಟಿಸಿ ನಟ ಅಕ್ಷಯ್ ಕುಮಾರ್ ಎಲ್ಲರ ಮೆಚ್ಚುಗೆ ಗಳಿಸಿಕೊಂಡಿದ್ದರು.[ಮಾಧ್ಯಮದ ಮುಂದೆ ಕಣ್ಣೀರು ಹಾಕಿದ ಅಕ್ಷಯ್ ಕುಮಾರ್]

Watch Hindi Movie 'Rustom' official Trailer

ಇದೀಗ ಮತ್ತೊಮ್ಮೆ 'ರುಸ್ತುಂ' ಚಿತ್ರದಲ್ಲಿ ತಾಯಿ ಭಾರತಾಂಬೆಯ ಹೆಮ್ಮೆಯ ಮಗನಾಗಿ ಇಂಡಿಯನ್ ನೇವಿ ಕಮಾಂಡರ್ ರುಸ್ತುಂ ಪಾವರಿ ಪಾತ್ರದಲ್ಲಿ ಮಿಂಚಿದ್ದಾರೆ. ನಿಜ ಘಟನೆಯಾಧರಿತ "ರುಸ್ತುಂ" ಚಿತ್ರದಲ್ಲಿ ನೌಕಾಧಿಕಾರಿ ಕೆ.ಎಮ್ ನಾನಾವತಿ ಅವರ ಇಡೀ ಜೀವನದ ಕಥೆಯನ್ನು ಎಳೆ-ಎಳೆಯಾಗಿ ಬಿಚ್ಚಿಡಲಾಗಿದೆ.[ಸದಾ ಬಡವರಿಗಾಗಿ ಮಿಡಿಯುತ್ತದೆ ಅಕ್ಷಯ್ ಕುಮಾರ್ ಹೃದಯ]

ಚಿತ್ರಕ್ಕೆ ಟೀನು ಸುರೇಶ್ ದೇಸಾಯಿ ನಿರ್ದೇಶನ ಮಾಡಿದ್ದು, ಫ್ರೈಡೇ ಫಿಲ್ಮ್ ವರ್ಕ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದೆ. ಇದೇ ಮೊದಲ ಬಾರಿಗೆ ತೆಳ್ಳಗಿನ ಸುಂದರಿ ಇಲಿಯಾನಾ ಅವರು ಅಕ್ಷಯ್ ಕುಮಾರ್ ಜೊತೆ ರೋಮ್ಯಾನ್ಸ್ ಮಾಡುತ್ತಿದ್ದಾರೆ.

ಅಂದಹಾಗೆ ಎರಡು ಸಿನಿಮಾಗಳು 100 ಕೋಟಿ ಕ್ಲಬ್ ಸೇರಿದ ಪರಿಣಾಮ ನಟ ಅಕ್ಷಯ್ ಕುಮಾರ್ ಅವರ ಸಂಭಾವನೆ ಬರೋಬ್ಬರಿ 50 ಕೋಟಿ ದಾಟಿದೆ. ಅಕ್ಷಯ್ ಕುಮಾರ್ ಅವರು 'ವೆಲ್ ಕಂ 3' ಚಿತ್ರಕ್ಕೆ ಭರ್ತಿ 50 ಕೋಟಿ ರೂಪಾಯಿ ಆಫರ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.[ಬಿಗ್ ಬಾಸ್ 'ಡಬ್ಬಲ್ ಟ್ರಬಲ್' ರಹಸ್ಯ ಬಹಿರಂಗ]

ಅಕ್ಷಯ್ ಕುಮಾರ್ ಮತ್ತು ಇಲಿಯಾನಾ ಕಾಂಬಿನೇಷನ್ ನ 'ರುಸ್ತುಂ' ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಆಗಸ್ಟ್ 12 ಕ್ಕೆ ಭರ್ಜರಿಯಾಗಿ ಚಿತ್ರ ತೆರೆಗೆ ಅಪ್ಪಳಿಸಲಿದೆ. ಕುತೂಹಲಕಾರಿಯಾಗಿ ಮೈನವಿರೇಳಿಸುವ 'ರುಸ್ತುಂ' ಟ್ರೈಲರ್ ಇಲ್ಲಿದೆ ನೋಡಿ.....

(ರುಸ್ತುಂ ಚಿತ್ರದ ಕಲರ್ ಫುಲ್ ಸ್ಟಿಲ್ಸ್ ಕೆಳಗಿನ ಗ್ಯಾಲರಿಯಲ್ಲಿ).......

-
-
-
-
-
-
-
-
-
-
-
-
-
-

English summary
Watch Hindi Movie 'Rustom' official Trailer. Starring Bollywood Actor Akshay Kumar, Actress ‪Ileana Dcruz,‬ Actress Esha Gupta, ‪‎Arjan Bajwa‬ and others. Movie Directed by Tinu Suresh Desai.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X