»   » ಟ್ರೈಲರ್: 'ಸರ್ಬ್ಜಿತ್'ನಲ್ಲಿ ಐಶ್ವರ್ಯ ರೈ ನಟನೆ ಭಯಂಕರ

ಟ್ರೈಲರ್: 'ಸರ್ಬ್ಜಿತ್'ನಲ್ಲಿ ಐಶ್ವರ್ಯ ರೈ ನಟನೆ ಭಯಂಕರ

Posted By:
Subscribe to Filmibeat Kannada

ಬಹಳ ದಿನಗಳಿಂದ ಕಾಯುತ್ತಿದ್ದ ಐಶ್ವರ್ಯ ರೈ ಅಭಿಮಾನಿಗಳ ಕಾಯುವಿಕೆಗೆ ಇದೀಗ ಬ್ರೇಕ್ ಬಿದ್ದಿದೆ. ಹೌದು ವಿಭಿನ್ನ ಪೋಸ್ಟರ್ ಗಳ ಮೂಲಕ ಭಾರಿ ಕುತೂಹಲ ಹುಟ್ಟಿಸಿದ್ದ ಬಹುನಿರೀಕ್ಷಿತ ಸಿನಿಮಾ 'ಸರ್ಬ್ಜಿತ್' ಚಿತ್ರದ ಟ್ರೈಲರ್ ಕೊನೆಗೂ ರಿಲೀಸ್ ಆಗಿದೆ.

ಅಕ್ಕ-ತಮ್ಮನ ಕಥೆಯನ್ನು ಸಾರುವ ಈ ಚಿತ್ರಕ್ಕೆ 'ಮೇರಿ ಕೋಮ್' ಖ್ಯಾತಿಯ ನಿರ್ದೇಶಕ ಒಮಂಗ್ ಕುಮಾರ್ ಆಕ್ಷನ್-ಕಟ್ ಹೇಳಿದ್ದಾರೆ. ಇದೀಗ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಟ್ರೈಲರ್ ನಲ್ಲಿ ನಟ ರಣದೀಪ್ ಹೂಡ ಮತ್ತು ನಟಿ ಐಶ್ವರ್ಯ ರೈ ಅವರ ನಟನೆ ನೋಡಿ ಇಡೀ ಪ್ರೇಕ್ಷಕ ವರ್ಗವೇ ಒಂದು ಕ್ಷಣ ಅವಕ್ಕಾಗಿದೆ.[ಇದು ಐಶ್ವರ್ಯನಾ? ಗುಡಿಯಲ್ಲಿ ಬಚ್ಚನ್ ಸೊಸೆ ಕಸ ಗುಡಿಸಿದ್ರಾ?]

Watch Hindi Movie 'Sarabjit' Official Trailer

ಹೌದು 'ಜಸ್ಬಾ' ಚಿತ್ರದ ನಂತರ ಮತ್ತೆ ಗ್ರ್ಯಾಂಡ್ ಆಗಿ 'ಸರ್ಬ್ಜಿತ್' ಚಿತ್ರದ ಮೂಲಕ ವಾಪಸಾದ ಬಚ್ಚನ್ ಫ್ಯಾಮಿಲಿ ಸೊಸೆ ನಟಿ ಐಶ್ವರ್ಯ ರೈ ಅವರ ನಟನೆ ಕಂಡು ಅವರ ಅಭಿಮಾನಿಗಳ ಕಣ್ಣಲ್ಲಿ ನೀರು ಉಕ್ಕೋದು ಗ್ಯಾರಂಟಿ.

ಈ ಬಗ್ಗೆ ಖುದ್ದು ಐಶ್ವರ್ಯ ರೈ ಅವರೇ ಟ್ವೀಟ್ ಮಾಡಿದ್ದಾರೆ. 'ಸಾಮಾನ್ಯವಾಗಿ ನನ್ನ ಕಣ್ಣಲ್ಲಿ ನೀರು ಬರೋದಿಲ್ಲ. ಆದರೆ ಈ ಚಿತ್ರದಲ್ಲಿ ನಟಿಸುವ ಸಂದರ್ಭದಲ್ಲಿ ಹಾಗೂ ಇವಾಗ ಟ್ರೈಲರ್ ನೋಡುತ್ತಿದ್ದಂತೆ ನನ್ನ ಕಣ್ಣಲ್ಲೇ ನೀರು ಬಂತು' ಎಂದು ಟ್ವೀಟ್ ಮಾಡಿದ್ದಾರೆ.[ಸುಂದರಿ ಐಶ್ವರ್ಯ ರೈ ಅವರ ಹೊಸ ಫೋಟೋ ಶೂಟ್]

ಗುಲ್ಶನ್ ಕುಮಾರ್, ಪೂಜಾ ಎಂರ್ಟಟೈನ್ಮೆಂಟ್ ಲೆಜೆಂಡ್ ಸ್ಟುಡಿಯೋ ಅರ್ಪಿಸುವ 'ಸರ್ಬ್ಜಿತ್' ಚಿತ್ರದ ಟ್ರೈಲರ್ ಇಲ್ಲಿದೆ ನೋಡಿ...

Watch Hindi Movie 'Sarabjit' Official Trailer

ಇನ್ನು ಈ ಟ್ರೈಲರ್ ಬಗ್ಗೆ ಅಭಿಮಾನಿಗಳಿಂದ ವ್ಯಾಪಕ ಅಭಿಪ್ರಾಯಗಳು ವ್ಯಕ್ತವಾಗಿದೆ. ಟ್ವಿಟ್ಟರ್ ಮೂಲಕ ಐಶ್ವರ್ಯ ರೈ ಮತ್ತು ರಣದೀಪ್ ಹೂಡಾ ಅವರ ನಟನೆಯನ್ನು ಮನತುಂಬಿ ಅಭಿಮಾನಿಗಳು ಹೊಗಳಿದ್ದಾರೆ.[ಪಾತ್ರಕ್ಕಾಗಿ 18 ಕೆಜಿ ತೂಕ ಇಳಿಸಿಕೊಂಡ ನಟ ಹೂಡಾ]

ಅಭಿಮಾನಿಗಳ ಸರಣಿ ಟ್ವೀಟ್ ಮತ್ತು ಟ್ರೈಲರ್ ಲಾಂಚ್ ಕಾರ್ಯಕ್ರಮದ ಫೋಟೋ ಗ್ಯಾಲರಿ ನೋಡಿ ಕೆಳಗಿನ ಸ್ಲೈಡುಗಳಲ್ಲಿ...

-
-
-
-
-
-
-
-
-
-
-
-
-
-
-
-
-
-
-
-
-
-
-
English summary
Watch the trailer of the highly anticipated Movie 'Sarbjit' starring Aishwarya Rai Bachchan, Randeep Hooda, Richa Chadda and Darshan Kumaar. The movie is directed by Omung Kumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada