For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ 'ಕಿಕ್' ಟ್ರೇಲರ್ ಸೂಪರ್ ಗುರೂ

  By ಜೇಮ್ಸ್ ಮಾರ್ಟಿನ್
  |

  ಸಲ್ಮಾನ್ ಖಾನ್ ಅವರು ನಾಯಕರಾಗಿರುವ ಕಿಕ್ ಚಿತ್ರದ ಹೊಚ್ಚ ಹೊಸ ಟ್ರೇಲರ್ ಭಾನುವಾರ ಬಿಡುಗಡೆಯಾಗಿದೆ. ವರ್ಷಾನುವರ್ಷದಿಂದ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸುತ್ತಲೇ ಬಂದಿರುವ ಕಿಕ್ ಚಿತ್ರದ ಟ್ರೇಲರ್, ಸಲ್ಮಾನ್ ಲುಕ್, ಜಾಕ್ವಲಿನ್ ರೂಪ, ರಣದೀಪ್ ಹೊಸ ಪಾತ್ರಕ್ಕೆ ಪ್ರೇಕ್ಷಕ ಫಿದಾ ಆಗುವುದು ಗ್ಯಾರಂಟಿ ಎಂದು ಬಾಲಿವುಡ್ ಪಂಡಿತರು ಹೇಳಿದ್ದಾರೆ.

  ಎಲ್ಲರಿಗೂ ಗೊತ್ತಿರುವ ಹಾಗೆ ಈ ಚಿತ್ರ ಕೂಡಾ ತೆಲುಗಿನ ಸೂಪರ್ ಹಿಟ್ ಚಿತ್ರದ ರಿಮೇಕ್. ತೆಲುಗಿನಲ್ಲಿ ರವಿತೇಜ ಅಭಿನಯಿಸಿದ ಕಿಕ್ ಚಿತ್ರವನ್ನು ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲ ನಿರ್ದೇಶಕನ ಕ್ಯಾಪ್ ಧರಿಸಿ ಈ ಚಿತ್ರವನ್ನು ಮುಂದಿನ ಈದ್ ಸಂದರ್ಭದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

  ಸಲ್ಮಾನ್ ಖಾನ್ ಹೊಸ ಸ್ಟೈಲ್'ಗೆ ಕಿಕ್ ಸ್ಟಾರ್ಟ್ ಮಾಡಿದ್ದಾರೆ. ಜೀವನದಲ್ಲಿ ಎಂದಿಗೂ ಗಡ್ಡವಿರಲಿ ಮೀಸೆ ಕೂಡ ಬಿಡದ ಸಲ್ಲೂ ಮಿಯಾ ಈ ಚಿತ್ರಕ್ಕಾಗಿ ಫ್ರೆಂಚ್ ದಾಡಿಯಲ್ಲಿ ಕಾಣಿಸಿಕೊಂಡಿದ್ದಾರೆ. [ಬಹು ನಿರೀಕ್ಷಿತ ಮೆಗಾ ಚಿತ್ರಗಳು]

  ಟ್ರೇಲರ್ ಹೇಗಿದೆ? ಸಲ್ಮಾನ್ ಹೊಸ ಲುಕ್, ಜಾಕ್ವಲಿನ್, ರಣದೀಪ್, ಸಿದ್ದಿಕಿ, ವಿದೇಶದಲ್ಲಿ ಚಿತ್ರೀಕರಣ.. ಸಕತ್ ಸಾಹಸ ದೃಶ್ಯಗಳನ್ನು ಮುಂದೆ ನೋಡಿ...

  ಒರಿಜಿನಲ್ ಮೀಸೆ ಬಿಟ್ಟ ಸಲ್ಲೂ ಮಿಯಾ

  ಒರಿಜಿನಲ್ ಮೀಸೆ ಬಿಟ್ಟ ಸಲ್ಲೂ ಮಿಯಾ

  ದಬಾಂಗ್ ಚಿತ್ರದ ಎರಡು ಸರಣಿಗಳಲ್ಲೂ ಸಲ್ಮಾನ್ ಖಾನ್ ಮೀಸೆ ಹೊಂದಿದ್ದು ನೆನಪಿರಬಹುದು. ಆದರೆ, ಅವೆಲ್ಲಾ ಕೃತಕ ಮೀಸೆಗಳಾಗಿದ್ದವು. ಸಲ್ಮಾನ್ ಎಂದಿಗೂ ಮೀಸೆ ಬಿಟ್ಟವರಲ್ಲ. ಆದರೆ, ಸಾಜಿದ್ ನಾಡಿಯಾದ್ ವಾಲಾ ಅವರ 'ಕಿಕ್' ಚಿತ್ರಕ್ಕಾಗಿ ಸಲ್ಮಾನ್ ಖಾನ್ ಒರಿಜಿನಲ್ ಮೀಸೆ, ಗಡ್ಡ ಬಿಡಲು ನಿರ್ಧರಿಸಿರುವುದು ಎಲ್ಲರಿಗೂ ಅಚ್ಚರಿ ಹುಟ್ಟಿಸಿದೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಫ್ರೆಂಚ್ ಗಡ್ಡವಷ್ಟೇ ಅಲ್ಲ ಕಿವಿಗೆ ಓಲೆಯನ್ನೂ ಸಿಕ್ಕಿಸಿಕೊಳ್ಳಲಿದ್ದಾರೆ. ಸಲ್ಲೂ ಹೊಸ ಲುಕ್ ಈಗಾಗಲೇ ಜನಪ್ರಿಯತೆ ಪಡೆದುಕೊಳ್ಳುತ್ತಿದೆ.

  ಕಿಕ್ ಇರದ ಬದುಕು ಬದುಕೇ ಅಲ್ಲ

  ಕಿಕ್ ಇರದ ಬದುಕು ಬದುಕೇ ಅಲ್ಲ

  ಕಿಕ್ ಇರದ ಬದುಕು ಬದುಕೇ ಅಲ್ಲ ಎಂಬ ಡೈಲಾಗ್ ಗಳು ತೆಲುಗು ಮೂಲವಾದರು ಇಲ್ಲಿ ಸಲ್ಲೂ ಪಾತ್ರ, ಡೈಲಾಗ್ ಗಳು ಬದಲಾಗುತ್ತದೆಯಂತೆ. ಏನಿದೆ ಅಂಥ ಸ್ಪೆಷಲ್ ಎಂದು ಸಲ್ಲೂನಾ ಕೇಳಿದರೆ ನಾನು ಹೇಳಲ್ಲ, ಹೇಳಿದರೆ ಜನರು ಪೂರ್ವಾಗ್ರಹ ಪೀಡಿತರಾಗಿ ಚಿತ್ರಮಂದಿರಕ್ಕೆ ಬರುತ್ತಾರೆ. ಇದು ರಿಮೇಕ್ ಚಿತ್ರ ಎಂದು ನಿಮಗೆ ಅನ್ನಿಸದಂತೆ ಚಿತ್ರೀಕರಿಸಿದ್ದೇವೆ. ಅದರ ಝಲಕ್ ಟ್ರೇಲರ್ ನಲ್ಲಿ ನೋಡಬಹುದು ಎಂದಿದ್ದಾರೆ.

  ಶ್ರೀಲಂಕಾದ ಬ್ಯೂಟಿ ಜಾಕ್ವಲಿನ್ ಫರ್ನಾಂಡೀಸ್

  ಶ್ರೀಲಂಕಾದ ಬ್ಯೂಟಿ ಜಾಕ್ವಲಿನ್ ಫರ್ನಾಂಡೀಸ್

  ಶ್ರೀಲಂಕಾದ ಬ್ಯೂಟಿ ಜಾಕ್ವಲಿನ್ ಫರ್ನಾಂಡೀಸ್ ಗೆ ಈ ಚಿತ್ರದ ಮೇಲೆ ಅಪಾರ ನಿರೀಕ್ಷೆಯಿದೆ. ಈ ಹಿಂದಿನ ಚಿತ್ರಗಳು ಸದ್ದು ಮಾಡದ ಕಾರಣ, ಜಾಕ್ವಲಿನ್ ಸಲ್ಲೂ ಜೋಡಿಯಾಗಿ ಯಶಸ್ಸಿನ ಹಾದಿ ಹಿಡಿಯುವ ಭರವಸೆ ಹೊಂದಿದ್ದಾರೆ.

  ಕಿಕ್ ನಲ್ಲಿದೆ ಸಕತ್ ಸಾಹಸ ದೃಶ್ಯಗಳು

  ಕಿಕ್ ನಲ್ಲಿದೆ ಸಕತ್ ಸಾಹಸ ದೃಶ್ಯಗಳು

  ಟ್ರೇಲರ್ ನಲ್ಲಿ ಕಾಣುವಂತೆ ಮೂಲ ಚಿತ್ರಕ್ಕಿಂತ ಐದಾರು ಸೀನ್ ಗಳು ಈ ಚಿತ್ರದಲ್ಲಿ ಸೇರ್ಪಡೆಯಾಗಿವೆ. ಚೇಸಿಂಗ್ ಸೀನ್, ಸೈಕಲ್ ನಲ್ಲಿ ಸಲ್ಲೂ ಪರಾರಿಯಾಗುವ ದೃಶ್ಯ, ಹೆಲಿಕಾಪ್ಟರ್ ಬಳಕೆ, ಬಸ್ ಓಡಿಸುವ ಸೀನ್ ಎಲ್ಲವೂ ರೋಮಾಂಚನಕಾರಿಯಾಗಿ ಬಂದಿದೆ.

  ಅಂದುಕೊಂಡಂತೆ ಇಲ್ಲಿ ನಡೆಯುವುದಿಲ್ಲ

  ಅಂದುಕೊಂಡಂತೆ ಇಲ್ಲಿ ನಡೆಯುವುದಿಲ್ಲ

  ಚಿತ್ರದ ಪ್ರತಿ ಸೀನ್ ಕೂಡಾ ಅಂದುಕೊಂಡಂತೆ ಇಲ್ಲಿ ನಡೆಯುವುದಿಲ್ಲ. ನಾಯಕ ಕಿಕ್ ನ ಹಿಂದೆ ಬಿದ್ದು ಏನೆಲ್ಲ ಮಾಡುತ್ತಾನೆ ಎಂಬುದು ಪ್ರೇಕ್ಷಕರಿಗೆ ಥ್ರಿಲ್ ನೀಡುತ್ತದೆ. ಪ್ರತಿ ಸನ್ನಿವೇಶ ಕಾಮಿಡಿ ಪಂಚ್ ನಿಂದ ಕೂಡಿದೆ.

  ಇದು ಕಳ್ಳ ಪೊಲೀಸ್ ಜೂಟಾಟದ ಕಥೆಯಷ್ಟೇ ಅಲ್ಲ

  ಇದು ಕಳ್ಳ ಪೊಲೀಸ್ ಜೂಟಾಟದ ಕಥೆಯಷ್ಟೇ ಅಲ್ಲ

  ಇದು ಕಳ್ಳ ಪೊಲೀಸ್ ಜೂಟಾಟದ ಕಥೆಯಷ್ಟೇ ಅಲ್ಲ. ಕೊನೆಗೊಂದು ಸಂದೇಶವೂ ಅಡಗಿದೆ. ಜನರಿಗೆ ಥ್ರಿಲ್, ಸಸ್ಪೆನ್ಸ್, ಕಾಮಿಡಿ ಸೇರಿಸಿ ನೀಡುವ ಫುಲ್ ಪ್ಯಾಕೇಜ್.

  ಅಂದ ಹಾಗೆ ,ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಕಳ್ಳನಾಗಿ ಕಾಣಿಸಿಕೊಳ್ಳುವ ಪಾತ್ರದ ಹೆಸರು 'ಡೆವಿಲ್', ಜಾಕ್ವಲಿನ್ ಪರ್ನಾಂಡಿಸ್, ನವಾಜುದ್ದೀನ್ ಸಿದ್ದಿಕಿ, ಪೊಲೀಸ್ ಪಾತ್ರದಲ್ಲಿ ರಣದೀಪ್ ಹೂಡಾ ನಟಿಸುತ್ತಿದ್ದಾರೆ.

  ಇನ್ನೇಕೆ ತಡ ಟ್ರೇಲರ್ ನೋಡಿ ಬಿಡಿ

  ಚಿತ್ರದ ಟ್ರೇಲರ್ ಒಂದು ದಿನ ಕಳೆಯುವುದರೊಳಗೆ ಯೂಟ್ಯೂಬ್ ನಲ್ಲಿ 1,208,469 ಹಿಟ್ಸ್ ಪಡೆದುಕೊಂಡಿದೆ.

  English summary
  Salman Khan 'Kick' Trailer Launched. Salman Khan's character in his upcoming Eid release is called Devil and his producer-director insists he lives up to the name. Salman Khan's kick likely to release by Eid.Here is kick movie latest trailer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X