»   » ಧೀರ ಮಹಿಳೆ ನೀರ್ಜಾ ಪಾತ್ರದಲ್ಲಿ ಸೋನಮ್ ಸೂಪರ್!

ಧೀರ ಮಹಿಳೆ ನೀರ್ಜಾ ಪಾತ್ರದಲ್ಲಿ ಸೋನಮ್ ಸೂಪರ್!

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಮಹಿಳಾ ಪ್ರಧಾನ ಪಾತ್ರಗಳು ಹಿಂದಿ ಚಿತ್ರರಂಗದಲ್ಲಿ ಆಗಾಗ ಯಶಸ್ವಿಯಾಗುವುದುಂಟು. ವಿದ್ಯಾ ಬಾಲನ್, ಕಂಗನಾ ಧೈರ್ಯ ಮಾಡಿ ನಿರ್ವಹಿಸಲು ಮನಸ್ಸು ಮಾಡುತ್ತಿದ್ದ ಪಾತ್ರಗಳು ಮೆಚ್ಚುಗೆ ಗಳಿಸಿವೆ. ಈಗ ಇದ್ದಂತೆ ಒಂದು ಗಟ್ಟಿ ಪಾತ್ರವಿರುವ ಸಿನಿಮಾದಲ್ಲಿ ಸೋನಮ್ ಕಪೂರ್ ನಟಿಸುತ್ತಿದ್ದಾರೆ. ನೂರಾರು ಪ್ರಯಾಣಿಕರನ್ನು ಉಳಿಸಿದ ಧೀರ ಮಹಿಳೆ ನೀರ್ಜಾ ಪಾತ್ರದಲ್ಲಿ ಸೋನಮ್ ಕಾಣಿಸಿಕೊಂಡಿರುವ ಟ್ರೈಲರ್ ಗುರುವಾರ ಬಿಡುಗಡೆಯಾಗಿದೆ.

ರೂಪದರ್ಶಿ ಕಮ್ ಗಗನಸಖಿಯಾಗಿದ್ದ ನೀರ್ಜಾ ಬನೋಟ್ ಅವರ 28 ವರ್ಷಗಳ ಬದುಕಿನ ಚಿತ್ರಣವನ್ನು ಸಿನಿಮಾ ಮೂಲಕ ಹೇಳಲು ಹಿಂದಿ ನಿರ್ದೇಶಕ ರಾಮ್ ಮುಂದಾಗಿದ್ದಾರೆ.

Watch: Sonam Kapoor as Neerja Bhanot Trailer

ಪಾಕಿಸ್ತಾನದ ಕರಾಚಿಯಿಂದ ಹೈಜಾಕ್ ಆಗಿದ್ದ ಪ್ಯಾನ್ ಎಎಂ ಫ್ಲೈಟ್ ನಲ್ಲಿದ್ದ 360 ಮಂದಿಯ ಜೀವ ಉಳಿಸಿದಾಗ ನೀರ್ಜಾಗೆ 23 ವರ್ಷ ವಯಸ್ಸು. ಇದಕ್ಕಾಗಿ ಆಕೆಗೆ ಅಶೋಕ್ ಚಕ್ರ ಪದಕ ನೀಡಿ ಭಾರತ ಸರ್ಕಾರ ಗೌರವಿಸಿತ್ತು. ಪಾಕಿಸ್ತಾನ ಕೂಡಾ ಅತ್ಯುನ್ನತ ನಾಗರಿಕ ಗೌರವ ನೀಡಿ ಶ್ಲಾಘಿಸಿದ್ದರು.

ನೀರ್ಜಾ ಅವರ ಗೌರವಾರ್ಥವಾಗಿ ನೀರ್ಜಾ ಅವರ ಬದುಕಿನ ಚಿತ್ರಣ ನೀಡುವ ವಿಡಿಯೋವೊಂದನ್ನು ಇನ್ಸ್ಟಾಗ್ರಾಮ್ ಮೂಲಕ ಸೋನಮ್ ಅವರು ಹಂಚಿಕೊಂಡಿದ್ದಾರೆ. ಮುಂದಿನ ವರ್ಷ ಫೆಬ್ರವರಿ ವೇಳೆಗೆ ತೆರೆಗೆ ಬರಲಿರುವ ಈ ಚಿತ್ರದ ಟ್ರೈಲರ್ ನಿಮ್ಮ ಮುಂದೆ...

English summary
Trailer of this much-awaited film Neerja starring Sonam Kapoor out today and is all set to hit the theatres along with SRK-Kajol's Dilwale. Sonam posted an Instagram video which takes you through the beautiful flashback of Neerja's journey throughout the years.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada