»   » ರಾಮಾಯಣದ 'ಅಹಲ್ಯೆ' ಕಥೆಗೆ ಥ್ರಿಲ್ಲಿಂಗ್ ಟ್ವಿಸ್ಟ್

ರಾಮಾಯಣದ 'ಅಹಲ್ಯೆ' ಕಥೆಗೆ ಥ್ರಿಲ್ಲಿಂಗ್ ಟ್ವಿಸ್ಟ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಭಾರತದ ಮಹಾಕಾವ್ಯ 'ರಾಮಾಯಣ' ದ ಉಪಕಥೆಯೊಂದನ್ನು ಆಧಾರವಾಗಿಟ್ಟುಕೊಂಡು ನಿರ್ದೇಶಕ ಸುಜೋಯ್ ಘೋಶ್ ಹೆಣೆದಿರುವ ಕಿರುಚಿತ್ರಕ್ಕೆ ಸಿನಿರಸಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಯೂಟ್ಯೂಬ್ ನಲ್ಲಿ 'ಲಾರ್ಜ್ ಶಾರ್ಟ್ ಫಿಲಂ ಕ್ಯಾಂಪೈನ್' ಅಡಿಯಲ್ಲಿ ಬಿಡುಗಡೆಯಾದ 'ಅಹಲ್ಯ' ಳನ್ನು ಸ್ಪರ್ಶಿಸಿ ಎಲ್ಲರೂ ಥ್ರಿಲ್ ಆಗಿದ್ದಾರೆ.

ರಾಧಿಕಾ ಆಪ್ಟೆ ಎಂಬ ಅಪ್ಪಟ ಗ್ಲಾಮರ್ ಚೆಲುವೆ ಇಲ್ಲಿ ಅಹಲ್ಯೆಯಾಗಿ ಮನಮೋಹಕ ಅಭಿನಯ ನೀಡಿದ್ದಾಳೆ. ಮನೆಗೆ ಬಂದ ಇನ್ಸ್ ಪೆಕ್ಟರ್ ಇಂದ್ರಸೇನ್ (ತೋಟಾ ರಾಯ್ ಚೌಧರಿ) ಆಹ್ವಾನಿಸುವ ಕ್ಷಣದಿಂದ ಕೊನೆಗೆ ಬೊಂಬೆ ಹಿಡಿದುಕೊಂಡು ಕೊಡುವ ಲುಕ್ ತನಕ ಎಲ್ಲವೂ ಅನನ್ಯ ಹಾಗೂ ರೋಮಾಂಚಕ.

ರಾಮಾಯಣದಲ್ಲಿ ಬರುವ ಅಹಲ್ಯೆ ಕಥೆ ಎಲ್ಲರಿಗೂ ಗೊತ್ತೇ ಇದೆ. ಗೌತಮ ಮಹರ್ಷಿಯ ಪತ್ನಿ ಅಹಲ್ಯೆ ಮೇಲೆ ಮೋಹಗೊಂಡ ದೇವಲೋಕದ ಇಂದ್ರ, ಮಾರುವೇಷದಲ್ಲಿ ಬಂದು ಆಕೆಯನ್ನು ಮೋಹಿಸಲು ಯತ್ನಿಸುತ್ತಾನೆ.

ಈ ದೃಶ್ಯವನ್ನು ಇತ್ತೀಚೆಗೆ ಕನ್ನಡ ಸಿನಿಪ್ರಿಯರು ಸುದೀಪ್ ಅಭಿನಯದ ರಿಮೇಕ್ ಚಿತ್ರ 'ರನ್ನ'ದಲ್ಲೂ ನೋಡಿರಬಹುದು. ಇದೇ ಕಥೆಯ ಎಳೆಯನ್ನು ವಿಭಿನ್ನವಾಗಿ ತೋರಿಸುವ ಯತ್ನದಲ್ಲಿ ಸುಜಯ್ ಯಶಸ್ವಿಯಾಗಿದ್ದಾರೆ. ಅಲ್ಲಿ ಅಹಲ್ಯೆ ಶಾಪಗ್ರಸ್ತಳಾಗಿದ್ದರೆ, ಇಲ್ಲಿ ಕಥೆ ಬೇರೆಯದ್ದೇ ಮಗ್ಗಲಿಗೆ ತಿರುಗುತ್ತದೆ. ಹಿರಿಯ ನಟ ಸೌಮಿತ್ರಾ ಚಟರ್ಜಿ ಅವರ ಪಾತ್ರ ನಿಮ್ಮನ್ನು ಕೊನೆ ತನಕ ಕರೆದೊಯ್ಯುತ್ತದೆ.

ಸುಮಾರು 15 ನಿಮಿಷಗಳಲ್ಲೇ ಒಂದು ಒಳ್ಳೆ ಥ್ರಿಲ್ಲರ್ ನೋಡಿದ ಅನುಭವ ನಿಮಗೆ ನೀಡುವಲ್ಲಿ ಸುಜೋಯ್ ಯಶಸ್ವಿಯಾಗಿದ್ದಾರೆ.

ನಿರ್ದೇಶಕ ಸುಜೋಯ್ ಘೋಶ್

ನಿರ್ದೇಶಕ ಸುಜೋಯ್ ಘೋಶ್ ಈ ಮುಂಚೆ ಕಹಾನಿ, ಅಲಾದೀನ್, ಝಾಂಕರ್ ಬೀಟ್ಸ್ ಚಿತ್ರಗಳ ನಿರ್ದೇಶನ ಮಾದಿದ್ದರು. ಬ್ಯಾಂಗ್ ಬ್ಯಾಂಗ್ ಚಿತ್ರಕ್ಕೆ ಕಥೆ ಒದಗಿಸಿದ್ದರು.

ಮುಖ್ಯ ಪಾತ್ರಧಾರಿಗಳ ಅಭಿನಯ

ಪೊಲೀಸ್ ಇನ್ಸ್ ಪೆಕ್ಟರ್ ರಾಯ್ ಚೌಧರಿ ಹಾಗೂ ಅಹಲ್ಯೆ ಪಾತ್ರಧಾರಿ ರಾಧಿಕಾ ಆಪ್ಟೆ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಸಾಮಾಜಿಕ ಜಾಲ ತಾಣಗಳಲ್ಲಿ ಬಹುಚರ್ಚಿತ

ಸಾಮಾಜಿಕ ಜಾಲ ತಾಣಗಳಲ್ಲಿ ಬಹುಚರ್ಚಿತ ಕಿರುಚಿತ್ರ ಇದಾಗಿದೆ. ಯೂಟ್ಯೂಬಿನಲ್ಲಿ ಬಿಡುಗಡೆಯಾಗಿ ಎರಡು ದಿನಗಳ ನಂತರ ಈ ಸಮಯಕ್ಕೆ 4,25,811 ವೀಕ್ಷಣೆ ಪಡೆದುಕೊಂಡಿದೆ. ಸೌಮಿತ್ರಾ ಚಟರ್ಜಿ ಅವರ ಪಾತ್ರ ನಿಮ್ಮನ್ನು ಕೊನೆ ತನಕ ಕರೆದೊಯ್ಯುತ್ತದೆ.

ಅಹಲ್ಯಾ ವಿಡಿಯೋ ನೋಡಿ

ಅಹಲ್ಯಾ ವಿಡಿಯೋ ನೋಡಿ, ಬೆಂಗಾಲಿಯಲ್ಲಿರುವ ಈ ಚಿತ್ರಕ್ಕೆ ಸಬ್ ಟೈಟಲ್ ನೀಡಲಾಗಿದೆ. ಬೆಂಗಾಲಿ ಅಲ್ಲದಿದ್ದರೂ ರಾಧಿಕಾ ಆಪ್ಟೆ ಉಚ್ಚಾರಣೆಗೆ ಜನರ ಮೆಚ್ಚುಗೆ ಸಿಕ್ಕಿದೆ.

English summary
Watch Epic Thriller 'Ahalya' directed by Sujoy Ghosh and starring the legendary Soumitra Chatterjee, Tota Roy Chowdhury and Radhika Apte, the 14 minutes short spins a web around seduction and deceit. The story is loosely based on a short story in Ramayana-which had Ahalya being cursed by her husband Gautam for cheating on him with Lord Indra, who came to her in disguise.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada