For Quick Alerts
  ALLOW NOTIFICATIONS  
  For Daily Alerts

  ಡ್ಯಾನ್ಸ್ ಮಾಡೋ ಮಾಜಿ ಕ್ರಿಕೆಟರ್ ಬ್ರೆಟ್ ಲೀ ನೋಡಿ

  By ಜೇಮ್ಸ್ ಮಾರ್ಟಿನ್
  |

  ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಎಂದರೆ ಭಾರತದ ಕ್ರಿಕೆಟ್ ಅಭಿಮಾನಿಗಳಿಗೂ ಅಚ್ಚುಮೆಚ್ಚು. ಮೈದಾನ ಹೊರಗೂ ಒಳಗೂ ಲೀ ತಮ್ಮ ಪ್ರತಿಭೆ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಕ್ರಿಕೆಟ್ ಕೋಚಿಂಗ್ ಬಿಟ್ಟು ಬಣ್ಣದ ಲೋಕದತ್ತ ಮುಖ ಮಾಡಿದ್ದಾರೆ.

  ಇಂಗ್ಲೆಂಡ್ ಕೌಂಟಿ, ಆಸ್ಟ್ರೇಲಿಯಾದ ಕ್ಲಬ್ ಗಳಿಗೆ ಕೋಚಿಂಗ್ ಮಾಡುವ ಆಫರ್ ಬಂದಿದ್ದರೂ ಬ್ರೆಟ್ ಲೀ ಮನಸ್ಸು ನಟನೆಯತ್ತ ಹೊರಳಿದೆಯಂತೆ. 'ರಾಕ್ ಸ್ಟಾರ್' ಲೀ ಈಗ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದು, ಅವರ ಚೊಚ್ಚಲ ಚಿತ್ರದ ಟ್ರೈಲರ್ ಸದ್ದು ಮಾಡುತ್ತಿದೆ.

  "ಅನ್‌ ಇಂಡಿಯನ್‌' ಎಂಬ ಇಂಗ್ಲೀಷ್ ಕಮ್ ಹಿಂದಿ ಚಲನಚಿತ್ರದಲ್ಲಿ ಬ್ರೆಟ್ ಲೀ ಸಾಫ್ಟ್ ಪಾತ್ರ ಮಾಡುತ್ತಿದ್ದಾರೆ. ಹಾಡು, ಕುಣಿತ, ರೋಮ್ಯಾನ್ಸ್ ಎಲ್ಲವನ್ನು ಒಳಗೊಂಡಿರುವ ಈ ಚಿತ್ರ ಅಕ್ಟೋಬರ್ 15ಕ್ಕೆ ತೆಗೆ ಬರುವ ಸಾಧ್ಯತೆಯಿದೆ. ಈ ಹಿಂದೆ ಆಶಾ ಭೋಂಸ್ಲೆ ಜೊತೆ ರಾಕ್ ಆಲ್ಬಂ ಹೊರ ತಂದಿದ್ದ ಬ್ರೆಟ್ ಲೀ ಈಗ ಪೂರ್ಣ ಪ್ರಮಾಣದಲ್ಲಿ ನಟನೆಗೆ ಇಳಿದಿದ್ದಾರೆ.

  ಈ ಚಿತ್ರದಲ್ಲಿ ಮೀರಾ ಎಂಬ ಪಾತ್ರ ಮಾಡಿರುವ ತನೀಷ್ತಾ ಚಟರ್ಜಿಗೆ 'ಸಿಂಗಲ್' ಆಗಿರುವ ಲೀ ಮನ ಸೋಲುತ್ತದೆ. ಇಂಡಿಯನ್ ಫ್ಯಾಮಿಲಿ ಒಬ್ಬ ಭಾರತೀಯೇತರನನ್ನು ಹೇಗೆ ಸಹಿಸಿಕೊಳ್ಳುತ್ತದೆ. ಕುಟುಂಬದ ಮನಸ್ಸನ್ನು ಲೀ ಹೇಗೆ ಗೆಲ್ಲುತ್ತ್ತಾರೆ ಎಂಬುದೇ ಕಥಾ ವಸ್ತು. ಜೊತೆಗೆ ಸಿಂಗಲ್ ಪೇರೆಂಟ್ ವಿಷಯವೂ ಚಿತ್ರದಲ್ಲಿದೆ.

  ಹಾಲಿವುಡ್‌ನ‌ ಜಾನ್‌ ಹಾರ್ವರ್ಡ್‌, ಟೆರಿಲ್‌ ಮೊರ, ಸರ್ಹಾ ರಾಬರ್ಟ್ಸ್, ಬಾಲಿವುಡ್‌ನ‌ ಸುಪ್ರಿಯಾ ಪಾಥಕ್‌ ಕಪೂರ್‌, ಆಕಾಶ್‌ ಕುರುನಾ ಮತ್ತು ಪಲ್ಲವಿ ಶಾರದಾ ಮುಂತಾದವರು ಮುಖ್ಯ ಭೂಮಿಕೆಯಲ್ಲಿದ್ದಾರೆ. 2013ರಲ್ಲಿ ಸ್ಥಾಪನೆಯಾದ ಆಸ್ಟ್ರೇಲಿಯ ಭಾರತ ಸಿನೆಮಾ ಒಕ್ಕೂಟ (ಎಐಎಫ್ಎಫ್) ದ ನಿರ್ಮಾಣದಲ್ಲಿ ಈ ಹಾಸ್ಯಮಯ ಚಿತ್ರ ತೆರೆಗೆ ಬರುತ್ತಿದೆ. ಸದ್ಯಕ್ಕೆ ಚಿತ್ರದ ಟ್ರೈಲರ್ ನೋಡಿ ಆನಂದಿಸಿ....

  English summary
  Watch the trailer of Brett Lee’s first film. The film is the first to be made from the Australia India Film Fund (AIFF), which was especially constituted in 2013 to make Australian movies with Indian themes for audience worldwide.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X