ಇದಕ್ಕಿದ್ದಂತೆ ಭಾವುಕರಾಗಿ ಕಣ್ಣೀರಿಟ್ಟ ನಟಿ ಐಶ್ವರ್ಯ ರೈ: ಕಾರಣ ಏನು.?
ಬಾಲಿವುಡ್ ನಟಿ, ಬಚ್ಚನ್ ಬಹುರಾಣಿ, ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಬಚ್ಚನ್ ಖಾಸಗಿ ಸಮಾರಂಭವೊಂದರಲ್ಲಿ ಭಾವುಕರಾಗಿ ಕಣ್ಣೀರು ಹಾಕಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇತ್ತೀಚೆಗಷ್ಟೇ ಮುಂಬೈನಲ್ಲಿ ICM WE ಎಕ್ಸಿಬಿಷನ್-2018 ನಡೆಯಿತು. ಬಾಲಿವುಡ್ ನಟಿಯರಾದ ಶಬಾನಾ ಆಜ್ಮಿ ಸೇರಿದಂತೆ ಮಹಿಳಾ ಸಾಧಕರೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೇ ಕಾರ್ಯಕ್ರಮದಲ್ಲಿ ರಾಷ್ಟ್ರ ಗೀತೆ ಮೊಳಗಿಸಲಾಯಿತು. ರಾಷ್ಟ್ರ ಗೀತೆಯನ್ನ ಕೇಳುತ್ತಲೇ ನಟಿ ಐಶ್ವರ್ಯ ರೈ ಭಾವುಕರಾದರು. ಐಶ್ವರ್ಯ ರೈ ಕಣ್ಣಂಚಿನಿಂದ ಕಂಬನಿ ಜಿನುಗಿತು. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಐಶ್ವರ್ಯ ರೈ ಅಭಿನಯದ 'ಫಾನ್ನೇ ಖಾನ್' ಚಿತ್ರ ಇತ್ತೀಚೆಗಷ್ಟೇ ಬಿಡುಗಡೆ ಆಗಿತ್ತು. ಆದ್ರೆ, ನಿರೀಕ್ಷಿಸಿದ ಮಟ್ಟಕ್ಕೆ ಈ ಚಿತ್ರ ಯಶಸ್ವಿ ಆಗಲಿಲ್ಲ. ಪತಿ ಅಭಿಶೇಕ್ ಬಚ್ಚನ್ ಜೊತೆಗೆ ಐಶ್ವರ್ಯ ರೈ ಒಂದು ಸಿನಿಮಾ ಮಾಡ್ತಾರೆ ಎಂಬ ಸುದ್ದಿ ಇದೆ. ಅದರ ಬಗ್ಗೆ ಅಧಿಕೃತ ಘೋಷಣೆ ಇನ್ನೂ ಆಗಿಲ್ಲ.
ಈ ನಡುವೆ ನಟಿ ಐಶ್ವರ್ಯ ರೈ ಬಚ್ಚನ್ ಗೆ ಮೆರಿಲ್ ಸ್ಟ್ರೀಪ್ ಅವಾರ್ಡ್ ಕೂಡ ಲಭಿಸುತ್ತಿದೆ. ಕಿರುತೆರೆ ಹಾಗೂ ಚಿತ್ರರಂಗದಲ್ಲಿ ಐಶ್ವರ್ಯ ರೈ ಮಾಡಿರುವ ಸಾಧನೆಯನ್ನ ಗುರುತಿಸಿ ಆಕೆಗೆ ಮೆರಿಲ್ ಸ್ಟ್ರೀಪ್ ಪ್ರಶಸ್ತಿ ನೀಡಲಾಗುತ್ತಿದೆ.


Click it and Unblock the Notifications











