For Quick Alerts
  ALLOW NOTIFICATIONS  
  For Daily Alerts

  ಏನು... ನಟಿ ಜಾಹ್ನವಿ ಕಪೂರ್ ಗೆ ಸರಿಯಾಗಿ ಹಿಂದಿಯಲ್ಲಿ ಮಾತನಾಡಲು ಬರ್ತಿರ್ಲಿಲ್ವಾ.?

  By Harshitha
  |

  ನಟಿ ಶ್ರೀದೇವಿ ಹಿರಿಯ ಪುತ್ರಿ ಜಾಹ್ನವಿ ಬಾಲಿವುಡ್ ಗೆ ಪದಾರ್ಪಣೆ ಮಾಡಿದ್ದಾಯ್ತು. ಮರಾಠಿಯ ಸೂಪರ್ ಹಿಟ್ 'ಸೈರಾಟ್' ಚಿತ್ರದ ರೀಮೇಕ್ 'ಧಡಕ್' ಸಿನಿಮಾದ ಮೂಲಕ ಜಾಹ್ನವಿ ಕಪೂರ್ ಬಣ್ಣದ ಲೋಕಕ್ಕೆ ಅಡಿಯಿಟ್ಟರು.

  'ಧಡಕ್' ಸಿನಿಮಾದಲ್ಲಿ ಜಾಹ್ನವಿ ಕಪೂರ್ ಅಭಿನಯ ಚೆನ್ನಾಗಿದೆ. ರಾಜಸ್ಥಾನಿ ಹಾಗೂ ಹಿಂದಿ ಡೈಲಾಗ್ ಗಳನ್ನು ಜಾಹ್ನವಿ ಕಪೂರ್ ನೀರು ಕುಡಿದಷ್ಟೇ ಸಲೀಸಾಗಿ ಹೇಳಿದ್ದಾರೆ. ಆದ್ರೆ, ಕೆಲವೇ ಕೆಲವು ವರ್ಷಗಳ ಹಿಂದಿನ ಫ್ಲ್ಯಾಶ್ ಬ್ಯಾಕ್ ಗೆ ಹೋದರೆ, ಜಾಹ್ನವಿ ಕಪೂರ್ ಗೆ ಹಿಂದಿಯಲ್ಲಿ ಸರಿಯಾಗಿ ಮಾತನಾಡಲು ಬರುತ್ತಲೇ ಇರಲಿಲ್ಲ ಅನ್ನೋದು ನಿಮಗೆ ಗೊತ್ತಾ.?

  ಹೌದು, ಜಾಹ್ನವಿ ಕಪೂರ್ ಆಗಿನ್ನೂ ಓದುತ್ತಿದ್ದ ಸಮಯ. ಆಗ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ ಜಾಹ್ನವಿ ಹಿಂದಿಯಲ್ಲಿ ಮಾತನಾಡುವಾಗ ತಡವರಿಸಿದ್ದರು.

  ಇದೀಗ ಅದೇ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಂದು ಹಿಂದಿಯಲ್ಲಿ ಮಾತನಾಡಲು ಒದ್ದಾಡುತ್ತಿದ್ದ ಜಾಹ್ನವಿ ಇದೀಗ ಎಷ್ಟು ಇಂಪ್ರೂವ್ ಆಗಿದ್ದಾರೆ ಅನ್ನೋದಕ್ಕೆ 'ಧಡಕ್' ಸಿನಿಮಾ ಸಾಕ್ಷಿ. ಮುಂದೆ ಓದಿರಿ....

  ಅಂದು ಪತ್ರಿಕಾಗೋಷ್ಟಿಯಲ್ಲಿ ಆಗಿದ್ದೇನು.?

  ಅಂದು ಪತ್ರಿಕಾಗೋಷ್ಟಿಯಲ್ಲಿ ಆಗಿದ್ದೇನು.?

  ಅದು ಪೀಪಲ್ ಮ್ಯಾಗಝೀನ್ ಕವರ್ ಲಾಂಚ್ ಕಾರ್ಯಕ್ರಮ. ಇದೇ ವೇಳೆ ನಡೆದ ಪತ್ರಿಕಾಗೋಷ್ಟಿಯಲ್ಲಿ ''ಬಾಲಿವುಡ್ ಗೆ ಪದಾರ್ಪಣೆ ಮಾಡುವ ಇಚ್ಛೆ ಇದ್ಯಾ.?'' ಎಂದು ಪತ್ರಕರ್ತರೊಬ್ಬರು ಜಾಹ್ನವಿಗೆ ಪ್ರಶ್ನಿಸಿದ್ದರು. ಆಗ ಹಿಂದಿಯಲ್ಲಿ ಉತ್ತರ ಕೊಡಲು ರಾಗ ಎಳೆದು ಒದ್ದಾಡಿದ್ದರು ಜಾಹ್ನವಿ ಕಪೂರ್.

  ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅವಿದ್ಯಾವಂತೆಯಂತೆ.? ಹೌದೇನು.?ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅವಿದ್ಯಾವಂತೆಯಂತೆ.? ಹೌದೇನು.?

  ಮಧ್ಯದಲ್ಲಿ ಮಾತಿಗಿಳಿದ ಶ್ರೀದೇವಿ...

  ಉತ್ತರ ಕೊಡಲು ಜಾಹ್ನವಿ ತಡವರಿಸುತ್ತಿದ್ದಾಗ, ಪಕ್ಕದಲ್ಲಿಯೇ ಕೂತಿದ್ದ ಶ್ರೀದೇವಿ ಮೈಕ್ ತೆಗೆದುಕೊಂಡು, ''ದಯವಿಟ್ಟು ಆಕೆಯನ್ನ ಹಿಂದಿಯಲ್ಲಿ ಮಾತನಾಡಿಸಬೇಡಿ. ಇಲ್ಲಾಂದ್ರೆ, ನಾನವಳ ಕಾಲೆಳೆಯುವೆ'' ಅಂತ್ಹೇಳೆ ನಗೆ ಚಟಾಕಿ ಹಾರಿಸಿದ್ದರು ನಟಿ ಶ್ರೀದೇವಿ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಜಾಹ್ನವಿ ಕಪೂರ್ ನ ಜನ ಆಡಿಕೊಳ್ಳುತ್ತಿದ್ದಾರೆ.

  ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಬಗ್ಗೆ ನಿಮಗೆಷ್ಟು ಗೊತ್ತು.? ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಬಗ್ಗೆ ನಿಮಗೆಷ್ಟು ಗೊತ್ತು.?

  ಈಗ ಸರಾಗವಾಗಿ ಮಾತನಾಡಲು ಬರುತ್ತೆ.!

  ಈಗ ಸರಾಗವಾಗಿ ಮಾತನಾಡಲು ಬರುತ್ತೆ.!

  ಇದೀಗ ಬಾಲಿವುಡ್ ಗೆ ಎಂಟ್ರಿಕೊಟ್ಟಿರುವ ಜಾಹ್ನವಿ ಕಪೂರ್ ಗೆ ಸರಾಗವಾಗಿ ಹಿಂದಿಯಲ್ಲಿ ಮಾತನಾಡಲು ಬರುತ್ತದೆ. ಭಾಷೆ, ಫಿಟ್ನೆಸ್ ಹಾಗೂ ನಟನೆ.. ಈ ಎಲ್ಲವನ್ನ ಕಲಿತು 'ಧಡಕ್' ಚಿತ್ರಕ್ಕೆ ಎಂಟ್ರಿಕೊಟ್ಟರು ಜಾಹ್ನವಿ ಕಪೂರ್.

  ಜಾಹ್ನವಿ ಎರಡನೇ ಚಿತ್ರ ಯಾವುದು.?

  ಜಾಹ್ನವಿ ಎರಡನೇ ಚಿತ್ರ ಯಾವುದು.?

  'ಧಡಕ್' ಬಳಿಕ ಜಾಹ್ನವಿ ಕಪೂರ್ ಗೆ ಅವಕಾಶಗಳ ಮಹಾಪೂರವೇ ಹರಿದು ಬರುತ್ತಿದೆ. ಆದ್ರೆ, ಯಾವುದಕ್ಕೂ ಅಧಿಕೃತವಾಗಿ ಇನ್ನೂ ಜಾಹ್ನವಿ ಕಪೂರ್ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ.

  English summary
  Watch video: When Sridevi told media that her daughter Janhvi Kapoor can't speak Hindi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X