Just In
Don't Miss!
- Automobiles
ಟಾಟಾ ಆಲ್ಟ್ರೊಜ್ ಐಟರ್ಬೋ ಕಾರಿನ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್
- Sports
ಐಎಸ್ಎಲ್: ಪ್ಲೇ ಆಫ್ ನಿರೀಕ್ಷೆಯಲ್ಲಿ ಜೆಮ್ಷೆಡ್ಪುರ, ನಾರ್ಥ್ ಈಸ್ಟ್
- News
ಭಾರತದಲ್ಲಿ ಮೊದಲ ದಿನ ಕೊರೊನಾ ಲಸಿಕೆ ಪಡೆದವರೆಷ್ಟು ಮಂದಿ?
- Lifestyle
ಆರೋಗ್ಯಕರ ಋತುಚಕ್ರಕ್ಕೆ ಇಲ್ಲಿವೆ ಕೆಲವೊಂದು ಯೋಗಾಸನಗಳು
- Finance
ಬಜೆಟ್ 2021: MSME ವಲಯಕ್ಕೆ ಏನು ಸಿಗಬಹುದು?
- Education
NIA Recruitment 2021: 15 ಡೆಪ್ಯುರಿಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಾಯ್‌ಫ್ರೆಂಡ್ ಜೊತೆ ಮದುವೆ ಯಾವಾಗ? ಕೃತಿ ಕರಬಂಧ ಕೊಟ್ಟರು ಉತ್ತರ
ಗೂಗ್ಲಿ ಸೇರಿ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಕೃತಿ ಕರಬಂಧ, ನಟ ಪುಲ್ಕಿತ್ ಸಮರ್ತ್ ಜೊತೆ ಕೈ-ಕೈ ಹಿಡಿದು ಸುತ್ತುತ್ತಿರುವುದು ಗುಟ್ಟಿನ ವಿಷಯವಲ್ಲ.
ತಮ್ಮ ಪ್ರೀತಿಯ ಬಗ್ಗೆ ಸ್ವತಃ ಕೃತಿ ಕರಬಂಧ-ಪುಲ್ಕಿತ್ ಸಮರ್ತ್ ಹಲವು ಬಾರಿ ಬಹಿರಂಗವಾಗಿ ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಜೊತೆಗಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
'ಚಿರು' ಜತೆ ಮೊದಲ ಚಿತ್ರದಲ್ಲಿ ನಟಿಸಿದ್ದ ಕೃತಿ ಕರಬಂಧ ಭಾವುಕ ಮಾತು
ಕೃತಿ ಹಾಗೂ ಪುಲ್ಕಿತ್ ಹೋದಲ್ಲೆಲ್ಲಾ ಮದುವೆ ವಿಷಯವನ್ನು ಮಾಧ್ಯಮಗಳು ಕೇಳುತ್ತಲೇ ಇರುತ್ತವೆ. 'ಸದ್ಯಕ್ಕೆ ಮದುವೆ ಇಲ್ಲ' ಎಂದು ಪುಲ್ಕಿತ್ ಕೆಲವು ದಿನಗಳ ಹಿಂದಷ್ಟೆ ಹೇಳಿದ್ದರು. ಈಗ ಕೃತಿ ಕರಬಂಧ, ಮದುವೆ ಬಗೆಗಿನ ಪ್ರಶ್ನೆಗೆ ಉತ್ತರಿಸಿದ್ದಾರೆ.

ಮದುವೆಯ ಬಗ್ಗೆ ನಾವು ಚರ್ಚೆಯನ್ನೇ ಮಾಡಿಲ್ಲ: ಕೃತಿ
ನಾನು ಹಾಗೂ ಪುಲ್ಕಿತ್ ಸಮರ್ತ್ ಮದುವೆ ಬಗ್ಗೆ ಈ ವರೆಗೆ ಮಾತನಾಡಿಯೇ ಇಲ್ಲ ಎಂದಿದ್ದಾರೆ ಕೃತಿ ಕರಬಂಧ. ಅಷ್ಟೇ ಅಲ್ಲ, ಮದುವೆ ಇನ್ನೂ ದೂರವಿದೆ ಎಂದಿದ್ದಾರೆ. ಆ ಮೂಲಕ ಹತ್ತಿರದಲ್ಲಿ ಈ ಜೋಡಿ ಹಸೆಮಣೆ ಏರುವುದಿಲ್ಲ ಎನ್ನುವುದು ಖಾತ್ರಿಯಾಗಿದೆ.

ಪ್ರವಾಸಕ್ಕೆ ತೆರಳಿದ್ದ ಯುವ ಜೋಡಿ
ಕೆಲವು ದಿನಗಳ ಹಿಂದಷ್ಟೆ ಈ ಜೋಡಿ ಪ್ರವಾಸಕ್ಕೆ ತೆರಳಿತ್ತು, ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಕೃತಿ ಕರಬಂಧ, 'ಈ ಪ್ರವಾಸ, ನಾವಿಬ್ಬರೂ ಪರಸ್ಪರರನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಹಕರಿಸಿತು. ಪುಲ್ಕಿತ್ ಅಂಥಹಾ ಹುಡುಗನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೇನೆ. ನಾನು ಸದಾ ನಗುತ್ತಿರುವಂತೆ ಆತ ನೋಡಿಕೊಳ್ಳುತ್ತಾನೆ' ಎಂದಿದ್ದಾರೆ ಕೃತಿ.
'ಗೂಗ್ಲಿ' ಸುಂದರಿಗೆ ಪ್ರೀತಿಯ ಶುಭಾಶಯ ತಿಳಿಸಿದ ನಟಿ ಸಮಂತಾ

ಪುಲ್ಕಿತ್ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ನೀಡಲಿದ್ದಾರೆ ಕೃತಿ
ಹುಟ್ಟುಹಬ್ಬಕ್ಕೆ ಒಳ್ಳೆಯ ಸರ್ಪ್ರೈಸ್ ಅನ್ನು ಪುಲ್ಕಿತ್ ಕೊಟ್ಟಿದ್ದಾರಂತೆ. ಹಾಗಾಗಿ ಡಿಸೆಂಬರ್ ತಿಂಗಳಿನಲ್ಲಿರುವ ಪುಲ್ಕಿತ್ ಹುಟ್ಟುಹಬ್ಬಕ್ಕೆ ಯಾವ ಸರ್ಪ್ರೈಸ್ ಕೊಡುವುದೆಂದು ಈಗಿನಿಂದಲೇ ಪ್ಲ್ಯಾನ್ ಮಾಡುತ್ತಿದ್ದಾರಂತೆ ಕೃತಿ.

ವೃತ್ತಿಯ ಬಗ್ಗೆ ಹೆಚ್ಚು ಗಮನ ಕೊಡುತ್ತೇವೆ: ಕೃತಿ
'ಪ್ರೀತಿ ಶುರುವಾಗಿ ಒಂದೂವರೆ ವರ್ಷವಾಗಿದೆಯಷ್ಟೆ. ಮದುವೆಗೆ ಈಗಲೇ ಏನೂ ದಾವಂತ ಇಲ್ಲ. ಇಬ್ಬರೂ ನಮ್ಮ ಕರಿಯರ್‌ಗಳನ್ನು ಗೌರವಿಸುತ್ತೇವೆ. ಹಾಗಾಗಿ ಸದ್ಯಕ್ಕೆ ವೃತ್ತಿಯ ಬಗ್ಗೆ ಹೆಚ್ಚು ಗಮನ ಕೊಡಲು ನಿರ್ಧರಿಸಿದ್ದೇವೆ' ಎಂದಿದ್ದಾರೆ ಕೃತಿ.
ಗೂಗ್ಲಿ ಚೆಲುವೆ ಕೃತಿಯ ಬಾಯ್‌ಫ್ರೆಂಡ್ ಮದುವೆ ಬಗ್ಗೆ ಹೀಗೆ ಹೇಳಿದ್ದಾರೆ