»   » ವೇಣುಗೋಪಾಲ್ ರೆಡ್ಡಿ ಯಾರು ಅನ್ನೋದೇ ಶ್ರೀದೇವಿ ಕುಟುಂಬಕ್ಕೆ ಗೊತ್ತಿಲ್ಲ!

ವೇಣುಗೋಪಾಲ್ ರೆಡ್ಡಿ ಯಾರು ಅನ್ನೋದೇ ಶ್ರೀದೇವಿ ಕುಟುಂಬಕ್ಕೆ ಗೊತ್ತಿಲ್ಲ!

Posted By:
Subscribe to Filmibeat Kannada

''ಶ್ರೀದೇವಿ ತಾಯಿಗೆ ಬೋನಿ ಕಪೂರ್ ಕಂಡ್ರೆ ಆಗುತ್ತಿರಲಿಲ್ಲ. ಬೋನಿಯನ್ನ ಶ್ರೀದೇವಿ ಮದುವೆ ಆಗುವುದು ಕೂಡ ಆಕೆಯ ತಾಯಿಗೆ ಇಷ್ಟ ಇರಲಿಲ್ಲ. ಎಷ್ಟೋ ಬಾರಿ, ಬೋನಿಯನ್ನ ಶ್ರೀದೇವಿ ತಾಯಿ ಕೆಟ್ಟದಾಗಿ ನಡೆಸಿಕೊಂಡಿದ್ದರು. ಕೆಲ ಸಿನಿಮಾಗಳಿಗೆ ಬಂಡವಾಳ ಹಾಕಿ, ಬೋನಿ ಕಪೂರ್ ಕೈ ಸುಟ್ಟುಕೊಂಡಿದ್ದರು. ಬೋನಿಗೆ ಲಕ್ಷಾಂತರ ರೂಪಾಯಿ ಲಾಸ್ ಆಗಿತ್ತು. ಬೋನಿ ಕಪೂರ್ ಮಾಡಿದ್ದ ಸಾಲ ತೀರಿಸಲು, ತನ್ನ ಹೆಸರಿನಲ್ಲಿದ್ದ ಆಸ್ತಿಯನ್ನ ಶ್ರೀದೇವಿ ಮಾರಾಟ ಮಾಡಿದ್ದರು. ನೋವಿನಲ್ಲಿಯೇ ಬೋನಿ ಜೊತೆಗೆ ಶ್ರೀದೇವಿ ಜೀವನ ನಡೆಸಿದ್ದರು. ನೋವಿನಲ್ಲಿಯೇ ಶ್ರೀದೇವಿ ಸಾವನ್ನಪ್ಪಿದ್ದಾರೆ. ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ರಿಂದಾಗಿ ಶ್ರೀದೇವಿ ಮತ್ತೆ ಬಣ್ಣ ಹಚ್ಚಿದರು''

- ಹೀಗಂತ ನಟಿ ಶ್ರೀದೇವಿ ನಿಧನರಾದ ನಂತರ, ಶ್ರೀದೇವಿ ಸಂಬಂಧಿ ಅಂತ ಹೇಳಿಕೊಂಡು ವೇಣುಗೋಪಾಲ್ ರೆಡ್ಡಿ ಎಂಬುವರು iDream News ಗೆ ವಿಡಿಯೋ ಸಂದರ್ಶನ ನೀಡಿದ್ದರು.

ಆದ್ರೀಗ, ''ಶ್ರೀದೇವಿಯ ಅಂಕಲ್ ಎಂದು ಹೇಳಿಕೊಂಡಿರುವ ವೇಣುಗೋಪಾಲ್ ರೆಡ್ಡಿ ಯಾರು ಎಂಬುದೇ ನಮಗೆ ಗೊತ್ತಿಲ್ಲ. ಆ ಹೆಸರನ್ನ ನಾವು ಕೇಳಿಯೇ ಇಲ್ಲ'' ಎಂದು ಶ್ರೀದೇವಿ ಸಹೋದರಿಯ ಪತಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಪತಿ ಬೋನಿ ಕಪೂರ್ ಗಾಗಿ ತನ್ನ ಆಸ್ತಿ ಮಾರಾಟ ಮಾಡಿದ್ದ ಶ್ರೀದೇವಿ!

We don't know who is Venugopal Reddy says Sridevi's family

''ವೇಣುಗೋಪಾಲ್ ರೆಡ್ಡಿ ನೀಡಿರುವ ಸಂದರ್ಶನದಲ್ಲಿ ಯಾವುದೇ ಸತ್ಯ ಇಲ್ಲ. ನಮ್ಮ ಇಡೀ ಕುಟುಂಬ ಬೋನಿ ಕಪೂರ್ ಸಪೋರ್ಟ್ ಗೆ ನಿಂತಿದೆ. ನನ್ನ ಪತ್ನಿ ಶ್ರೀಲತಾ ಮೌನ ವಹಿಸಿರುವ ಬಗ್ಗೆ ಕೂಡ ಹಲವು ಪತ್ರಿಕೆಗಳಲ್ಲಿ ವರದಿ ಆಗಿತ್ತು. ಆದ್ರೆ, ಶ್ರೀದೇವಿ ಅಗಲಿಕೆಯ ಆಘಾತದಿಂದ ಕುಟುಂಬ ಇನ್ನೂ ಹೊರಗೆ ಬಂದಿಲ್ಲ'' ಎಂದು ಶ್ರೀದೇವಿ ಸಹೋದರಿ ಶ್ರೀಲತಾ ಪತಿ ಸಂಜಯ್ ರಾಮಸ್ವಾಮಿ ಹೇಳಿದ್ದಾರೆ.

ಸಂಬಂಧಿ ಮೋಹಿತ್ ಮಾರ್ವಾ ವಿವಾಹದಲ್ಲಿ ಭಾಗವಹಿಸಲು ಕುಟುಂಬದ ಸಮೇತ ಶ್ರೀದೇವಿ ದುಬೈಗೆ ತೆರಳಿದ್ದರು. ಮದುವೆ ಮುಗಿದ್ಮೇಲೆ, ದುಬೈನಲ್ಲೇ ಉಳಿದುಕೊಂಡ ಶ್ರೀದೇವಿ, ಅಲ್ಲಿನ ಹೋಟೆಲ್ ಬಾತ್ ಟಬ್ ನಲ್ಲಿ ಆಕಸ್ಮಿಕವಾಗಿ ಮುಳುಗಿ ಕಳೆದ ತಿಂಗಳು ಸಾವನ್ನಪ್ಪಿದರು.

English summary
We don't know who is Venugopal Reddy says Sridevi's family.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada