For Quick Alerts
  ALLOW NOTIFICATIONS  
  For Daily Alerts

  ಸಂಕಷ್ಟದಲ್ಲಿ ಶಿಲ್ಪಾ ಶೆಟ್ಟಿ: ಲಕ್ನೋ ಪೊಲೀಸರಿಂದ ಸಮನ್ಸ್

  |

  ಪತಿ ರಾಜ್ ಕುಂದ್ರ ಬಂಧನದ ಸಂಕಟದಲ್ಲಿರುವ ನಟಿ ಶಿಲ್ಪಾಗೆ ಮತ್ತೊಂದು ಕಂಟಕ ಎಂದುರಾಗಿದೆ. ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಹೆಸರು ಕೇಳಿಬಂದಿದ್ದು, ಲಕ್ನೋ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ಈ ಬಗ್ಗೆ ಲಕ್ನೋ ಪೊಲೀಸ್ ಆಯುಕ್ತ ಡಿಕೆ ಠಾಕೂರ್ ಬಹಿರಂಗ ಪಡಿಸಿದ್ದಾರೆ. ಲಕ್ನೋ ಮೂಲದ ವ್ಯಕ್ತಿಯೊಬ್ಬ ಶಿಲ್ಪಾ ಶೆಟ್ಟಿ ಮತ್ತು ತಾಯಿ ಸುನಂದಾ ಶೆಟ್ಟಿ ವಿರುದ್ಧ ಕೋಟ್ಯಂತರ ರೂಪಾಯಿ ವಂಚನೆ ಆರೋಪ ದೂರು ದಾಖಸಿದ್ದರು.

  ಶಿಲ್ಪಾ ಶೆಟ್ಟಿ ಒಡೆತನದ್ದು ಎಂದು ಹೇಳಲಾಗುತ್ತಿರುವ ವೆಲ್ನೆಸ್ ಸೆಂಟರ್ ಹೆಸರಿನಲ್ಲಿ ವಂಚನೆ ಪ್ರಕರಣ ದಡಿ ಶಿಲ್ಪಾ ಶೆಟ್ಟಿ ಮತ್ತು ತಾಯಿ ಸುನಂದಾ ಶೆಟ್ಟಿ ವಿರುದ್ಧ ಲಕ್ನೋದ ಹಜರತ್ ಗಂಜ್ ಮತ್ತು ವಿಭೂತಿ ಖಂಡ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿತ್ತು. ಪೊಲೀಸರು ಪ್ರಕರಣದ ತನಿಖೆ ಚುರುಕುಗೊಳಿಸಿದ್ದು, ಈ ಬಗ್ಗೆ ಶಿಲ್ಪಾ ಶೆಟ್ಟಿ ವಿಚಾರಣೆ ನಡೆಸಲು ಸಮನ್ಸ್ ಜಾರಿ ಮಾಡಿದೆ. ಶಿಲ್ಪಾ ಶೆಟ್ಟಿ ವೆಲ್ನೆಸ್ ಸೆಂಟರ್ ನ ಅಧ್ಯಕ್ಷೆ ಕೂಡ ಆಗಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗಿದೆ.

  ಪೊಲೀಸ್ ಅಧಿಕಾರಿಗಳ ಪ್ರಕಾರ, "ಶಿಲ್ಪಾ ಶೆಟ್ಟಿ ಲೋಸಿಸ್ ವೆಲ್ನೆಸ್ ಸೆಂಟರ್ ಹೆಸರಿನಲ್ಲಿ ಫಿಟ್ನೆಸ್ ಚೈನ್ ನಡೆಸುತ್ತಿದ್ದಾರೆ. ಈ ಕಂಪನಿಯ ಅಧ್ಯಕ್ಷೆ ಶಿಲ್ಪಾ ಶೆಟ್ಟಿ ಆಗಿದ್ದಾರೆ. ತಾಯಿ ಸುನಂದಾ ಶೆಟ್ಟಿ ಈ ಕಂಪನೆಯ ನಿರ್ದೇಶಕರಾಗಿದ್ದಾರೆ. ಈ ಕಂಪನಿಯನ್ನು ತೆರೆಯುವ ಹೆಸರಿನಲ್ಲಿ ಶಿಲ್ಪಾ ಶೆಟ್ಟಿ ಮತ್ತು ತಾಯಿ ಸುನಂದಾ ಅವರು ಕೋಟ್ಯಾಂತರ ರೂಪಾಯಿಗಳನ್ನು ಪಡೆದು ಮೋಸ ಮಾಡಿದ್ದಾರೆ ಎಂದು ಓಮ್ಯಾಕ್ಸ್ ಹೈಟ್ ನಿವಾಸಿ ಜ್ಯೋತ್ಸ್ನಾ ಚೌಹಾಣ್ ಮತ್ತು ರೋಹಿತ್ ವೀರ್ ಸಿಂಗ್ ದೂರು ದಾಖಲಿಸಿದ್ದರು.


  ಇತ್ತೀಚಿಗಷ್ಟೆ ಶಿಲ್ಪಾ ಶೆಟ್ಟಿ ತಾಯಿ ಸುನಂದಾ ಶೆಟ್ಟಿ 1.6 ಕೋಟಿ ಮೌಲ್ಯದ ಜಮೀನು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಸುಧಾಕರ್ ಘರೆ ಎಂಬ ವ್ಯಕ್ತಿ ನಕಲಿ ಪತ್ರಗಳನ್ನು ಸೃಷ್ಟಿಸಿ ತನಗೆ ಜಮೀನು ಮಾರಾಟ ಮಾಡಿ 1.6 ಕೋಟಿ ವಂಚಿಸಿದ್ದಾನೆ ಎಂದು ಸುನಂದಾ ಶೆಟ್ಟಿ ಆರೋಪಿಸಿ ದೂರು ನೀಡಿದ್ದರು. ಇದೀಗ ಸುನಂದಾ ಶೆಟ್ಟಿ ಮತ್ತು ಮಗಳು ಶಿಲ್ಪಾ ಶೆಟ್ಟಿ ವಿರುದ್ಧವೇ ದೂರು ದಾಖಲಾಗಿದೆ.

  ಪತಿ ರಾಜ್ ಕುಂದ್ರ ಬಂಧನ

  ರಾಜ್ ಕುಂದ್ರಾ ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾರನ್ನು ಜುಲೈ 19 ರಂದು ಅರೆಸ್ಟ್ ಮಾಡಲಾಗಿದೆ. ಜುಲೈ 27ರವರೆಗೂ ಪೊಲೀಸ್ ಕಸ್ಟಡಿಯಲ್ಲಿದ್ದ ರಾಜ್ ಕುಂದ್ರಾರನ್ನು ಬಳಿಕ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ. ಇನ್ನು ಈ ಕೇಸ್‌ಗೆ ಸಂಬಂಧಿಸಿದಂತೆ ನಟಿ ಶೆರ್ಲಿನ್ ಚೋಪ್ರಾ, ಗೆಹನಾ ವಸಿಷ್ಠ್ ಸೇರಿದಂತೆ ಮತ್ತೆ ಕೆಲವು ನಟಿಯ ಹೆಸರು ಕೇಳಿಬರುತ್ತಿದೆ.

  ಪತಿಯ ಅಶ್ಲೀಯ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಪತ್ನಿ ಶಿಲ್ಪಾ ಶೆಟ್ಟಿಯನ್ನು ಮುಂಬೈ ಪೊಲೀಸರು ವಿಚಾರಣೆ ಮಾಡಿದ್ದಾರೆ. ಸದ್ಯ ಪತಿಯ ಬಿಡುಗಡೆ ಬಗ್ಗೆ ಚಿಂತಸುತ್ತಿರುವ ಶಿಲ್ಪಾ ಶೆಟ್ಟಿಗೆ ವಂಚನೆ ಪ್ರಕರಣ ದೊಡ್ಡ ತಲೆನೋವಾಗಿದೆ. ಸದ್ಯದಲ್ಲೇ ಶಿಲ್ಪಾ ಲಕ್ನೋ ಪೊಲೀಸರ ಮುಂದೆ ವಿಚಾರಣೆ ಹಾಜರಾಗಲಿದ್ದಾರೆ.

  ರಾಜ್ ಕುಂದ್ರ ಅಶ್ಲೀಯ ವಿಡಿಯೋ ಪ್ರಕರಣ ಸಂಬಂಧ ಇತ್ತೀಚಿಗಷ್ಟೆ ಮುಂಬೈ ಅಪರಾಧ ವಿಭಾಗದ ಪೊಲೀಸರು ನಟಿ ಶೆರ್ಲಿನ್ ಚೋಪ್ರಾಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದರು. ವಿಚಾರಣೆಗೆ ಹಾಜರಾಗಿದ್ದ ಶೆರ್ಲಿನ್ ಗೆ ಪೊಲೀಸರಿಂದ ಅನೇಕ ಪ್ರಶ್ನೆಗಳು ಎದುರಿಸಿದ್ದಾರೆ. ವಿಚಾರಣೆ ವೇಳೆ ರಾಜ್ ಕುಂದ್ರ ಜೊತೆಗಿನ ಸಂಬಂಧ, ವಿಡಿಯೋಗಳ ನಿರ್ಮಾಣ ಸೇರಿದಂತೆ ಅನೇಕ ಪ್ರಶ್ನೆಗಳನ್ನು ಮುಂಬೈ ಪೊಲೀಸರು ಕೇಳಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

  English summary
  Wellness centre fraud case: Shilpa Shetty served Notice by Lucknow Police.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X