For Quick Alerts
  ALLOW NOTIFICATIONS  
  For Daily Alerts

  ನಟಿಯರು ಕುಡಿಯುವ ಈ ಕಪ್ಪು ಪೇಯ ಪೆಟ್ರೋಲ್‌ಗಿಂತಲೂ ದುಬಾರಿ!

  By ಫಿಲ್ಮಿಬೀಟ್ ಡೆಸ್ಕ್
  |

  ಫಿಟ್‌ನೆಸ್‌ಗೆ ಬಹಳ ಒತ್ತು ಕೊಡುತ್ತಿದ್ದಾರೆ ಈಗಿನ ನಟ-ನಟಿಯರು. ಅದರಲ್ಲೂ ಬಾಲಿವುಡ್‌ನ ನಟಿಯರಂತೂ ಫಿಟ್‌ನೆಸ್‌ಗೆ ಇನ್ನಿಲ್ಲದ ಮಹತ್ವ ನೀಡುತ್ತಾರೆ. ಹಾಗಾಗಿಯೇ ವಯಸ್ಸು 50 ದಾಟಿದರೂ ಈಗಲೂ ಬಳುಕುವ ಬಳ್ಳಿಗಳಂತಿದ್ದಾರೆ ಅಲ್ಲಿನ ಕೆಲವು ನಟಿಯರು.

  ಮಲೈಕಾ ಅರೋರ, ಶಿಲ್ಪಾ ಶೆಟ್ಟಿ, ಕತ್ರಿನಾ ಕೈಫ್, ಕಶ್ಮೀರಾ ಶಾ ಇವರುಗಳಿಗೆಲ್ಲ ವಯಸ್ಸೇನೂ ಕಡಿಮೆ ಇಲ್ಲ. ಮಲೈಕಾ ಅರೋರಾಗೆ ಬರೋಬ್ಬರಿ 47 ವರ್ಷ. ಶಿಲ್ಪಾ ಶೆಟ್ಟಿಗೆ 46 ವರ್ಷ. ಈ ನಟಿಯರೂ ಈಗಲೂ ಬಳುಕುವ ಬಳ್ಳಿಗಳಿಂತಿದ್ದಾರೆ. ಇದಕ್ಕೆ ಕಾರಣ ಅವರ ದಿನನಿತ್ಯದ ವ್ಯಾಯಾಮ ಮತ್ತು ಶಿಸ್ತುಬದ್ಧ ಆಹಾರ ಮತ್ತು ಆರೋಗ್ಯಕರ ಪೇಯಗಳು ಇತ್ಯಾದಿ.

  ಬಾಲಿವುಡ್ ನಟಿಯರು ಇತ್ತೀಚೆಗೆ ಕಪ್ಪು ಬಣ್ಣದ ಪೇಯವನ್ನು ಕುಡಿಯುವ ಅಭ್ಯಾಸ ರೂಢಿಸಿಕೊಂಡಿದ್ದಾರೆ. ಮಲೈಕಾ ಅರೊರಾ, ಶ್ರುತಿ ಹಾಸನ್, ಆಲಿಯಾ ಭಟ್, ಪೂಜಾ ಭಟ್ ಇನ್ನೂ ಹಲವು ನಟಿಯರು ಕಪ್ಪು ಬಣ್ಣದ ಪೇಯವನ್ನು ಕುಡಿಯುತ್ತಿದ್ದಾರೆ. ನಟಿಯರ ಆರೋಗ್ಯದ ಗುಟ್ಟು ಈ ಪೇಯದಲ್ಲಿದೆ ಎನ್ನಲಾಗುತ್ತಿದೆ. ಹಾಗಿದ್ದರೂ ಯಾವುದೀ ಪಾನೀಯ? ಇದರ ಬೆಲೆ ಎಷ್ಟು? ತಿಳಿಯೋಣ ಬನ್ನಿ.

  ಸೆಲೆಬ್ರಿಟಿಗಳು ಕುಡಿಯುತ್ತಿರುವ ಕಪ್ಪು ಬಣ್ಣದ ಪೇಯ ನಿಜವಾಗಿಯೂ ಪೇಯ ಅಥವಾ ಪಾನೀಯವಲ್ಲ ಬದಲಿಗೆ ಇದು ನೀರು ಅಷ್ಟೆ. ಆದರೆ ಇದರ ಬಣ್ಣ ಕಪ್ಪಾಗಿದೆ. ನೀರು ಎಂದ ಕೂಡಲೇ ಇದು ಸಾಮಾನ್ಯ ನೀರು ಎಂತಲೂ ಅಲ್ಲ, ಇದು ವಿಶೇಷವಾದ ಗುಣಗಳನ್ನು ಹೊಂದಿರುವ ಬಹಳ ದುಬಾರಿಯಾದ ಕಪ್ಪು ನೀರು.

  ಬ್ಲ್ಯಾಕ್ ಆಲ್ಕಲೈನ್ ವಾಟರ್ ಕುಡಿಯುತ್ತಿರುವ ತಾರೆಯರು

  ಬ್ಲ್ಯಾಕ್ ಆಲ್ಕಲೈನ್ ವಾಟರ್ ಕುಡಿಯುತ್ತಿರುವ ತಾರೆಯರು

  ತಾರೆಯರು ಕುಡಿಯುತ್ತಿರುವ ಈ ಕಪ್ಪು ನೀರಿಗೆ 'ಬ್ಲ್ಯಾಕ್ ಆಲ್ಕಲೈನ್ ವಾಟರ್' ಎಂದು ಹೆಸರು. ಇದು ಯಾವುದೇ ವಿಶೇಷ ಪೇಯವಲ್ಲ ಬದಲಿಗೆ ಉತ್ತಮ ಗುಣಮಟ್ಟದ ಸಾಕಷ್ಟು ಖನಿಜಾಂಶ ಹೊಂದಿರುವ ನೀರಷ್ಟೆ. ಈ ನೀರಿನಲ್ಲಿ 70ಕ್ಕೂ ಹೆಚ್ಚು ಬಗೆಯ ಮಿನರಲ್ಸ್‌ಗಳನ್ನು ಸೇರಿಸಲಾಗಿರುತ್ತದೆ. ಜೊತೆಗೆ ಸಾಮಾನ್ಯ ನೀರಿಗೆ ಹೋಲಿಸಿದರೆ ಇದರ ಪಿಎಚ್‌ ಮೌಲ್ಯ ಹೆಚ್ಚಿರುತ್ತದೆ.

  ಆರೋಗ್ಯ ಲಾಭಗಳು ಇವೆಯಂತೆ

  ಆರೋಗ್ಯ ಲಾಭಗಳು ಇವೆಯಂತೆ

  ಸಾಮಾನ್ಯ ನೀರು ಕುಡಿಯುವುದಕ್ಕಿಂತಲೂ ಹೆಚ್ಚಿನ ಆರೋಗ್ಯ ಅಲ್ಕಲೈನ್ ಬ್ಲ್ಯಾಕ್ ವಾಟರ್ ಕುಡಿಯುವುದರಿಂದ ಸಿಗುತ್ತದೆ ಎನ್ನಲಾಗುತ್ತದೆ. ಕಪ್ಪು ನೀರು ಕುಡಿಯುವುದರಿಂದ ಹೆಚ್ಚು ಕಾಲ ದೇಹ ಹೈಡ್ರೇಟೆಡ್ ಆಗಿರುತ್ತದೆ. ಅಸಿಡಿಟಿ ಆಗುವುದಿಲ್ಲ. ಪಚನ ಕ್ರಿಯೆ ಚೆನ್ನಾಗಿ ಆಗುತ್ತದೆ. ದೇಹದ ವಿಷ ಪದಾರ್ಥಗಳನ್ನು ಈ ಕಪ್ಪು ನೀರು ಹೊರಗೆ ಹಾಕುತ್ತದೆ. ಮೆಟಾಬಾಲಿಸನ್ ಹೆಚ್ಚು ಮಾಡುತ್ತದೆ, ದೇಹಕ್ಕೆ ಹೆಚ್ಚಿನ ಆಹ್ಲಾದಕರ ಸ್ಥಿತಿಯನ್ನು ನೀಡುತ್ತದೆ ಎನ್ನಲಾಗುತ್ತದೆ. ವೋಲ್ಕಾಸ್ ಬ್ರ್ಯಾಂಡ್‌ನ ಕಪ್ಪು ನೀರನ್ನು ಸೆಲೆಬ್ರಿಟಿಗಳು ಹೆಚ್ಚಿಗೆ ಬಳಸುತ್ತಿದ್ದಾರೆ.

  ಒಂದು ಲೀಟರ್ ನೀರಿನ ಬೆಲೆ ಎಷ್ಟು?

  ಒಂದು ಲೀಟರ್ ನೀರಿನ ಬೆಲೆ ಎಷ್ಟು?

  ಈ ಕಪ್ಪು ನೀರಿನ ಬೆಲೆ ಸಹ ಬಹಳ ದುಬಾರಿ. ಅರ್ಧ ಲೀಟರ್ ಕಪ್ಪು ನೀರಿನ ಬೆಲೆ ಬರೋಬ್ಬರಿ 100 ರೂ. ಒಂದು ಲೀಟರ್‌ಗೆ 200 ರು ಬೆಲೆ ತೆರಬೇಕು. ವ್ಯಕ್ತಿಯೊಬ್ಬ ದಿನಕ್ಕೆ ಕನಿಷ್ಟ ಐದು ಲೀಟರ್ ನೀರು ಕುಡಿಯಬೇಕು ಎನ್ನುತ್ತಾರೆ ವೈದ್ಯರು. ಒಂದೊಮ್ಮೆ ಐದು ಲೀಟರ್ ಆಲ್ಕಲೈನ್ ಕಪ್ಪು ನೀರು ಕುಡಿಯುವಿರಾದರೆ ದಿನಕ್ಕೆ 1000 ರು ನೀರಿಗಾಗಿಯೇ ವ್ಯಕ್ತಿಯೊಬ್ಬ ವೆಚ್ಚ ಮಾಡಬೇಕಾಗುತ್ತದೆ. ಸೆಲೆಬ್ರಿಟಿಗಳಿಗೆ ದಿನಕ್ಕೆ ಸಾವಿರ ರು ವೆಚ್ಚ ಮಾಡುವುದು ದೊಡ್ಡ ವಿಷಯವೇ ಅಲ್ಲ. ಹಾಗಾಗಿ ಹಲವು ಸೆಲೆಬ್ರಿಟಿಗಳು ಬ್ಲ್ಯಾಕ್ ವಾಟರ್ ಬಾಟಲಿಗಳನ್ನು ಕೈಯಲ್ಲಿ ಹಿಡಿದಿದ್ದಾರೆ.

  ಹಲವು ಸೆಲೆಬ್ರಿಟಿಗಳು ಕುಡಿಯುತ್ತಿದ್ದಾರೆ

  ಹಲವು ಸೆಲೆಬ್ರಿಟಿಗಳು ಕುಡಿಯುತ್ತಿದ್ದಾರೆ

  ಮಲೈಕಾ ಅರೊರಾ, ಶ್ರುತಿ ಹಾಸನ್, ಆಲಿಯಾ ಭಟ್, ಊರ್ವಶಿ ರೌಟೆಲ್ಲಾ, ಕ್ರಿಕೆಟಿಗ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯಾ, ಸೆಲೆಬ್ರಿಟಿ ನ್ಯೂಟ್ರೀಶಿಯನ್ ಪೂಜಾ ಮಖೀಜಾ, ಸೆಲ್ರಬ್ರಿಟಿ ಫಿಟ್‌ನೆಸ್ ಟ್ರೈನರ್ ಯಶಸ್ವಿನಿ, ಎನ್‌ಡಿಟಿವಿಯ ಅಂಬಿಕಾ ಆನಂದ್ ಇನ್ನೂ ಹಲವು ಸೆಲೆಬ್ರಿಟಿಗಳು ವೊಲ್ಕಾಸ್‌ನ ಕಪ್ಪು ನೀರು ಕುಡಿಯುತ್ತಿದ್ದಾರೆ. ಜೊತೆಗೆ ಪ್ರಚಾರವನ್ನೂ ಮಾಡುತ್ತಿದ್ದಾರೆ.

  English summary
  Many Bollywood celebrities drinking black water. what is the specialty of this black alkaline water and how much is this black water cost per liter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X