Don't Miss!
- Sports
U-19 ಮಹಿಳಾ ಟಿ20 ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ಬಹುಮಾನ ಘೋಷಿಸಿದ ಜಯ್ ಶಾ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದಕ್ಷಿಣ ಭಾರತ ಸಿನಿಮಾಗಳ ರೀಮೇಕ್ ಮಾಡಿದರೆ ತಪ್ಪೇನು? ಅಕ್ಷಯ್ ಪ್ರಶ್ನೆ
ಕೆಲವು ದಿನಗಳ ಹಿಂದಷ್ಟೆ, ದಕ್ಷಿಣ ಭಾರತದವರು ತಮ್ಮ ಸಿನಿಮಾಗಳನ್ನು ಹಿಂದಿ ಭಾಷೆಗೆ ಡಬ್ ಮಾಡಿ ಏಕೆ ಬಿಡುಗಡೆ ಮಾಡುತ್ತಾರೆ ಎಂದು ಪ್ರಶ್ನೆ ಮಾಡಿದ್ದ ಬಾಲಿವುಡ್ ಮಂದಿ ಇಂದು, ದಕ್ಷಿಣ ಭಾರತ ಸಿನಿಮಾಗಳನ್ನು ರೀಮೇಕ್ ಮಾಡಿದರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.
ಅತಿ ಹೆಚ್ಚು ರೀಮೇಕ್ ಸಿನಿಮಾಗಳಲ್ಲಿ ನಟಿಸುವ, ಆ ಮೂಲಕ ಟೀಕೆ, ವಿಮರ್ಶೆಗೆ ಕಾರಣವಾಗಿರುವ ಅಕ್ಷಯ್ ಕುಮಾರ್, ಈ ಬಗ್ಗೆ ಮಾತನಾಡಿದ್ದು, 'ದಕ್ಷಿಣ ಭಾರತದ ಒಳ್ಳೆಯ ಸಿನಿಮಾಗಳನ್ನು ಖರೀದಿಸಿ, ರೀಮೇಕ್ ಮಾಡಿದರೆ ತಪ್ಪೇನು?'' ಎಂದು ಪ್ರಶ್ನೆ ಮಾಡಿದ್ದಾರೆ.
ಅಕ್ಷಯ್ ಕುಮಾರ್ ನಟನೆಯ 'ಪೃಥ್ವಿರಾಜ್' ಸಿನಿಮಾ ಬಿಡುಗಡೆಗೆ ತಯಾರಾಗಿದ್ದು, ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿರುವ ಅಕ್ಷಯ್ ಕುಮಾರ್, ''ಬೆಳಿಗ್ಗೆ ಯಾರೋ ರೀಮೇಕ್ ಬಗ್ಗೆ ನನ್ನನ್ನು ಪ್ರಶ್ನಿಸಿದರು. ಏಕೆ ನಾವು ರೀಮೇಕ್ ಮಾಡಬಾರದು? ಅದರಲ್ಲಿ ತಪ್ಪೇನು? ಒಳ್ಳೆಯ ದಕ್ಷಿಣ ಭಾರತದ ಸಿನಿಮಾಗಳನ್ನು ಖರೀದಿಸಿ ರೀಮೇಕ್ ಮಾಡಿದರೆ ತಪ್ಪೇನು? ನನ್ನ ನಟನೆಯ 'ಓ ಮ ಗಾಡ್' ಸಿನಿಮಾ ತೆಲುಗಿಗೆ ರೀಮೇಕ್ ಆಗಿ ಹಿಟ್ ಆಯಿತು. ಅವರ ಸಿನಿಮಾವನ್ನು 'ರೌಡಿ ರಾಥೋಡ್' ಮಾಡಿ ನಾವು ಗೆದ್ದೆವು'' ಎಂದಿದ್ದಾರೆ.

ಟ್ವಿಟ್ಟರ್‌ನಲ್ಲಿ ಎಲ್ಲರೂ ವಿಮರ್ಶಕರಾಗಿದ್ದಾರೆ: ಅಕ್ಷಯ್
''ರೀಮೇಕ್ ಮಾಡಿದರೆ ಪ್ರತಿಭೆಯ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಇಲ್ಲಿ ಎಲ್ಲರಿಗೂ ಪ್ರತಿಭೆ ಇದೆ. ಎಲ್ಲರೂ ಪ್ರತಿಭಾವಂತರೆ. ಯಾವ ರೀತಿಯ ಕತೆ ಯಾವ ಪ್ರೇಕ್ಷಕರಿಗೆ ಕನೆಕ್ಟ್ ಆಗುವುದು ಮುಖ್ಯವಾಗುತ್ತದೆ. ಈಗಂತೂ ಟ್ವಿಟ್ಟರ್‌ನಲ್ಲಿರುವ ಸಿನಿಮಾ ವೀಕ್ಷಕರೆಲ್ಲ ವಿಮರ್ಶಕರೇ ಆಗಿದ್ದಾರೆ. ಆದರೆ ನಾವು ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು. ನಮ್ಮ ಕೆಲಸ ನಾವು ಮಾಡುತ್ತಾ ಹೋಗುತ್ತಿರಬೇಕು'' ಎಂದಿದ್ದಾರೆ ಅಕ್ಷಯ್ ಕುಮಾರ್.

ನಮ್ಮದೆಲ್ಲ ಒಂದೇ ಚಿತ್ರರಂಗ: ಅಕ್ಷಯ್ ಕುಮಾರ್
ದಕ್ಷಿಣ ಭಾರತ ಚಿತ್ರರಂಗ ಹಾಗೂ ಬಾಲಿವುಡ್ ನಡುವಿನ ಸ್ಪರ್ಧೆ ಬಗ್ಗೆ ಮಾತನಾಡಿದ ಅಕ್ಷಯ್ ಕುಮಾರ್, ''ಈ ರೀತಿಯ ಬೇರ್ಪಡಿಸುವಿಕೆಯಲ್ಲಿ ನನಗೆ ನಂಬಿಕೆ ಇಲ್ಲ. ದಕ್ಷಿಣ ಭಾರತ ಚಿತ್ರೋದ್ಯಮ ಹಾಗೂ ಉತ್ತರ ಭಾರತ ಚಿತ್ರೋದ್ಯಮ ಎಂದು ಯಾರಾದರೂ ಹೇಳಿದರೆ ನನಗೆ ಬೇಸರವಾಗುತ್ತದೆ. ನಾವೆಲ್ಲ ಒಂದೇ ಚಿತ್ರೋದ್ಯಮದವರು ಎಂಬುದೇ ನನ್ನ ನಂಬಿಕೆ. ಈ ರೀತಿಯ ಪ್ರಶ್ನೆಗಳನ್ನು ಕೇಳುವುದನ್ನು ನಾವು ಬಿಡಬೇಕು'' ಎಂದಿದ್ದಾರೆ ಅಕ್ಷಯ್ ಕುಮಾರ್.

ಬ್ರಿಟೀಷರು ನಮ್ಮ ಆಳಿದ್ದು ಹೀಗೆಯೇ: ಅಕ್ಷಯ್
''ಇದೇ ರೀತಿ ನಮ್ಮ ಬೇರೆ ಮಾಡಿ, ಒಡೆದು ಬ್ರಿಟೀಷರು ನಮ್ಮ ಮೇಲೆ ಆಳ್ವಿಕೆ ಮಾಡಿದ್ದರು ಎಂಬುದನ್ನು ನಾವು ನೆನಪಿಡಬೇಕು. ನಾವು ಈ ವರೆಗೆ ಇತಿಹಾಸದಿಂದ ಪಾಠ ಕಲಿತಂತಿಲ್ಲ. ನಾವೆಲ್ಲ ಒಂದೇ, ನಮ್ಮದೆಲ್ಲ ಒಂದೇ ಚಿತ್ರೋದ್ಯಮ ಎಂದು ನಾವು ಅರ್ಥ ಮಾಡಿಕೊಂಡ ದಿವಸ, ಇಡೀಯ ಚಿತ್ರರಂಗ ಬದಲಾಗುತ್ತದೆ, ನಮ್ಮ ಚಿತ್ರೋದ್ಯಮ ಇನ್ನಷ್ಟು ಪ್ರಗತಿ ಸಾಧಿಸುತ್ತದೆ'' ಎಂದಿದ್ದಾರೆ ಅಕ್ಷಯ್ ಕುಮಾರ್.

ಹಲವು ರೀಮೇಕ್‌ಗಳಲ್ಲಿ ಅಕ್ಷಯ್ ನಟಿಸಿದ್ದಾರೆ
ಅಕ್ಷಯ್ ಕುಮಾರ್ ಹಲವಾರು ದಕ್ಷಿಣ ಭಾರತ ಸಿನಿಮಾಗಳ ಹಿಂದಿ ರೀಮೇಕ್‌ನಲ್ಲಿ ನಟಿಸಿದ್ದಾರೆ. ಮಲಯಾಳಂನ 'ರಾಮ್ ಜಿ ರಾವ್ ಸ್ಪೀಕಿಂಗ್' ಅನ್ನು 'ಹೇರಾ-ಪೇರಿ' ಹೆಸರಲ್ಲಿ ರೀಮೇಕ್ ಮಾಡಿದರು. ತೆಲುಗಿನ 'ವಿಕ್ರಮಾರ್ಕುಡು' ಸಿನಿಮಾದ ರೀಮೇಕ್ 'ರೌಡಿ ರಾಥೋಡ್', ಕನ್ನಡದ 'ಆಪ್ತಮಿತ್ರ' ಸಿನಿಮಾವನ್ನು 'ಭೂಲ್ ಭುಲಯ್ಯ', ತಮಿಳಿನ 'ಕಾಂಚನಾ' ಸಿನಿಮಾವನ್ನು 'ಲಕ್ಷ್ಮಿ' ಹೆಸರಲ್ಲಿ ರೀಮೇಕ್ ಮಾಡಿದ್ದಾರೆ, 'ತುಪಾಕಿ' ಸಿನಿಮಾದ ರೀಮೇಕ್ 'ಹಾಲಿಡೇ', ಮಲಯಾಳಂನ 'ಡ್ರೈವಿಂಗ್ ಲೈಸೆನ್ಸ್' ಸಿನಿಮಾವನ್ನು 'ಸೆಲ್ಫಿ' ಹೆಸರಲ್ಲಿ ರೀಮೇಕ್ ಮಾಡುತ್ತಿದ್ದಾರೆ. ತಮಿಳಿನ 'ಸೂರರೈ ಪೊಟ್ರು' ಸಿನಿಮಾದ ಹಿಂದಿ ರೀಮೇಕ್‌ನಲ್ಲಿಯೂ ಅಕ್ಷಯ್ ಕುಮಾರ್ ನಟಿಸುತ್ತಿದ್ದಾರೆ.