For Quick Alerts
  ALLOW NOTIFICATIONS  
  For Daily Alerts

  ಸೋನು ಸೂದ್‌ಗೆ 'ಆ ಸೂಪರ್ ಸ್ಟಾರ್ ನಟಿ' ಸಹೋದರಿ ಇದ್ದಂತೆ

  |

  ಜನಸಾಮಾನ್ಯರ ಪಾಲಿಗೆ ರಿಯಲ್ ಹೀರೋ ಎನಿಸಿಕೊಂಡಿರುವ ಸೋನು ಸೂದ್ 48ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಜನರ ಕಷ್ಟಕ್ಕೆ ಸ್ಪಂದಿಸಿದ ನಾನಾ ರೀತಿಯಲ್ಲಿ ಸಹಾಯ ಹಸ್ತ ಚಾಚಿದ ಸೋನು ಸೂದ್‌ಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

  ಸೋನು ಸೂದ್ ಮಾಡಿದ ಮಹತ್ವದ ಕೆಲಸಗಳಿಂದ ಅನೇಕರು ಅವರನ್ನು ದೇವರಂತೆ ಕಾಣುತ್ತಿದ್ದಾರೆ. ಆಂಧ್ರಪ್ರದೇಶ ಹಳ್ಳಿಯೊಂದರಲ್ಲಿ ಸೋನು ಸೂದ್ ಗುಡಿ ನಿರ್ಮಿಸಿದರು. ಮನೆಗಳಲ್ಲಿ ಫೋಟೋ ಇಟ್ಕೊಂಡು ಆರಾಧಿಸಿದರು. ಹೀಗೆ, ಜನಸಾಮಾನ್ಯರ ನೋವಿಗೆ ಸ್ಪಂದಿಸಿ ರಿಯಲ್ ಹೀರೋ ಆಗಿರುವ ಸೋನು ಸೂದ್‌ಗೆ ಬಾಲಿವುಡ್‌ ಇಂಡಸ್ಟ್ರಿಯಲ್ಲಿ ಒಬ್ಬ ಸಹೋದರಿ ಇದ್ದಾರೆ. ಈ ಸಹೋದರಿ ಪಾಲಿಗೆ ಸೋನು ಸೂದ್ ಸದಾ ವಿಶೇಷವಾಗಿದ್ದಾರೆ. ಅಷ್ಟಕ್ಕೂ, ಯಾರು ಆ ಸಹೋದರಿ? ಮುಂದೆ ಓದಿ...

  ನೀವು ನನ್ನ 'ಪಾ'ರನ್ನು ನೆನಪಿಸುತ್ತೀರಾ

  ನೀವು ನನ್ನ 'ಪಾ'ರನ್ನು ನೆನಪಿಸುತ್ತೀರಾ

  ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಜೊತೆ ನಟ ಸೋನು ಸೂದ್ ಬಹಳ ವಿಶೇಷವಾದ ಬಾಂಧವ್ಯ ಹೊಂದಿದ್ದಾರೆ. ಸೋನು ಸೂದ್‌ರನ್ನು ಈಗಲೂ ಐಶ್ವರ್ಯ 'ಭಾಯ್ ಸಾಬ್' ಎಂದೇ ಕರೆಯುತ್ತಾರೆ. ಈ ಹಿಂದೆ ಸಿನಿಮಾವೊಂದರ ಚಿತ್ರೀಕರಣದಲ್ಲಿ ಒಟ್ಟಿಗೆ ನಟಿಸುತ್ತಿರುವ ವೇಳೆ, ''ನೀವು ನಮ್ಮ ಪಾ (ಅಮಿತಾಭ್ ಬಚ್ಚನ್) ಅವರನ್ನು ನೆನಪಿಸುತ್ತೀರಿ'' ಎಂದಿದ್ದರಂತೆ.

  Happy Birthday Sonu Sood; ರಿಯಲ್ ಹೀರೋ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರHappy Birthday Sonu Sood; ರಿಯಲ್ ಹೀರೋ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರ

  'ಜೋಧಾ ಅಕ್ಬರ್' ಚಿತ್ರೀಕರಣ

  'ಜೋಧಾ ಅಕ್ಬರ್' ಚಿತ್ರೀಕರಣ

  'ಜೋಧಾ ಅಕ್ಬರ್' ಸಿನಿಮಾದಲ್ಲಿ ಐಶ್ವರ್ಯ ರೈ ಬಚ್ಚನ್ ಮತ್ತು ಸೋನು ಸೂದ್ ಒಟ್ಟಿಗೆ ನಟಿಸಿದ್ದರು. ಈ ಚಿತ್ರದಲ್ಲಿ ಇಬ್ಬರದ್ದು ಅಣ್ಣ-ತಂಗಿ ಪಾತ್ರ ಆಗಿತ್ತು. ಐಶ್ವರ್ಯ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದಾಗ, ''ಐಶ್ವರ್ಯ, ನೀವು ನನ್ನ ಪಾ ನೆನಪಿಸುತ್ತೀರಿ'' ಎಂದು ಹೇಳಿದ್ದರು ಎಂಬ ವಿಷಯ ಹೇಳಿಕೊಂಡಿದ್ದರು.

  ಪ್ರತಿ ವರ್ಷವೂ ರಾಕಿ ಕಟ್ತಾರೆ

  ಪ್ರತಿ ವರ್ಷವೂ ರಾಕಿ ಕಟ್ತಾರೆ

  'ಜೋಧಾ ಅಕ್ಬರ್' ಸಿನಿಮಾ ಮುಗಿದ ನಂತರವೂ ಐಶ್ವರ್ಯ ರೈ ಮತ್ತು ಸೋನು ಸೂದ್ ಅಣ್ಣ-ತಂಗಿಯಂತೆ ಮುಂದುವರಿದಿದ್ದಾರೆ. ಪ್ರತಿ ರಕ್ಷಾ ಬಂಧನಕ್ಕೂ ಐಶ್ವರ್ಯ ರಾಕಿ ಕಟ್ಟುತ್ತಾರಂತೆ. ರಾಕಿ ಹಬ್ಬಕ್ಕೆ ಐಶ್ವರ್ಯ ಮನೆಗೆ ಹೋಗಿ ರಾಕಿ ಕಟ್ಟಿಸಿಕೊಂಡು ಬರ್ತಾರಂತೆ ಸೋನು ಸೂದ್.

  ಅಮ್ಮನ ಹುಟ್ಟುಹಬ್ಬಕ್ಕೆ ಭಾವುಕ ಪೋಸ್ಟ್ ಹಾಕಿದ ಸೋನು ಸೂದ್ಅಮ್ಮನ ಹುಟ್ಟುಹಬ್ಬಕ್ಕೆ ಭಾವುಕ ಪೋಸ್ಟ್ ಹಾಕಿದ ಸೋನು ಸೂದ್

  ಬಚ್ಚನ್ ಕುಟುಂಬದ ಜೊತೆ ನಟನೆ

  ಬಚ್ಚನ್ ಕುಟುಂಬದ ಜೊತೆ ನಟನೆ

  ಸೋನು ಸೂದ್ ಅವರು ಬಚ್ಚನ್ ಕುಟುಂಬದ ಎಲ್ಲರ ಜೊತೆಯಲ್ಲು ನಟಿಸಿದ್ದಾರೆ. ಅಮಿತಾಭ್ ಜೊತೆ 'ಬುದ್ಧ...ಹೋಗಾ ತೇರಾ ಬಾಪ್' ಸಿನಿಮಾದಲ್ಲಿ ತೆರೆಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಬಿಗ್ ಬಿ ಮಗನಾಗಿ ಬಣ್ಣ ಹಚ್ಚಿದ್ದಾರೆ. ಅಭಿಷೇಕ್ ಜೊತೆ 'ಯುವ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅಭಿಷೇಕ್‌ಗೆ ಸಹೋದರನಾಗಿ ಅಭಿನಯಿಸಿದ್ದಾರೆ. ಬಿಗ್ ಬಿ ಅಭಿಮಾನಿಯೂ ಆಗಿರುವ ಸೋನು ''ಅಮಿತಾಭ್ ತುಂಬಾ ಡೆಡಿಕೇಟಿವ್ ವ್ಯಕ್ತಿ. ಯಾವಾಗಲೂ ಡೈಲಾಗ್‌ಗಳನ್ನು ಅಭ್ಯಾಸ ಮಾಡ್ತಾನೆ ಇರ್ತಾರೆ'' ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಅಮಿತಾಭ್ ಬಚ್ಚನ್ ಜೊತೆ ಮೊದಲ ದೃಶ್ಯದಲ್ಲಿ ಅವರನ್ನು ತಳ್ಳಬೇಕಾಗಿತ್ತು. 'ನಾನು ಬಹಳ ಗೌರವದಿಂದ ನೋಡಿದ ವ್ಯಕ್ತಿಗೆ ನಾನು ತಳ್ಳುವ ದೃಶ್ಯ ಹೇಗೆ ಮಾಡಬಹುದು?' ಎಂದು ಸೋನು ಸೂದ್ ನಿರ್ದೇಶಕರಿಗೆ ಹೇಳಿದ್ದರಂತೆ.

  ಸೋನು ಸೋದ್ ಮುಂದಿನ ಪ್ರಾಜೆಕ್ಟ್

  ಸೋನು ಸೋದ್ ಮುಂದಿನ ಪ್ರಾಜೆಕ್ಟ್

  ಮೆಗಾಸ್ಟಾರ್ ಚಿರಂಜೀವಿ ನಟನೆಯಲ್ಲಿ ತಯಾರಾಗುತ್ತಿರುವ 'ಆಚಾರ್ಯ' ಸಿನಿಮಾದಲ್ಲಿ ಸೋನು ಸೂದ್ ನಟಿಸುತ್ತಿದ್ದಾರೆ. ಅಕ್ಷಯ್ ಕುಮಾರ್ ಅಭಿನಯದ 'ಪೃಥ್ವಿರಾಜ್' ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ತಮಿಳಿನ 'ತಮಿಳರಸನ್' ಚಿತ್ರದಲ್ಲೂ ಸೋನು ಅಭಿನಯಿಸುತ್ತಿದ್ದಾರೆ.

  ಪಿಂಚಣಿ ಹಣ ದೇಣಿಗೆ ನೀಡಿದ್ದ ಅಂಧ ಮಹಿಳೆಗೆ ವಿಶೇಷ ಗೌರವ ನೀಡಿದ ಸೋನುಪಿಂಚಣಿ ಹಣ ದೇಣಿಗೆ ನೀಡಿದ್ದ ಅಂಧ ಮಹಿಳೆಗೆ ವಿಶೇಷ ಗೌರವ ನೀಡಿದ ಸೋನು

  'ಪೊನ್ನಿಯನ್ ಸೆಲ್ವನ್' ಚಿತ್ರದಲ್ಲಿ ಐಶ್ ನಟನೆ

  'ಪೊನ್ನಿಯನ್ ಸೆಲ್ವನ್' ಚಿತ್ರದಲ್ಲಿ ಐಶ್ ನಟನೆ

  ಐಶ್ವರ್ಯ ರೈ ಬಚ್ಚನ್ ಸದ್ಯ ಮಣಿರತ್ನಂ ನಿರ್ದೇಶನದಲ್ಲಿ ತಾಯಾರಾಗುತ್ತಿರುವ 'ಪೊನ್ನಿಯನ್ ಸೆಲ್ವನ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರದಲ್ಲಿ ಅಮಿತಾಭ್ ಸಹ ವಿಶೇಷ ಪಾತ್ರ ಮಾಡಿದ್ದಾರೆ. ಪಾಂಡಿಚೆರಿಯಲ್ಲಿ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. ಐಶ್ ಶೂಟಿಂಗ್‌ನಲ್ಲಿ ಭಾಗಿಯಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.

  English summary
  When Aishwarya Rai Told 'you Remind Me Of Pa': Sonu Sood On Working With Bachchans.
  Friday, July 30, 2021, 13:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X