twitter
    For Quick Alerts
    ALLOW NOTIFICATIONS  
    For Daily Alerts

    90 ಕೋಟಿ ರೂ. ಸಾಲದ ಸುಳಿಯಲ್ಲಿ ಸಿಲುಕಿ ಬಂಗ್ಲೆ ಅಡ ಇಟ್ಟು ಆರ್ಥಿಕ ದಿವಾಳಿಯಾಗಿದ್ದ ಅಮಿತಾಬ್

    |

    ಭಾರತೀಯ ಸಿನಿಮಾರಂಗದ ಖ್ಯಾತ ನಟರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇರುವವರು ಅಮಿತಾಬ್ ಬಚ್ಚನ್. ಈ ವಯಸ್ಸಿನಲ್ಲೂ ಬಿಗ್ ಬಿ ಅದ್ಭುತ ಪಾತ್ರಗಳನ್ನು ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇಂದು ದೊಡ್ಡ ಮಟ್ಟದ ಖ್ಯಾತಿ, ಅಭಿಮಾನಿ ಬಳಗ ಹೊಂದಿರುವ ಅಮಿತಾಬ್ ಪ್ರಾರಂಭದ ದಿನಗಳಲ್ಲಿ ಅಷ್ಟೆ ಕಷ್ಟ, ಅವಮಾನಗಳನ್ನು ಎದುರಿಸಿದ್ದಾರೆ.

    ಇಂದು ಲೆಜೆಂಡ್ ಅಮಿತಾಬ್ ಎಂದು ಕರೆಸಿಕೊಳ್ಳುವ ಬಿಗ್ ಬಿ ಒಂದು ಕಾಲದಲ್ಲಿ ತೀರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. 1969ರಲ್ಲಿ ಬಣ್ಣದ ಲೋಕದ ಪಯಣ ಪ್ರಾರಂಭಿಸಿರುವ ಅಮಿತಾಬ್ ಆರಂಭ ದಿನಗಳಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ.

    1971ರ ನಂತರ ಅಮಿತಾಬ್ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಬಾಲಿವುಡ್ ನ ಸಕ್ಸಸ್ ಫುಲ್ ನಟನಾಗಿ ಹೊರಹೊಮ್ಮಿದರು. ಉತ್ತುಂಗದಲ್ಲಿದ್ದ ಬಿಗ್ ಬಿ ಅವರನ್ನು ಆಂಗ್ರಿ ಯಂಗ್ ಮ್ಯಾನ್ ಅಂತ ಕರೆಯಲು ಪ್ರಾರಂಭಿಸಿದರು. ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತ ಮುನ್ನುಗ್ಗುತ್ತಿದ್ದ ಅಮಿತಾಬ್ ನೋಡ ನೋಡುತ್ತಿದ್ದಂತೆ ಭಾರತದ ದೊಡ್ಡ ನಟನಾಗಿ ಬೆಳೆದು ನಿಂತರು. ಆದರೆ ಅಮಿತಾಬ್ ಮಾಡಿದ ಆ ಒಂದೇ ಒಂದು ಎಡವಟ್ಟು ಆರ್ಥಿಕವಾಗಿ ದಿವಾಳಿ ಏಳುವಂತೆ ಮಾಡಿತ್ತು. ಮುಂದೆ ಓದಿ..

    ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿರುವ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿರುವ ಮೆಗಾಸ್ಟಾರ್ ಅಮಿತಾಭ್ ಬಚ್ಚನ್

    ಸಾಲದ ಕೂಪಕ್ಕೆ ತಳ್ಳಿದ ಕನಸಿನ ಸಂಸ್ಥೆ

    ಸಾಲದ ಕೂಪಕ್ಕೆ ತಳ್ಳಿದ ಕನಸಿನ ಸಂಸ್ಥೆ

    ಅದು 1996ರ ಸಮಯ ಅಮಿತಾಬ್ ಸಿನಿಮಾಗಳು ಸಕ್ಸಸ್ ಕಾಣುತ್ತಿದ್ದಂತೆ ನಟನೆಯಿಂದ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿ ನಿರ್ಮಾಣ ಸಂಸ್ಥೆ ಪ್ರಾರಂಭ ಮಾಡುತ್ತಾರೆ. ಅಮಿತಾಬ್ ಬಚ್ಚನ್ ಕಾರ್ಪೊರೇಷನ್ ಲಿಮಿಟೆಡ್ ಅನ್ನು ಸ್ಥಾಪಿಸಿದರು. ಅಮಿತಾಬ್ ಅವರ ಈ ಕನಸಿನ ಯೋಜನೆ ಯಾವುದೇ ರೀತಿಯ ಆದಾಯ ತಂದುಕೊಟ್ಟಿಲ್ಲ. ಬದಲಿಗೆ ಈ ಸಂಸ್ಥೆ ಅಮಿತಾಬ್ ಅವರನ್ನು ಸಾಲದ ಕೂಪಕ್ಕೆ ತಳ್ಳಿತು.

    90 ಕೋಟಿ ರೂ ಸಾಲ ಮಾಡಿ, ಮನೆ ಮಾರಲು ಮುಂದಾದರು

    90 ಕೋಟಿ ರೂ ಸಾಲ ಮಾಡಿ, ಮನೆ ಮಾರಲು ಮುಂದಾದರು

    ಆಗ ಅಮಿತಾಬ್ ಬರೋಬ್ಬರಿ 90 ಕೋಟಿ ರೂ ಸಾಲ ಮಾಡುತ್ತಾರೆ. 2000ರಲ್ಲಿ ಬಾಲಿವುಡ್ ನ ಸೂಪರ್ ಸ್ಟಾರ್ ಅಮಿತಾಬ್ ದೊಡ್ಡ ಸಾಲಗಾರರಾಗಿ ಹೊರಹೊಮ್ಮುತ್ತಾರೆ. ಆರ್ಥಿಕ ಸಂಕಷ್ಟದಿಂದ ತಪ್ಪಿಸಿಕೊಳ್ಳಲು ತನ್ನ ಪ್ರೀತಿಯ ಪ್ರತೀಕ್ಷಾ ಬಂಗ್ಲೆಯನ್ನು ಮಾರಾಟ ಮಾಡಲು ಮುಂದಾಗಿದ್ದರು. ಆದರೆ ಕಾನೂನು ತೊಡಕುಗಳಿಂದ ಮನೆಯನ್ನು ಮಾರಾಟ ಮಾಡಲು ಸಹ ಸಾಧ್ಯವಾಗುವುದಿಲ್ಲ.

    ತೈಲಬೆಲೆ ಏರಿಕೆ ಬಗ್ಗೆ ಅಮಿತಾಬ್-ಅಕ್ಷಯ್ ಮೌನ; ಚಿತ್ರೀಕರಣಕ್ಕೆ ಅವಕಾಶ ನೀಡಲ್ಲವೆಂದು ಕಾಂಗ್ರೆಸ್ ಬೆದರಿಕೆತೈಲಬೆಲೆ ಏರಿಕೆ ಬಗ್ಗೆ ಅಮಿತಾಬ್-ಅಕ್ಷಯ್ ಮೌನ; ಚಿತ್ರೀಕರಣಕ್ಕೆ ಅವಕಾಶ ನೀಡಲ್ಲವೆಂದು ಕಾಂಗ್ರೆಸ್ ಬೆದರಿಕೆ

    ಬಂಗ್ಲೆ ಅಡ ಇಟ್ಟಿದ್ದ ಬಿಗ್ ಬಿ

    ಬಂಗ್ಲೆ ಅಡ ಇಟ್ಟಿದ್ದ ಬಿಗ್ ಬಿ

    ಅಮಿತಾಬ್ ಬಂಗ್ಲೆಯನ್ನು ಅಡಮಾನ ಇಡುವ ನಿರ್ಧಾರಕ್ಕೆ ಬರುತ್ತಾರೆ. ಪ್ರೀತಿಯ ಬಂಗ್ಲೆಯನ್ನು ಸಹಾರಾ ಇಂಡಿಯಾ ಫೈನಾನ್ಸ್ ಗೆ ಅಡ ಇಡುತ್ತಾರೆ. ಈ ಬಗ್ಗೆ ಅಮಿತಾಬ್ 2010ರಲ್ಲಿ ತನ್ನ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ. ' ಹತ್ತು ವರ್ಷಗಳ ಹಿಂದೆ 2000ನೇ ಇಸವಿಯಲ್ಲಿ ಇಡೀ ಜಗತ್ತು ಹೊಸ ಶತಮಾನವನ್ನು ಆಚರಿಸುತ್ತಿದ್ದಾಗ, ನನ್ನ ವಿನಾಶಕಾರಿ ಅದೃಷ್ಟವನ್ನು ಆಚರಿಸುತ್ತಿದ್ದೆ. ಸಿನಿಮಾಗಳಿಲ್ಲ, ಹಣವಿಲ್ಲ, ಕಂಪನಿ ಇಲ್ಲ ಜೊತೆಗೆ ಸಾಕಷ್ಟು ಕೇಸ್ ಗಳು' ಎಂದು ಬರೆದುಕೊಂಡಿದ್ದರು.

    ಕರಾಳದಿನಗಳ ಬಗ್ಗೆ ಅಮಿತಾಬ್ ಹೇಳಿದ್ದೇನು?

    ಕರಾಳದಿನಗಳ ಬಗ್ಗೆ ಅಮಿತಾಬ್ ಹೇಳಿದ್ದೇನು?

    ಕರಾಳ ದಿನಗಳ ಬಗ್ಗೆ ಅಮಿತಾಬ್ ಸಂದರ್ಶನದಲ್ಲಿ ಮಾತನಾಡಿ, 90 ಕೋಟಿ ಸಾಲ ತಲೆಮೇಲಿತ್ತು. 55 ಕಾನೂನು ಪ್ರಕರಣಗಳು ಇದ್ದವು. ಸಾಲ ಕೊಟ್ಟವರು ಪ್ರತಿದಿನ ಮನೆಯ ಬಾಗಿಲು ಬಡಿಯುತ್ತಿದ್ದರು. ಅದು ತುಂಬಾ ಮುಜುಗರವಾಗುವಂತ ಸಂಗತಿಯಾಗಿತ್ತು' ಎಂದು ಹೇಳಿದ್ದಾರೆ.

    'ಕೌನ್ ಬನೇಗಾ ಕರೋಡ್ ಪತಿ' ಶೋನಲ್ಲಿ ಅರ್ಥಿಕ ತಜ್ಞೆಯ ಸೌಂದರ್ಯ ಹೊಗಳಿ ಟ್ರೋಲ್ ಆದ ಅಮಿತಾಬ್'ಕೌನ್ ಬನೇಗಾ ಕರೋಡ್ ಪತಿ' ಶೋನಲ್ಲಿ ಅರ್ಥಿಕ ತಜ್ಞೆಯ ಸೌಂದರ್ಯ ಹೊಗಳಿ ಟ್ರೋಲ್ ಆದ ಅಮಿತಾಬ್

    Recommended Video

    Yash Next Movie : ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು? | Filmibeat Kannada
    ಅಮಿತಾಬ್ ಗೆ ಮರುಜೀವ ನೀಡಿದ 'ಕೌನ್ ಬನೇಗಾ ಕರೋಡ್ ಪತಿ' ಶೋ

    ಅಮಿತಾಬ್ ಗೆ ಮರುಜೀವ ನೀಡಿದ 'ಕೌನ್ ಬನೇಗಾ ಕರೋಡ್ ಪತಿ' ಶೋ

    ಬಳಿಕ ಅಮಿತಾಬ್ ಅವರ ಆರ್ಥಿಕ ಸ್ಥಿತಿ ಸುಧಾರಿಸಲು ಕಾರಣವಾಗಿದ್ದು, ಕೌನ್ ಬನೇಗ ಕರೋಡ್ ಪತಿ ಶೋ. ಈ ಶೋನಿಂದ ಅಮಿತಾಬ್ ಗೇಮ್ ಚೇಂಜರ್ ಆಗಿ ಹೊರಹೊಮ್ಮಿದರು. ಕರೋಡ್ ಪತಿಶೋನಿಂದ ಅಮಿತಾಬ್ ಮತ್ತೆ ಕರೋಡ್ ಪತಿಯಾಗಿ ಹೊರಹೊಮ್ಮಿದರು. ಅದೆ ಸಮಯದಲ್ಲಿ ಅಮಿತಾಬ್ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು. ಕರಾಳ ದಿನಗಳನ್ನು ದಾಟಿ ಬಿಗ್ ಬಿ ಮತ್ತೆ ಆರ್ಥಿಕವಾಗಿ ಸದೃಢರಾದರು.

    English summary
    When Bollywood Big B Amitabh Bachchan was debt 90 crores loan.
    Thursday, March 4, 2021, 14:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X