Just In
Don't Miss!
- Lifestyle
ದಿನ ಭವಿಷ್ಯ: ಶುಕ್ರವಾರದ ರಾಶಿಫಲ ಹೇಗಿದೆ ನೋಡಿ
- News
ಡ್ರಗ್ಸ್ ಪ್ರಕರಣ: ಜೈಲಿನಲ್ಲಿ ಜೀವಕ್ಕೆ ಬೆದರಿಕೆ ಇದೆ ಎಂದು ಬಿಜೆಪಿ ಯುವ ನಾಯಕಿ ಪಮೇಲಾ ಆರೋಪ
- Automobiles
ರ್ಯಾಪಿಡ್ ಬದಲಾಗಿ ಹೊಸ ಸಿ ಸೆಗ್ಮೆಂಟ್ ಸೆಡಾನ್ ಬಿಡುಗಡೆ ಮಾಡಲಿದೆ ಸ್ಕೋಡಾ
- Sports
ಭಾರತ vs ಇಂಗ್ಲೆಂಡ್: ಕೊಹ್ಲಿ ಜೊತೆಗಿನ ಮಾತಿನ ಚಕಮಕಿ ಬಗ್ಗೆ ಪ್ರತಿಕ್ರಿಯಿಸಿದ ಬೆನ್ ಸ್ಟೋಕ್ಸ್
- Finance
ಮತ್ತಷ್ಟು ಕಡಿಮೆಯಾಯ್ತು ಚಿನ್ನದ ಬೆಲೆ: ಮಾರ್ಚ್ 04ರ ಬೆಲೆ ಇಲ್ಲಿದೆ
- Education
UAS Dharwad Recruitment 2021: ಅರೆಕಾಲಿಕ ಉಪನ್ಯಾಸಕ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
2021ರಲ್ಲಿ ತೆರೆಗೆ ಬರಲು ಸಜ್ಜಾಗಿರುವ ಬಾಲಿವುಡ್ ಚಿತ್ರಗಳ ರಿಲೀಸ್ ದಿನಾಂಕ
ಕಳೆದ ವರ್ಷ ಕೊರೊನಾದಿಂದ ಅಂದುಕೊಂಡಿದ್ದ ಸಮಯಕ್ಕೆ ಸಿನಿಮಾಗಳನ್ನು ರಿಲೀಸ್ ಮಾಡಲು ಸಾಧ್ಯವಾಗಿರಲಿಲ್ಲ. ಕಳೆದ ವರ್ಷವೇ ತಯಾರಾಗಿದ್ದ ಚಿತ್ರಗಳು 2021ರಲ್ಲಿ ರಿಲೀಸ್ ಮಾಡಲು ಸಾಲುಗಟ್ಟಿ ನಿಂತಿದೆ. ಸೌತ್ ಇಂಡಸ್ಟ್ರಿಯಲ್ಲಿ ಬಹುತೇಕ ಎಲ್ಲ ಸ್ಟಾರ್ಸ್ ಚಿತ್ರಗಳು ಬಿಡುಗಡೆ ದಿನಾಂಕ ಲಾಕ್ ಮಾಡಿಕೊಂಡಿದೆ. ಕನ್ನಡ, ತೆಲುಗು ಹಾಗೂ ತಮಿಳಿನ ಕೆಲವು ಚಿತ್ರಗಳು ಡೇಟ್ ಘೋಷಣೆ ಮಾಡಿದೆ.
ಅದರಲ್ಲೂ ಪ್ಯಾನ್ ಇಂಡಿಯಾ ಚಿತ್ರಗಳು ಹೆಚ್ಚಾಗಿದೆ. ಈ ಬಿಟೌನ್‌ನಲ್ಲಿ ಸ್ಟಾರ್ಸ್ ಸಿನಿಮಾಗಳು ತೆರೆಗೆ ಬರಲು ಸಿದ್ಧವಿದೆ. ಹಾಗಾದ್ರೆ, 2021ರಲ್ಲಿ ಬಿಗ್ ಸ್ಕ್ರೀನ್ ಮೇಲೆ ಬರಲು ಸಜ್ಜಾಗಿರುವ ಹಿಂದಿ ಚಿತ್ರಗಳು ಯಾವುದು? ಯಾವ ಸಿನಿಮಾದ ಮೇಲೆ ಹೆಚ್ಚು ನಿರೀಕ್ಷೆ ಇದೆ? ಮುಂದೆ ಓದಿ...

ಈದ್ ಹಬ್ಬಕ್ಕೆ 'ರಾಧೇ'
ಸಲ್ಮಾನ್ ಖಾನ್ ನಟಿಸಿರುವ ರಾಧೇ ಸಿನಿಮಾ ಬಾಲಿವುಡ್ ಪಾಲಿಗೆ ದೊಡ್ಡ ಸಿನಿಮಾ. ಪ್ರಭುದೇವ ನಿರ್ದೇಶಿಸಿರುವ ಈ ಆಕ್ಷನ್ ಪ್ಯಾಕೇಜ್‌ನಲ್ಲಿ ಸಲ್ಮಾನ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಈದ್ ಹಬ್ಬಕ್ಕೆ (ಜುಲೈ ತಿಂಗಳು) ಸಲ್ಲು ರಾಧೇ ತೆರೆಗೆ ಬರಲು ಸಜ್ಜಾಗಿದೆ. ದಿಶಾ ಪಟಾನಿ, ಜಾಕಿ ಶ್ರಾಫ್, ರಣದೀಪ್ ಹೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
2021ರಲ್ಲಿ ರಿಲೀಸ್ ದಿನಾಂಕ ಕಾಯ್ದಿರಿಸಿದ ಸೌತ್ ಸ್ಟಾರ್ಸ್: ಯಾರು ಯಾವಾಗ ಬರ್ತಾರೆ?

ಸತ್ಯಮೇವ ಜಯತೆ 2
ಸೂಪರ್ ಹಿಟ್ ಸತ್ಯಮೇವ ಜಯತೆ ಚಿತ್ರದ ಮುಂದುವರಿದ ಭಾಗ ಬಿಡುಗಡೆಯಾಗಲು ಸಜ್ಜಾಗಿದೆ. ಜಾನ್ ಅಬ್ರಾಹಂ, ದಿವ್ಯ ಕೋಶ್ಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸತ್ಯಮೇವ ಜಯತೆ 2 ಸಿನಿಮಾ ಈದ್ ಹಬ್ಬದ ಪ್ರಯುಕ್ತ ಮೇ 14 ರಂದು ತೆರೆಕಾಣಲಿದೆ.

ಕಂಗನಾ 'ಧಾಕಡ್'
ಕಂಗನಾ ರಣಾವತ್ ನಟಿಸಿರುವ ಧಾಕಡ್ ಸಿನಿಮಾ ಅಕ್ಟೋಬರ್ 1 ರಂದು ಚಿತ್ರಮಂದಿರಕ್ಕೆ ಬರಲಿದೆ ಎಂದು ಪ್ರಕಟಿಸಲಾಗಿದೆ. ರಜನೀಶ್ ಘಾಯ್ ಈ ಚಿತ್ರ ನಿರ್ದೇಶಿಸಿದ್ದು, ಅರ್ಜುನ್ ರಾಂಪಾಲ್, ದಿವ್ಯ ದತ್ತ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಆರ್‌ಆರ್‌ಆರ್, ಅಣ್ಣಾತ್ತೆ ಬಳಿಕ ಪುಷ್ಪ ಚಿತ್ರದ ಬಿಡುಗಡೆ ದಿನಾಂಕವೂ ಘೋಷಣೆ

ಅಜಯ್ ದೇವಗನ್ 'ಮೈದಾನ್'
ಅಜಯ್ ದೇವಗನ್, ಕೀರ್ತಿ ಸುರೇಶ್, ಪ್ರಿಯಾಮಣಿ ನಟನೆಯ ಮೈದಾನ್ ಸಿನಿಮಾ ದಸರಾ ಹಬ್ಬದ ಪ್ರಯುಕ್ತ ತೆರೆಕಾಣಲಿದೆ. ಸ್ವತಃ ಚಿತ್ರತಂಡವೇ ಘೋಷಿಸಿರುವ ಪ್ರಕಾರ ಅಕ್ಟೋಬರ್ 15ಕ್ಕೆ ದೊಡ್ಡ ಪರದೆ ಮೇಲೆ ಎಂಟ್ರಿಯಾಗಲಿದೆ.

ಶಾಹೀದ್ ಕಪೂರ್ 'ಜೆರ್ಸಿ'
ಶಾಹೀದ್ ಕಪೂರ್ ನಟನೆಯ ಜೆರ್ಸಿ ಸಿನಿಮಾ ದೀಪಾವಳಿ ಹಬ್ಬಕ್ಕೆ ಬಿಡುಗಡೆಯಾಗಲಿದೆ. ನವೆಂಬರ್ 5 ರಂದು ಈ ಸಿನಿಮಾ ತೆರೆಗೆ ಬರಲಿದೆ. ನವೆಂಬರ್ 4 ರಂದು ರಜನಿಕಾಂತ್ ನಟನೆಯ ಅಣ್ಣಾತ್ತೆ ಸಿನಿಮಾ ರಿಲೀಸ್ ಆಗುತ್ತಿದೆ.

ಕ್ರಿಸ್‌ಮಸ್‌ಗೆ ಲಾಲ್‌ಸಿಂಗ್ ಚಡ್ಡಾ
ಅಮೀರ್ ಖಾನ್, ಕರೀನಾ ಕಪೂರ್ ನಟನೆಯಲ್ಲಿ ತಯಾರಾಗುತ್ತಿರುವ ಲಾಲ್ ಸಿಂಗ್ ಚಡ್ಡಾ ಚಿತ್ರವೂ ಕ್ರಿಸ್ ಮಸ್ ಹಬ್ಬಕ್ಕೆ ತೆರೆಗೆ ಬರಲಿದೆ ಎಂದು ಹೇಳಲಾಗಿದೆ. ಅಧಿಕೃತವಾಗಿ ರಿಲೀಸ್ ದಿನಾಂಕ ಘೋಷಿಸಿಲ್ಲವಾದರೂ ಈ ವರ್ಷಾಂತ್ಯಕ್ಕೆ ಅಮೀರ್ ಖಾನ್ ಎಂಟ್ರಿ ಪಕ್ಕಾ ಎನ್ನಲಾಗಿದೆ.

ಡಬ್ಬಿಂಗ್ ಚಿತ್ರಗಳ ಅಬ್ಬರವೂ ಜೋರಾಗಿದೆ
ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಸಿನಿಮಾ ಜುಲೈ 16ಕ್ಕೆ ಐದು ಭಾಷೆಯಲ್ಲಿ ತೆರೆಕಾಣುತ್ತಿದೆ. ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಅಕ್ಟೋಬರ್ 13ಕ್ಕೆ ರಿಲೀಸ್ ಆಗಲಿದೆ. ರಜನಿಕಾಂತ್ ನಟನೆಯ ಅಣ್ಣಾತ್ತೆ ಸಿನಿಮಾ ನವೆಂಬರ್ 4 ರಂದು ಬರಲಿದೆ.