For Quick Alerts
  ALLOW NOTIFICATIONS  
  For Daily Alerts

  ದೀಪಿಕಾ ಕೇಸರಿ ಬಿಕಿನಿ ತೊಟ್ರೆ ಬಾಯ್‌ಕಾಟ್, ಕಂಗನಾ ಕೇಸರಿ ಮೇಲೆ ಬೂಟುಗಾಲಿಟ್ರೆ ಬಾಯ್‌ಕಾಟ್ ಇಲ್ವಾ?

  |

  ಚಿತ್ರರಂಗಗಳಲ್ಲಿ ಬ್ಯಾನ್, ಬಾಯ್‌ಕಾಟ್ ಎಂಬ ಟ್ರೆಂಡ್‌ಗಳು ಇತ್ತೀಚೆಗೆ ಹೆಚ್ಚಾಗಿಬಿಟ್ಟಿವೆ. ಆದರೆ ಈ ಬಾಯ್‌ಕಾಟ್ ಹಾಗೂ ಬ್ಯಾನ್ ಕೆಲವರ ವಿಷಯದಲ್ಲಿ ಕೆಲಸ ಮಾಡಿದರೆ ಇನ್ನೂ ಕೆಲವರ ವಿಷಯದಲ್ಲಿ ಸದ್ದು ಮಾಡಲಿಲ್ಲ. ಇನ್ನು ಈಗಂತೂ ಈ ಬಾಯ್‌ಕಾಟ್ ಎನ್ನುವುದು ಪ್ರತಿವಾರವೂ ಕಾಮನ್ ಆಗಿ ಕೇಳಿಬರುತ್ತಿದೆ. ಚಿತ್ರದ ನಟ ಅಥವಾ ನಟಿ ಜನರು ಇಷ್ಟ ಪಡುವ ಅಥವಾ ಗೌರವಿಸುವ ಯಾವುದಾದರೂ ಒಂದು ಅಂಶವನ್ನು ವಿರೋಧಿಸಿದರೆ ಅಥವಾ ಅರಿವಿಲ್ಲದಂತೆಯೇ ಅದಕ್ಕೆ ಅಪಮಾನವಾಗುವಂತಹ ಕೆಲಸ ಮಾಡಿದರೂ ಸಾಕು ಅವರ ವಿರುದ್ಧ ಬಾಯ್‌ಕಟ್ ಟ್ರೆಂಡ್ ಬಹುಬೇಗನೇ ಶುರುವಾಗಿಬಿಡುತ್ತೆ.

  ಇಂತಹದ್ದೇ ಸಾಲಿಗೆ ಇತ್ತೀಚೆಗಷ್ಟೆ ಸೇರ್ಪಡೆಗೊಂಡಿರುವ ಚಿತ್ರ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ನಟನೆಯಲ್ಲಿ ತಯಾರಾಗಿರುವ ಚಿತ್ರ ಪಠಾಣ್. ಈ ಚಿತ್ರದ ಬೇಷರಮ್ ರಂಗ್ ಎಂಬ ಹಾಡನ್ನು ಚಿತ್ರತಂಡ ಇತ್ತೀಚೆಗಷ್ಟೆ ಬಿಡುಗಡೆಗೊಳಿಸಿತ್ತು, ಈ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ತೊಟ್ಟು ಮಾದಕ ಡಾನ್ಸ್ ಮಾಡುತ್ತಿದ್ದರೆ, ಶಾರುಖ್ ಖಾನ್ ಕಡು ಹಸಿರು ಬಣ್ಣದ ಬಟ್ಟೆ ತೊಟ್ಟು ಕುಣಿದಿದ್ದಾರೆ.

  ಹೀಗಾಗಿ ಇದು ಹಿಂದೂ ಧರ್ಮಕ್ಕೆ ಮಾಡಿದ ಅವಮಾನ, ಈ ಚಿತ್ರವನ್ನು ಯಾರೂ ಸಹ ನೋಡಬಾರದು ಎಂದು ಬಾಯ್‌ಕಾಟ್ ಪಠಾಣ್ ಟ್ರೆಂಡ್ ದೊಡ್ಡ ಮಟ್ಟದಲ್ಲಿ ಆರಂಭಗೊಂಡಿದೆ. ಇನ್ನು ಈ ಅಭಿಯಾನಕ್ಕೆ ಕೆಲವರು ಬೆಂಬಲ ಸೂಚಿಸಿದರೆ ಇನ್ನೂ ಕೆಲವರು ಸಿನಿಮಾ ಬಣ್ಣದ ಲೋಕ, ಇಲ್ಲಿ ಬಣ್ಣಗಳು ಕಾಮನ್, ಇದು ಉದ್ದೇಶಪೂರ್ವಕವಲ್ಲ ಬಿಡಿ ಎಂದು ಬಾಯ್‌ಕಟ್ ವಿರುದ್ಧ ಮಾತನಾಡಿದ್ದಾರೆ. ದೀಪಿಕಾ ಕೇಸರಿ ಬಿಕಿನಿಯಿಂದ ಈ ರೀತಿಯ ವಿವಾದ ಉಂಟಾದ ಬೆನ್ನಲ್ಲೇ ಇದೇ ರೀತಿ ಈ ಹಿಂದೆ ಇತರೆ ಸೆಲೆಬ್ರಿಟಿಗಳು ಯಾರಾದರೂ ಕೇಸರಿ ಬಣ್ಣಕ್ಕೆ ಅವಮಾನವಾಗುವಂತಹ ಕೆಲಸಗಳನ್ನು ಮಾಡಿದ್ರಾ ಎಂದು ಹುಡುಕಲು ಆರಂಭಿಸಿದ್ದಾರೆ. ಸದ್ಯ ಈ ಹುಡುಕಾಟದಲ್ಲಿ ನಟಿ ಕಂಗನಾ ರನೌತ್ ಸಿಕ್ಕಿ ಬಿದ್ದಿದ್ದಾರೆ.

  ಕಂಗನಾ ವಿರುದ್ಧ ಕೂಗು ಯಾವಾಗ?

  ಕಂಗನಾ ವಿರುದ್ಧ ಕೂಗು ಯಾವಾಗ?

  ಇದೇ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಲಾಕ್ ಅಪ್ ಎಂಬ ಟಿವಿ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಂಡಿತ್ತು. ಈ ಕಾರ್ಯಕ್ರಮವನ್ನು ನಿರೂಪಕಿಯಾಗಿ ಮುನ್ನಡೆಸಿದ್ದ ಕಂಗನಾ ರನೌತ್ ಈ ಪೋಸ್ಟರ್‌ನಲ್ಲಿ ಕೇಸರಿ ಬಟ್ಟೆ ಧರಿಸಿ ಕೆಳಗೆ ಕುಳಿತಿದ್ದ ವ್ಯಕ್ತಿಯ ಮೇಲೆ ಬೂಟುಗಾಲನ್ನು ಇಟ್ಟಿದ್ದರು. ಈ ಪೋಸ್ಟರ್ ಅನ್ನು ಕೇಸರಿ ಬಿಕಿನಿ ವಿವಾದದ ಬಳಿಕ ಹುಡುಕಿರುವ ನೆಟ್ಟಿಗರು ದೀಪಿಕಾ ಪಡುಕೋಣೆ ವಿರುದ್ಧ ಕಿಡಿಕಾರಿದಂತೆ ಕಂಗನಾ ವಿರುದ್ಧ ದನಿ ಎತ್ತುವುದು ಯಾವಾಗ ಎಂದು ಕೇಸರಿ ಬಣ್ಣವನ್ನು ಇಟ್ಟುಕೊಂಡು ದೀಪಿಕಾ ವಿರುದ್ಧ ಟ್ರೆಂಡ್ ನಡೆಸಿದವರಿಗೆ ಟಾಂಗ್ ನೀಡಿದ್ದಾರೆ.

  ಕಂಗನಾ ಬೂಟುಗಾಲಿಟ್ರೆ ಬಾಯ್‌ಕಾಟ್ ಮಾಡಲ್ವಾ?

  ಕಂಗನಾ ಬೂಟುಗಾಲಿಟ್ರೆ ಬಾಯ್‌ಕಾಟ್ ಮಾಡಲ್ವಾ?

  ಇನ್ನೂ ಕೆಲವರು ಈ ಹಳೆ ಪೋಸ್ಟರ್ ಕುರಿತು ಪ್ರತಿಕ್ರಿಯಿಸಿದ್ದು ಈಗ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಧರಿಸಿರುವುದು ಹಿಂದೂ ಧರ್ಮಕ್ಕೆ ಆದ ಅವಮಾನ ಎಂದು ಬಾಯ್‌ಕಾಟ್ ಟ್ರೆಂಡ್ ನಡೆಸಿದವರು ತಿಂಗಳುಗಳ ಹಿಂದೆಯೇ ಕೇಸರಿ ಬಣ್ಣದ ಮೇಲೆ ಬೂಟುಗಾಲಿಟ್ಟ ಕಂಗನಾ ರನೌತ್ ಅವರನ್ನು ಬಾಯ್‌ಕಟ್ ಏಕೆ ಮಾಡಿರಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಇಲ್ಲಿ ಶಾರುಖ್ ಖಾನ್ ನಟನೆಯ ಚಿತ್ರವನ್ನು ತಡೆಯಲು ಕೇಸರಿ ಬಿಕಿನಿ ವಿವಾದ ಸೃಷ್ಟಿಸಲಾಗಿದೆ ಅಷ್ಟೇ, ಹಾಗಾಗಿಯೇ ಇಷ್ಟು ದಿನಗಳ ಕಾಲ ಬೇರೆ ಚಿತ್ರಗಳಲ್ಲಿ ಕೇಸರಿ ಬಣ್ಣಕ್ಕೆ ಎಷ್ಟೇ ಅವಮಾನವಾದರೂ ತುಟಿ ಬಿಚ್ಚದವರು ಇಂದು ಸಿಡಿದೆದ್ದಿದ್ದಾರೆ ಎಂದು ಬಾಯ್‌ಕಟ್ ಟ್ರೆಂಡ್ ವಿರೋಧಿಗಳು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

  ಅಕ್ಷಯ್ ಕುಮಾರ್ ಚಿತ್ರದಲ್ಲೂ ಇತ್ತು ಕೇಸರಿ ಬಿಕಿನಿ

  ಅಕ್ಷಯ್ ಕುಮಾರ್ ಚಿತ್ರದಲ್ಲೂ ಇತ್ತು ಕೇಸರಿ ಬಿಕಿನಿ

  ಇನ್ನು ದೀಪಿಕಾ ಪಡುಕೋಣೆ ಕೇಸರಿ ವಿವಾದದ ಬಳಿಕ ಹೊರಬಂದ ಕೇಸರಿಗೆ ಅವಮಾನವಾದಂತಹ ದೃಶ್ಯಗಳಲ್ಲಿ ಅಕ್ಷಯ್ ಕುಮಾರ್ ಚಿತ್ರದಲ್ಲಿ ನಟಿ ಕತ್ರಿನಾ ಕೈಫ್ ಕೇಸರಿ ಬಿಕಿನಿ ಧರಿಸಿ ಹೆಜ್ಜೆ ಹಾಕಿದ್ದರು ಹಾಗೂ ಸ್ವತಃ ಅಕ್ಷಯ್ ಕುಮಾರ್ ಕೇಸರಿ ಕುರ್ತಾ ಧರಿಸಿ ಹುಡುಗಿಯರ ಮಧ್ಯೆ ಕುಣಿಯುವ ಸಂದರ್ಭಗಳಿದ್ದವು. ಈ ದೃಶ್ಯಗಳನ್ನು ಹಂಚಿಕೊಂಡಿದ್ದ ನೆಟ್ಟಿಗರು ಈ ಚಿತ್ರಗಳನ್ನೇಕೆ ಬಾಯ್‌ಕಾಟ್ ಮಾಡಲಿಲ್ಲ ಎಂದು ಟ್ರೋಲ್ ಮಾಡಿದ್ದರು.

  English summary
  Why no one boycotted Kangana Ranuat when she put her shoe on saffron color?. Take a look
  Saturday, December 17, 2022, 14:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X