»   » ಶಾರೂಖ್-ಐಶ್ ಇಬ್ಬರು ಸಿನಿಮಾ ರಿಜೆಕ್ಟ್ ಮಾಡ್ತಿರೋದೇಕೆ?

ಶಾರೂಖ್-ಐಶ್ ಇಬ್ಬರು ಸಿನಿಮಾ ರಿಜೆಕ್ಟ್ ಮಾಡ್ತಿರೋದೇಕೆ?

Posted By:
Subscribe to Filmibeat Kannada

ಬಾಲಿವುಡ್ ಸೂಪರ್ ಹಿಟ್ ಜೋಡಿಗಳಲ್ಲಿ ಶಾರೂಖ್ ಖಾನ್ ಮತ್ತು ಐಶ್ವರ್ಯ ರೈ ಜೋಡಿ ಕೂಡ ಒಂದು. ಆದ್ರೆ, ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡು ವರ್ಷಗಳೇ ಕಳೆದಿವೆ. ಹೀಗಾಗಿ, ಮತ್ತೆ ಇವರಿಬ್ಬರು ಒಟ್ಟಿಗೆ ಸಿನಿಮಾ ಯಾವಾಗ ಮಾಡ್ತಾರೆ ಎಂಬ ಕುತೂಹಲ ಅಭಿಮಾನಿಗಳನ್ನ ಕಾಡುತ್ತಿದೆ.

ಹೀಗಿರುವಾಗ, ಇವರಿಬ್ಬರ ಬಗ್ಗೆ ಬಾಲಿವುಡ್ ನಲ್ಲೊಂದು ಸುದ್ದಿ ಹರಿದಾಡುತ್ತಿದೆ. ಐಶ್ ಮತ್ತು ಶಾರೂಖ್ ಮಧ್ಯೆ ಮನಸ್ಥಾಪ ಇದೆ. ಹೀಗಾಗಿ, ಅವರ ಒಟ್ಟಿಗೆ ಸಿನಿಮಾ ಮಾಡುತ್ತಿಲ್ಲ ಎನ್ನಲಾಗಿದೆ. ಆದ್ರೆ, ಈ ಎಲ್ಲಾ ಊಹಾಪೋಹಾಗಳಿಗೂ ಉತ್ತರ ಸಿಕ್ಕಿದೆ.

why Shahrukh Khan and Aishwarya Rai are rejecting Films

ಇತ್ತೀಚೆಗಷ್ಟೇ ಐಶ್, ಶಾರೂಖ್, ಶಾರೂಖ್ ಪತ್ನಿ ಗೌರಿ ಖಾನ್ ಮತ್ತು ಫರಾ ಖಾನ್ ಒಟ್ಟಿಗೆ ಪಾರ್ಟಿಯಲ್ಲಿ ಕಾಣಿಸಿಕೊಂಡಿರುವ ಫೋಟೋ ವೈರಲ್ ಆಗಿದ್ದು, ಇವರಿಬ್ಬರು ಮಧ್ಯೆ ಯಾವ ಮನಸ್ಥಾಪವೂ ಇಲ್ಲ. ಇಬ್ಬರ ಸಂಬಂಧ ಚೆನ್ನಾಗಿದೆ. ಆದಷ್ಟೂ ಬೇಗ ಸಿನಿಮಾ ಮಾಡ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಹಾಗಿದ್ರೆ, ಇಷ್ಟು ದಿನ ಯಾಕೆ ಪರಸ್ಪರ ಸಿನಿಮಾಗಳನ್ನ ರಿಜೆಕ್ಟ್ ಮಾಡಿದ್ರು ಎಂಬುದಕ್ಕೆ ಉತ್ತರ ಸಿಕ್ಕಿದ್ದು, ಶಾರೂಖ್ ಮತ್ತು ಐಶ್ ಸಿನಿಮಾ ಮಾಡ್ತಿದ್ದಾರೆ ಅಂದ್ರೆ, ಅದು ದೊಡ್ಡ ಮಟ್ಟದ ಸಿನಿಮಾ ಆಗಿರಬೇಕು ಮತ್ತು ಸ್ಕ್ರಿಪ್ಟ್ ಇಷ್ಟವಾಗಬೇಕು, ಆದ್ರೆ, ಇದುವರೆಗೂ ಅಂತಹ ಸ್ಕ್ರಿಪ್ಟ್ ಬಂದಿಲ್ಲ. ಹಾಗಾಗಿ, ಸಿನಿಮಾ ಮಾಡೋಕೆ ಆಗಿಲ್ಲವಂತೆ.

ಐಶ್ವರ್ಯ ರೈ ಆಕ್ಟ್ ಮಾಡಿ ಅಂತ ಕೇಳಿದ್ರೂ ರಿಜೆಕ್ಟ್ ಮಾಡಿದ ನಟ

why Shahrukh Khan and Aishwarya Rai are rejecting Films

ಕಳೆದ ವರ್ಷ ತೆರೆ ಕಂಡಿದ್ದ 'ಎ ದಿಲ್ ಹೈ ಮುಷ್ಕಿಲ್' ಚಿತ್ರದಲ್ಲಿ ಕೊನೆಯದಾಗಿ ಶಾರೂಖ್ ಮತ್ತು ಐಶ್ ಅಭಿನಯಿಸಿದ್ದರು. ಆದ್ರೆ, ರಣ್ಬೀರ್ ಕಪೂರ್, ಅನುಷ್ಕಾ ಶರ್ಮಾ ಮತ್ತು ಐಶ್ವರ್ಯ ರೈ ಮುಖ್ಯ ಭೂಮಿಕೆಯಲ್ಲಿದ್ದ ಚಿತ್ರದಲ್ಲಿ ಶಾರೂಕ್ ಅತಿಥಿ ಮಾತ್ರ ಮಾಡಿದ್ದರು ಅಷ್ಟೇ.

ಈ ಹಿಂದೆ ಶಾರೂಕ್ ಮತ್ತು ಐಶ್ವರ್ಯ ಜೋಡಿ 'ಜೋಶ್', 'ಹಮ್ ತುಮಾರೆ ಹೈನಾ ಸನಮ್', 'ದೇವದಾಸ್', 'ಶಕ್ತಿ' ಅಂತಹ ಸಿನಿಮಾಗಳಲ್ಲಿ ಒಟ್ಟಿಗೆ ತೆರೆ ಹಂಚಿಕೊಂಡಿದ್ದರು.

English summary
Here's Why Aishwarya Rai Bachchan & Shahrukh Khan Are rejecting Films With Each Other.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada