For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಗೆ ಪದಾರ್ಪಣೆ ಮಾಡ್ತಾರಾ ಅಕ್ಷಯ್ ಕುಮಾರ್ ಪುತ್ರ ಆರವ್.?

  By Harshitha
  |

  ದಿವಂಗತ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಬಾಲಿವುಡ್ ಗೆ ಎಂಟ್ರಿಕೊಟ್ಟಿದ್ದಾಯ್ತು. ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಸದ್ಯ ಬಣ್ಣದ ಬದುಕಿಗೆ ಕಾಲಿಡುತ್ತಿದ್ದಾರೆ. ಇವರಿಬ್ಬರ ಸಾಲಿಗೆ, ಅಕ್ಷಯ್ ಕುಮಾರ್ ಪುತ್ರ ಆರವ್ ಕೂಡ ಸೇರ್ತಾರಾ ಎಂಬ ಪ್ರಶ್ನೆ ಬಿಟೌನ್ ಪ್ರಿಯರಿಗೆ ಕಾಡುತ್ತಿದೆ.

  ಖತರೋಂಕೆ ಕಿಲಾಡಿ ಅಕ್ಷಯ್ ಕುಮಾರ್ ಪುತ್ರ ಆರವ್ ಈಗಾಗಲೇ ಮಾರ್ಷಲ್ ಆರ್ಟ್ಸ್ ಕಲಿತಿದ್ದಾರೆ. ನೋಡಲು ಫಿಟ್ ಆಗಿ ಕಾಣುವ ಆರವ್ ಗೆ ಕ್ಯಾಮರಾ ಕಂಡ್ರೆ ಸ್ವಲ್ಪ ಕೂಡ ಭಯ ಇಲ್ಲ.

  ಫೋರ್ಬ್ಸ್ ಪಟ್ಟಿಯಲ್ಲಿ ಅಕ್ಷಯ್, ಸಲ್ಮಾನ್: ಇವರಿಬ್ಬರ ಸಂಭಾವನೆ ಎಷ್ಟು ಅಂತೀರಾ.?ಫೋರ್ಬ್ಸ್ ಪಟ್ಟಿಯಲ್ಲಿ ಅಕ್ಷಯ್, ಸಲ್ಮಾನ್: ಇವರಿಬ್ಬರ ಸಂಭಾವನೆ ಎಷ್ಟು ಅಂತೀರಾ.?

  ಏರ್ ಪೋರ್ಟ್ ಗಳಲ್ಲಿ ಅಪ್ಪ-ಅಮ್ಮನ ಜೊತೆಗೆ ಹೋಗುವಾಗ ಕ್ಯಾಮರಾ ಕಣ್ಣುಗಳಿಗೆ ಸಲೀಸಾಗಿ ಪೋಸ್ ಕೊಡುವ ಆರವ್ ಗೆ ಸಿನಿಮಾ ರಂಗದಲ್ಲಿ ಇಂಟ್ರೆಸ್ಟ್ ಇದ್ಯಾ.? ಈ ಪ್ರಶ್ನೆಯನ್ನ ನೇರವಾಗಿ ಅಕ್ಷಯ್ ಕುಮಾರ್ ಅವರಿಗೆ ಕೇಳಲಾಯ್ತು. ಅದಕ್ಕೆ ಅಕ್ಷಯ್ ಕುಮಾರ್ ಕೊಟ್ಟ ಉತ್ತರ ಇದು -

  ''ಆರವ್ ಇನ್ನೂ ವಯಸ್ಸಿನಲ್ಲಿ ಚಿಕ್ಕವನು. ಓದುವುದರಲ್ಲಿ ಮಾತ್ರ ಮುಂದಿದ್ದಾನೆ. ಸಿನಿಮಾ ಇಂಡಸ್ಟ್ರಿ ಬಗ್ಗೆ ಅವನಿಗೆ ಇಷ್ಟ ಇದ್ಯೋ, ಇಲ್ವೋ ಗೊತ್ತಿಲ್ಲ. ಆದ್ರೆ, ನಾನು ಬಲವಂತ ಮಾಡಲ್ಲ. ಮುಂಬೈನಲ್ಲಿ ಓದು ಮುಗಿದ ಬಳಿಕ ಅವನು ಮುಂದಿನ ವಿದ್ಯಾಭ್ಯಾಸಕ್ಕಾಗಿ ಲಂಡನ್ ಗೆ ತೆರಳುತ್ತಿದ್ದಾನೆ. ಆರವ್ ಏನಾಗಲು ಬಯಸುತ್ತಾನೋ, ಅದಕ್ಕೆ ಬೆಂಬಲ ಖಂಡಿತ ಇರುತ್ತದೆ'' ಅಂತಾರೆ ಅಕ್ಷಯ್ ಕುಮಾರ್.

  ಸದ್ಯ ಅಕ್ಷಯ್ ಕುಮಾರ್ ಅಭಿನಯದ 'ಗೋಲ್ಡ್' ಸಿನಿಮಾ ಆಗಸ್ಟ್ 15 ರಂದು ತೆರೆಗೆ ಬರಲಿದೆ.

  English summary
  Will Akshay Kumar's son Aarav make his debut in Bollywood.?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X