»   » ಸಲ್ಮಾನ್ ಮನೆ ಮುಂದೆ ಹೈಡ್ರಾಮಾ: ಆತ್ಮಹತ್ಯೆಗೆ ಮುಂದಾದ 'ಪಾಗಲ್' ಅಭಿಮಾನಿ

ಸಲ್ಮಾನ್ ಮನೆ ಮುಂದೆ ಹೈಡ್ರಾಮಾ: ಆತ್ಮಹತ್ಯೆಗೆ ಮುಂದಾದ 'ಪಾಗಲ್' ಅಭಿಮಾನಿ

Posted By:
Subscribe to Filmibeat Kannada

ಸ್ಟಾರ್ ನಟರಿಗೆ ಎಂತೆಂಥ 'ಪಾಗಲ್' ಅಭಿಮಾನಿಗಳು ಇರ್ತಾರೆ, ಹೇಗೆಲ್ಲ ತಮ್ಮ ಅಭಿಮಾನದ ಪರಾಕಾಷ್ಟೆ ಮೆರೆಯುತ್ತಾರೆ ಎಂಬುದಕ್ಕೆ ಒಂದು ಉದಾಹರಣೆ ಇಲ್ಲಿದೆ.

ಅಂದು ಮಟಮಟ ಮಧ್ಯಾಹ್ನ (ದಿನಾಂಕದ ಬಗ್ಗೆ ಖಚಿತ ಮಾಹಿತಿ ಇಲ್ಲ). ಬಾಲಿವುಡ್ ನಟ ಸಲ್ಮಾನ್ ಖಾನ್ ವಾಸವಿರುವ ಮುಂಬೈನ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಗೇಟ್ ಮುಂದೆ ನಾಲ್ಕು ಕಬ್ಬಿಣದ ರಾಡ್ ಗಳನ್ನು ಹಿಡಿದುಕೊಂಡು ಯುವತಿಯೊಬ್ಬಳು ಪ್ರತ್ಯಕ್ಷವಾದಳು.

ಗ್ಯಾಲಕ್ಸಿ ಅಪಾರ್ಟ್ಮೆಂಟ್ ಗೇಟ್ ನ ಹಿಡಿದು ಆ ಯುವತಿ ಜಗ್ಗಿದಾಗ, ಇದ್ದದ್ದು ಓರ್ವ ಸೆಕ್ಯೂರಿಟಿ ಗಾರ್ಡ್ ಮಾತ್ರ. ಇನ್ನೊಬ್ಬ ಸೆಕ್ಯೂರಿಟಿ ಗಾರ್ಡ್ ಊಟ ಮಾಡಲು ಹೊರ ಹೋಗಿದ್ದರು.

Woman gets into Salman Khans building and Threatens to commit suicide

ಕಬ್ಬಿಣದ ರಾಡ್ ಗಳನ್ನು ಹಿಡಿದು ತಂದಿದ್ದ ಆ ಯುವತಿ ಯಾರು ಎಂದು ಸೆಕ್ಯೂರಿಟಿ ಗಾರ್ಡ್ ಕೇಳುವಷ್ಟರಲ್ಲಿ, ಹೇಗೋ ಗೇಟ್ ನ ತೆಗೆದು ಆ ಯುವತಿ ಸೀದಾ ಸಲ್ಮಾನ್ ಖಾನ್ ಫ್ಲಾಟ್ ಕಡೆಗೆ ಬಿರ್ರನೆ ಓಡಿದ್ದಾಳೆ.

ಹೋಲ್ ಸೇಲ್ ಆಗಿ ಎಲ್ಲರನ್ನೂ ಫೂಲ್ ಮಾಡಿದ ಸಲ್ಮಾನ್ ಖಾನ್.!

ಸಲ್ಮಾನ್ ಖಾನ್ ಫ್ಲಾಟ್ ಮುಂದೆ ಬಂದ ಕೂಡಲೆ, ಬಾಗಿಲನ್ನ ಜೋರಾಗಿ ತಟ್ಟಿದ್ದಾಳೆ. ಆಗ ಸಲ್ಲು ಮನೆಯಲ್ಲಿ ಅಡುಗೆ ಕೆಲಸದವರನ್ನು ಬಿಟ್ಟು ಬೇರೆ ಯಾರೂ ಇರಲಿಲ್ಲ. ಬಿಡದೆ ಬಾಗಿಲನ್ನ ಬಿಡಿಯುತ್ತಿರುವವರು ಯಾರು ಎಂದು ಅಡುಗೆ ಕೆಲಸದಾಕೆ ಓಡಿ ಬಂದು ಬಾಗಿಲು ತೆಗೆಯುವಷ್ಟರಲ್ಲಿ, ಆ ಯುವತಿ 'ಸಲ್ಮಾನ್ ಖಾನ್ ನನ್ನ ಗಂಡ' ಅಂತ ಕೂಗಾಡುತ್ತಾ ಸೀದಾ ಟೆರೆಸ್ ಕಡೆ ಮುಖ ಮಾಡಿದ್ದಾಳೆ.

''ಸಲ್ಮಾನ್ ಖಾನ್ ನನ್ನ ಪತಿ'' ಅಂತ ಹೇಳ್ತಾ ಟೆರೆಸ್ ನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಆ ಯುವತಿ ಮುಂದಾಗಿದ್ದಾಳೆ. ತಕ್ಷಣ ಸೆಕ್ಯೂರಿಟಿ ಗಾರ್ಡ್ ಹಾಗೂ ಅಪಾರ್ಟ್ಮೆಂಟ್ ನ ಕೆಲ ಮನೆಯವರು ಅಗ್ನಿ ಶಾಮಕ ದಳಕ್ಕೆ ಫೋನ್ ಮಾಡಿ ಆ ಯುವತಿಯನ್ನ ರಕ್ಷಿಸಿದ್ದಾರೆ.

ಆ ಯುವತಿಯ ಮಾನಸಿಕ ಸ್ಥಿತಿ ಸರಿಯಿರಲಿಲ್ಲ ಎಂಬುದು ಪ್ರತ್ಯಕ್ಷದರ್ಶಿಗಳ ಮಾತು. ಈ ಘಟನೆಯಿಂದಾಗಿ ಅಪಾರ್ಟ್ಮೆಂಟ್ ನಲ್ಲಿ ವಾಸಿಸುವ ಮಂದಿ ಗಾಬರಿ ಗೊಂಡಿದ್ದಾರೆ.

English summary
Woman gets into Salman Khan's building and Threatens to commit suicide.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X