Just In
Don't Miss!
- Lifestyle
ದಿನ ಭವಿಷ್ಯ: ನಿಮ್ಮ ರಾಶಿಗೆ ಶನಿವಾರ ದಿನ ಹೇಗಿರಲಿದೆ ನೋಡಿ
- News
ದಿಢೀರ್ ಕೋರ್ಟ್ ಮೆಟ್ಟಿಲೇರಿದ್ದಕ್ಕೆ ಕಾರಣ ನೀಡಿದ ಸಚಿವ ಕೆ. ಸುಧಾಕರ್
- Education
KSCCF Recruitment 2021: 45 ಲೆಕ್ಕಿಗರು, ಎಫ್ಡಿಎ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಮಾರ್ಚ್ ತಿಂಗಳಿನಲ್ಲಿ ಹ್ಯುಂಡೈ ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ರಿಯಾಯಿತಿ
- Sports
ಐಎಸ್ಎಲ್: ಸಮಬಲ ಸಾಧಿಸಿದ ಗೋವಾ ಎಫ್ಸಿ, ಮುಂಬೈ ಎಫ್ಸಿ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 05ರ ಮಾರುಕಟ್ಟೆ ದರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಒಂದು ಟ್ವೀಟ್ ನಿಮ್ಮ ಐಕ್ಯತೆಯನ್ನು ಕೆರಳಿಸಿತೆ? ಟ್ರೆಂಡ್ ಆಯ್ತು #AntiNationalBollywood.!
ರೈತರ ಬೆಂಬಲಕ್ಕೆ ನಿಂತ ವಿದೇಶಿ ಸೆಲೆಬ್ರಿಟಿಗಳ ವಿರುದ್ಧ ಬಾಲಿವುಡ್ ಇಂಡಸ್ಟ್ರಿಯ ಸ್ಟಾರ್ ಕಲಾವಿದರು ಗುಡುಗಿದ್ದಾರೆ. 'ಇದು ನಮ್ಮ ದೇಶದ ಆಂತರಿಕ ಸಮಸ್ಯೆ, ಇದರಲ್ಲಿ ಬೇರೆಯವರು ಮಧ್ಯಪ್ರವೇಶಿಸುವ ಅಗತ್ಯವಿಲ್ಲ' ಎಂದು ಹಲವರು ಟ್ವಿಟ್ಟರ್ ಮೂಲಕ ಏಕತೆಯನ್ನು ಪ್ರದರ್ಶಿಸಿದ್ದಾರೆ.
ರೈತರ ಪ್ರತಿಭಟನೆ ಹಾಗೂ ದೇಶದ ಏಕತೆ ವಿಚಾರದಲ್ಲಿ ಇದ್ದಕ್ಕಿದ್ದಂತೆ ಚರ್ಚೆ ಹುಟ್ಟುಹಾಕುತ್ತಿರುವ ಬಾಲಿವುಡ್ ಸೆಲೆಬ್ರಿಟಿಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ #AntiNationalBollywood ಎಂಬ ಅಭಿಯಾನ ಶುರುವಾಗಿದೆ. ಅಕ್ಷಯ್ ಕುಮಾರ್, ಅಜಯ್ ದೇವಗನ್, ಕಂಗನಾ ರಣಾವತ್, ಕರಣ್ ಜೋಹರ್, ಕ್ರಿಕೆಟಿಗರಾದ ಸಚಿನ್.... ಇಷ್ಟು ದಿನ ನೀವು ಎಲ್ಲಿದ್ರಿ ಎಂದು ಪ್ರಶ್ನಿಸುತ್ತಿದ್ದಾರೆ.
'ರಿಹಾನ್ನ ಪರಿಣಾಮ', ಅಖಾಡಕ್ಕಿಳಿದ ಬಾಲಿವುಡ್ ಸೆಲೆಬ್ರಿಟಿಗಳು: ಡ್ಯಾಮೇಜ್ ಕಂಟ್ರೋಲ್?
ಕೇಂದ್ರ ಸರ್ಕಾರ ಮತ್ತು ರೈತರ ನಡುವಿನ ಸಂಘರ್ಷ ಈಗ ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು ಹಾಗೂ ಬಾಲಿವುಡ್ ಸೆಲೆಬ್ರಿಟಿಗಳು ಎನ್ನುವಂತೆ ಬಿಂಬಿತವಾಗುತ್ತಿದೆ. ರಾಜಕೀಯದಿಂದ ಸದಾ ಅಂತರ ಕಾಯ್ದುಕೊಳ್ಳುವ ಸಿನಿಮಾರಂಗ ರೈತರ ಹೋರಾಟದ ವಿಚಾರದಲ್ಲಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಮುಂದೆ ಓದಿ...

ಒಂದು ಟ್ವೀಟ್ ನಿಮ್ಮ ಏಕತೆ ಕೆರಳಿಸಿತೆ?
ಕಳೆದು ಎರಡು ತಿಂಗಳಿಗೂ ಅಧಿಕ ಸಮಯದಿಂದ ದೇಶದಲ್ಲಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ರೈತರ ಕಷ್ಟಗಳಿಗೆ ಸರ್ಕಾರ 'ಏನ್ರಪ್ಪಾ ನಿಮ್ಮ ಸಮಸ್ಯೆ' ಅಂತಾನೂ ಕೇಳಿಲ್ಲ. ಇದುವರೆಗೂ ಒಬ್ಬ ಬಾಲಿವುಡ್ ನಟನೂ ರೈತರ ಪ್ರತಿಭಟನೆಗೆ ಕೈ ಜೋಡಿಸಿಲ್ಲ, ಕನಿಷ್ಠ ಟ್ವಿಟ್ಟರ್ ಮೂಲಕನೂ ಬೆಂಬಲ ಕೊಟ್ಟಿಲ್ಲ. ಆದ್ರೆ, ವಿದೇಶದಲ್ಲಿ ಯಾರೋ ಒಬ್ಬರು ಒಂದೇ ಒಂದು ಟ್ವೀಟ್ ಮಾಡಿದ ತಕ್ಷಣ 'ನಿಮ್ಮೆಲ್ಲರ ಏಕತೆಯನ್ನು ಕೆರಳಿತೆ?'' ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ರೈತರ ಹೋರಾಟ ಬೆಂಬಲಿಸಿದ ಪಾಪ್ ಗಾಯಕಿ ವಿರುದ್ಧ 'ಫೂಲ್' ಎಂದು ಕಿಡಿಕಾರಿದ ಕಂಗನಾ

ಬಾಲಿವುಡ್ ಮಂದಿಯನ್ನು ಪ್ರಶ್ನಿಸಿದ ತಾಪ್ಸಿ ಪನ್ನು
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ತಾಪ್ಸಿ ಪನ್ನು ಟ್ವೀಟ್ ಮಾಡಿ ಬಾಲಿವುಡ್ ಮಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ''ಒಂದು ಟ್ವೀಟ್ ನಿಮ್ಮ ಐಕ್ಯತೆಯನ್ನು ಒಡೆಯುವುದಾದರೆ, ಒಂದು ಜೋಕ್ ನಿಮ್ಮ ನಂಬಿಕೆಯನ್ನು ಅಲುಗಾಡಿಸುವುದಾದರೆ, ಒಂದು ಘಟನೆ ನಿಮ್ಮ ಧಾರ್ಮಿಕ ನಂಬಿಕೆಗೆ ಧಕ್ಕೆ ತರುವುದಾದರೆ, ನೀವು ನಿಮ್ಮ ನಂಬಿಕೆಗಳನ್ನು ಗಟ್ಟಿಮಾಡಿಕೊಳ್ಳಬೇಕಿದೆಯೇ ಹೊರತು ಬೇರೆಯವರಿಗೆ ಆದರ್ಶದ ಪಾಠ ಮಾಡುವ ಶಿಕ್ಷಕರಾಗಬಾರದು'' ಎಂದು ತಿರುಗೇಟು ನೀಡಿದ್ದಾರೆ.

ಶೇಮ್ ಆನ್ ಬಾಲಿವುಡ್?
ನಮ್ಮ ದೇಶದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ವಿದೇಶದಲ್ಲಿರುವ ಸೆಲೆಬ್ರಿಟಿಗಳು ಬೆಂಬಲ ಕೊಡ್ತಿದ್ದಾರೆ. ಆದರೆ, ಇಲ್ಲಿರುವ ಸೆಲೆಬ್ರಿಟಿಗಳು ಸರ್ಕಾರಕ್ಕೆ ನಿಯತ್ತು ತೋರಿಸುತ್ತಿದ್ದಾರೆ ಎಂದು ನೆಟ್ಟಿಗರು ಗರಂ ಆಗಿದ್ದಾರೆ. ಶೇಮ್ ಬಾಲಿವುಡ್ ಹಾಗೂ ಥ್ಯಾಂಕ್ ಯೂ ಹಾಲಿವುಡ್ ಎಂದು ಅಭಿಯಾನ ಮಾಡ್ತಿದ್ದಾರೆ.

ರಿಹಾನ್ನ ಟ್ವೀಟ್‌ಗೆ ಇಷ್ಟೊಂದು ಮಾನ್ಯತೆ ಕೊಡುವ ಅಗತ್ಯ ಏನಿತ್ತು?
ಅಮೆರಿಕನ್ ಪಾಪ್ ಗಾಯಕಿ ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಅಷ್ಟಕ್ಕೂ, ರಿಹಾನ್ನಾ ಟ್ವೀಟ್‌ಗೆ ಏಕೆ ಇಷ್ಟು ಮಾನ್ಯತೆ ಕೊಡುವುದು ಏನಿತ್ತು? ಆಕೆ ಭಾರತ ದೇಶಕ್ಕೆ ಸಂಬಂಧಿಸಿದವರಲ್ಲ, ಅಮೆರಿಕ ಸರ್ಕಾರಕ್ಕೆ ಅಥವಾ ಅಮೆರಿಕ ಸರ್ಕಾರದ ಜೊತೆಯೂ ಯಾವುದೇ ಸಂಬಂಧ ಹೊಂದಿಲ್ಲ. ಆಕೆಯ ಟ್ವೀಟ್‌ಗೆ ಕೇಂದ್ರ ಸರ್ಕಾರ ಪ್ರತಿಕ್ರಿಯಿಸದೇ ಇರಬಹುದಿತ್ತು ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.