For Quick Alerts
  ALLOW NOTIFICATIONS  
  For Daily Alerts

  ತಾಯ್ತನದ ಸುಖ ಅನುಭವಿಸಲು ಸನ್ನಿ ಲಿಯೋನ್ ಸಿದ್ಧ!

  |

  ಇದು ಎಷ್ಟೋ ಜನರ ಪಾಲಿಗೆ ಶಾಕಿಂಗ್ ನ್ಯೂಸ್, ಎಷ್ಟೋ ಜನರ ಪಾಲಿಗೆ ನೋವಿನ ಸುದ್ದಿ.. ಅಂಥಾದ್ದೇನಪ್ಪಾ ಅಂದ್ರಾ... ಸರಿಯಾಗಿ ಓದಿ.. ಪಡ್ಡೆಗಳ ನಿದ್ದೆ ಹಾಳು ಮಾಡಿದ್ದ, ಮಾಡುತ್ತಿರುವ ಸನ್ನಿ ಲಿಯೋನ್ ತಾಯಿಯಾಗುತ್ತಿದ್ದಾರಂತೆ! ಹೌದು ಇದು ಸತ್ಯ,,, ಇದು ಸತ್ಯ...

  ಒಂದು ಕಾಲದ ವಯಸ್ಕರ ಚಿತ್ರದ ನಾಯಕಿ ಬಾಲಿವುಡ್ ಗೆ ಪ್ರವೇಶ ಮಾಡಿ ನಟನಾ ಸಾಮರ್ಥ್ಯವನ್ನು ತೋರಿಸಿದ್ದು ಇತಿಹಾಸ. ಬಾಲಿವುಡ್ ಇದೀಗ ಎರಡನೇ ಬಾಣಂತನಕ್ಕೆ ಸಿದ್ಧವಾಗಬೇಕಿದೆ. ರಾಣಿ ಮುಖರ್ಜಿ ತಾಯಿ ಪಟ್ಟಕ್ಕೆ ಏರಿದ ನಂತರ ಇದೀಗ ಸನ್ನಿ ಲಿಯೋನ್ ಸರದಿ.[ಕನ್ನಡಕ್ಕೆ ಬಂದ ಸನ್ನಿ ಮಾಡಿದ್ದೇನು?]

  ಮಾಧ್ಯಮವೊಂದರ ಜತೆ ಮಾತನಾಡಿದ ಸನ್ನಿ, ನಾನು ಮತ್ತು ನನ್ನ ಗಂಡ ಡೆನಿಯಲ್ ವೇಬರ್ ತಂದೆ ತಾಯಿ ಪಟ್ಟ ಪಡೆದುಕೊಳ್ಳಲು ಸಿದ್ಧರಾಗುತ್ತಿದ್ದೇವೆ ಎಂದು ಹೇಳಿದ್ದಾಳೆ. ಬಿಗ್ ಬಾಸ್ ಶೋಗೆ ಕಳುಹಿಸಿಕೊಟ್ಟಿದ್ದೆ ಡೇನಿಯಲ್, ಆತ ಹೇಳಿದಂತೆ ನಾನು ನಡೆದುಕೊಳ್ಳದಿದ್ದರೆ ಇನ್ನು 'ಅಲ್ಲಿಯೇ' ಇರುತ್ತಿದ್ದೆ. ಡೇನಿಯಲ್ ಗಂಡನಿಗಿಂತ ಹೆಚ್ಚಾಗಿ ಉತ್ತಮ ಸ್ನೇಹಿತ ಎಂದು ಹಾಡಿ ಹೊಗಳಿದ್ದಾಳೆ ಸನ್ನಿ.[ಯುವ ಜನತೆಯ ಮೇಲೆ ಸಮೂಹ 'ಸನ್ನಿ']

  ಪ್ರತಿಯೊಬ್ಬ ನಟ ನಟಿಯರಿಗೂ ಖಾಸಗಿ ಬದುಕು ಇದ್ದೇ ಇರುತ್ತದೆ. ಅದನ್ನು ಅನುಭವಿಸಬೇಕು, ಆನಂದ ಪಡೆಯಬೇಕು.. ನಮಗೂ ಇಲ್ಲೊಂದು ಬ್ರೇಕ್ ಬೇಕು ಅನಿಸುತ್ತಿದೆ ಎಂಬುದು ಸನ್ನಿ ಉವಾಚ. ಸನ್ನಿ ಮಾತು ಕೇಳಿ ಕೆಲ ಬಾಲಿವುಡ್ ನಿರ್ಮಾಪಕರ ಎದೆಯಲ್ಲಿ ಢವ ಢವ ಶುರುವಾಗಿದೆ. ಇನ್ನೊಂದೆರಡು ಚಿತ್ರದಲ್ಲಿ ಎದೆಗಾರಿಕೆ ಪ್ರದರ್ಶನ ಮಾಡಿ ಕಾಂಚಾಣ ಜೇಬಿಗಿಳಿಸಿಕೊಳ್ಳೋಣ ಅಂತಿದ್ದವರಿಗೆ ಮಾತ್ರ ಇದು ಅರಗಿಸಿಕೊಳ್ಳಲಾಗದ ಸುದ್ದಿ!

  ಅನುಮಾನವೇ ಇಲ್ಲ

  ಅನುಮಾನವೇ ಇಲ್ಲ

  ಸನ್ನಿ ಲಿಯೋನ್ ಮತ್ತು ಡೆನಿಯಲ್ ವೇಬರ್ ಹಾಟೆಸ್ಟ್ ಕಪಲ್ ಎಂದೇ ಹೆಸರು ಗಳಿಸಿದವರು. ಇವರಿಗೆ ಮಗು ಆಗುತ್ತದೆ ಎಂಬುದು ನಿಜಕ್ಕೂ ದೊಡ್ಡ ಸುದ್ದಿಯೇ!

   ಗಂಡನೇ ಮ್ಯಾನೇಜರ್

  ಗಂಡನೇ ಮ್ಯಾನೇಜರ್

  ನಿಮಗೆ ಗೊತ್ತಿರಲಿಕ್ಕಿಲ್ಲ. ಸನ್ನಿ ಲಿಯೋನ್ ಅಭಿನಯ ಮಾಡಬೇಕಾದ ಚಿತ್ರಗಳ ಕತೆಯನ್ನು ಅಂತಿಮ ಮಾಡೋದು ಆಕೆಯ ಗಂಡನೇ, ವೇಬರ್ ಮ್ಯಾನೇಜರ್ ಕೂಡಾ.

  ಮ್ಯಾಂಡೇಟ್ ಮುಖಪುಟದಲ್ಲಿ ಕಾಣಿಸಿಕೊಂಡಿದ್ದ ಜೋಡಿ

  ಮ್ಯಾಂಡೇಟ್ ಮುಖಪುಟದಲ್ಲಿ ಕಾಣಿಸಿಕೊಂಡಿದ್ದ ಜೋಡಿ

  ಸನ್ನಿ ಲಿಯೋನ್ ಮತ್ತು ಡೆನಿಯಲ್ ವೇಬರ್ ಮ್ಯಾಂಡೇಟ್ ಮುಖಪುಟದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಹಾಟ್ ಆಗಿ ಫೋಸ್ ಕೂಡಾ ನೀಡಿದ್ದರು.

  ಸನ್ನಿ ಸಹಮತ

  ಸನ್ನಿ ಸಹಮತ

  ಮಾಧ್ಯಮದೊಂದಿಗೆ ಮಾತನಾಡುತ್ತ ಸನ್ನಿ ನನಗೆ ಯಾವುದೇ ಆಫರ್ ಗಳನ್ನು ವೇಬರ್ ಒಪ್ಪಿಗೆ ಇಲ್ಲದೇ ನಾನು ಒಪ್ಪಿಕೊಳ್ಳಲ್ಲ ಎಂದು ಹೇಳುತ್ತಾ ಅತೀವ ಉತ್ಕಟ ಪ್ರೀತಿ ವ್ಯಕ್ತಪಡಿಸುತ್ತಾಳೆ.

  ಸನ್ನಿ ಮುಂದಿನ ಸಿನಿಮಾ

  ಸನ್ನಿ ಮುಂದಿನ ಸಿನಿಮಾ

  ಸನ್ನಿ ಮಿಲಪ್ ಜಾವೇರಿಯ 'ಮಸ್ತ್ ಜಾದೆ' ಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತುಷಾರ್ ಕಪೂರ್ ಮತ್ತು ವೀರ್ ದಾಸ್ ಜತೆ ಸನ್ನಿ ತೆರೆ ಹಂಚಿಕೊಳ್ಳಲಿದ್ದಾರೆ.

  Read in English:
  English summary
  Recently, actress Rani Mukerji gave birth to a baby girl named 'Adira' and now we hear adult star-turned-actress Sunny Leone is all set to have her first baby with hubby Daniel Weber. While talking to DNA, Sunny herself made this confession that Sunny along with hubby, has been thinking of becoming parents.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X