For Quick Alerts
  ALLOW NOTIFICATIONS  
  For Daily Alerts

  ನಟಿಯರ ಬಾಡಿಗೆ ತಾಯ್ತನ, ಬಡ ಮಹಿಳೆಯರ ಮೇಲೆ ದೌರ್ಜನ್ಯ ಎಂದ ಲೇಖಕಿ

  |

  ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ದಂಪತಿ ಕೆಲ ದಿನಗಳ ಹಿಂದಷ್ಟೆ ಸರೊಗಸಿ (ಬಾಡಿಗೆ ತಾಯ್ತನ)ದ ಮೂಲಕ ಮಗು ಪಡೆದು ಪೋಷಕರಾಗಿದ್ದಾರೆ.

  ಪ್ರಿಯಾಂಕಾ ಚೋಪ್ರಾ-ನಿಕ್ ಜೋನಸ್ ತಾವು ಸರೊಗಸಿ ವಿಧಾನದ ಮೂಲಕ ಪೋಷಕರಾಗಿರುವ ವಿಷಯ ಘೋಷಿಸಿದ ಬಳಿಕ ಈ ಬಾಡಿಗೆ ತಾಯ್ತನದ ವಿಷಯ ಮತ್ತೆ ಚರ್ಚೆಗೆ ಬಂದಿದೆ.

  ಬಾಡಿಗೆ ತಾಯ್ತನದ ಮೂಲಕ ಪೋಷಕರಾಗುವ ಸೆಲೆಬ್ರಿಟಿಗಳನ್ನು ಕಟುವಾಗಿ ಖಂಡಿಸಿರುವ ಜನಪ್ರಿಯ ಲೇಖಕಿ ತಸ್ಲಿಮಾ ನಸ್ರಿನ್, ''ಬಾಡಿಗೆ ತಾಯ್ತನ ಬಡ ಮಹಿಳೆಯರ ಮೇಲೆ ನಡೆವ ದೌರ್ಜನ್ಯ'' ಎಂದಿದ್ದಾರೆ.

  ಸರೊಗಸಿ ಮಾದರಿಯಲ್ಲಿ ದಂಪತಿಗಳು, ಆರೋಗ್ಯವಂತ ಮಹಿಳೆಯೊಬ್ಬಾಕೆಯನ್ನು ಆರಿಸಿ ಆಕೆಗೆ ಹಣ ನೀಡಿ ಆಕೆಯಿಂದ ಮಗುವನ್ನು ಪಡೆದು ತಾವು ಪೋಷಕರಾಗುತ್ತಾರೆ. ಹಣ ಪಡೆವ ಬಾಡಿಗೆ ತಾಯಿ ಒಂಬತ್ತು ತಿಂಗಳು ಹೊತ್ತು, ಹೆತ್ತ ಮಗುವನ್ನು ದಂಪತಿಗಳಿಗೆ ನೀಡಿ ಆ ಮಗುವಿನೊಂದಿಗೆ ಸಂಬಂಧ ಕಡಿದುಕೊಳ್ಳುತ್ತಾಳೆ.

  ಈ ಸರೊಗಸಿ ವಿಧಾನವನ್ನು ತೀವ್ರವಾಗಿ ಖಂಡಿಸಿರುವ ತಸ್ಲಿಮಾ ನಸ್ರಿನ್, ''ಸಮಾಜದಲ್ಲಿ ಬಡ ಮಹಿಳೆಯರು ಇದ್ದಾರೆ ಎಂಬ ಕಾರಣಕ್ಕೆ ಸೆರೋಗಸಿ ಚಾಲ್ತಿಯಲ್ಲಿದೆ. ಶ್ರೀಮಂತರಿಗೆ ತಾವು ಸುಕವಾಗಿರಲು ಸಮಾಜದಲ್ಲಿ ಬಡತನ ಎಂಬುದಿರಬೇಕು. ಬಡತನ ತೊಲಗಲು ಅವರು ಬಯಸುವುದಿಲ್ಲ. ನಿಮಗೆ (ಸೆಲೆಬ್ರಿಟಿಗಳು) ನಿಜವಾಗಿಯೂ ಮಗುವನ್ನು ಹೊಂದುವುದು ಇಷ್ಟವಾದಲ್ಲಿ ಅನಾಥ ಮಗುವನ್ನು ದತ್ತು ಪಡೆಯಿರಿ. ಮಕ್ಕಳು ನಿಮ್ಮ ಗುಣಲಕ್ಷಣಗಳನ್ನು ಅನುವಂಶಿಕವಾಗಿ ಪಡೆಯಬೇಕು. ಹೀಗೆ ಸೆರೊಗಸಿ ಮಾದರಿಯಲ್ಲಿ ಮಗು ಪಡೆಯುವುದು ಸ್ವಾರ್ಥ ಮತ್ತು ನಾರ್ಸಿಸ್ ಧೋರಣೆ'' ಎಂದಿದ್ದಾರೆ.

  ಸರೊಗಸಿ ಮಾದರಿಯಲ್ಲಿ ಮಗು ಪಡೆಯುವುದರ ಬಗ್ಗೆ ಮೊದಲಿನಿಂದಲೂ ಪರ ವಿರೋಧ ಚರ್ಚೆ ಇದೆ. ಹಣವಂತರು ತಮ್ಮ ಶ್ರಮ ಕಡಿಮೆ ಮಾಡಿಕೊಳ್ಳಲು ಬಡ ಮಹಿಳೆಯರಿಗೆ ಹಣದಾಸೆ ತೋರಿಸಿ ಗರ್ಭ ಧರಿಸುವಂತೆ ಮಾಡುತ್ತಾರೆ ಎಂಬ ವಾದದ ಮೂಲಕ ಹಲವರು ಸೆರೋಗಸಿಯನ್ನು ವಿರೋಧಿಸಿತ್ತಾ ಬಂದಿದ್ದಾರೆ.

  ಭಾರತದಲ್ಲಿಯೇ ಹಲವು ಸೆಲೆಬ್ರಿಟಿಗಳು ಸರೊಗಸಿ ಮಾದರಿಯಲ್ಲಿ ಮಗು ಪಡೆದು ಪೋಷಕರಾಗಿದ್ದಾರೆ. ಕರಣ್ ಜೋಹರ್, ಶಾರುಖ್ ಖಾನ್, ಪ್ರೀತಿ ಜಿಂಟಾ, ಏಕ್ತಾ ಕಪೂರ್, ತುಷಾರ್ ಕಪೂರ್, ಸನ್ನಿ ಲಿಯೋನ್, ಶ್ರೇಯಸ್ ತಲಪಡೆ ಇನ್ನೂ ಕೆಲವರು ಇದೇ ಮಾದರಿಯಲ್ಲಿ ಪೋಷಕರಾಗಿದ್ದಾರೆ.

  ಬಾಡಿಗೆ ತಾಯ್ತನಕ್ಕೆ ಒಪ್ಪುವ ಮಹಿಳೆಯರಿಗೆ ದುಬಾರಿ ಮೊತ್ತದ ಸಂಭಾವನೆಯನ್ನು ಈ ಸೆಲೆಬ್ರಿಟಿಗಳು ನೀಡುತ್ತಾರೆ. ಸರೊಗಸಿ ವಿಧಾನದಲ್ಲಿ ಮಕ್ಕಳನ್ನು ಹೆತ್ತು ಕೊಡಲು ಹಲವು ಮಹಿಳೆಯರು ಸಾಲುಗಟ್ಟಿದ್ದಾರೆ ಎನ್ನಲಾಗುತ್ತದೆ.

  English summary
  Writer Taslima Nasreen strongly oppose Surrogacy parenthood of rich celebrities. She said If you want to rise children then adopt a homeless.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion